More

  ಬಿಗ್​​ಬಾಸ್​​ ವಿನ್ನರ್​​ನಿಂದ ಔಟ್​ ಆದ ಸಚಿನ್ ತೆಂಡೂಲ್ಕರ್; ವಿಡಿಯೋ ವೈರಲ್

  ನವದೆಹಲಿ: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಕ್ರೀಡೆಗೆ ಅವರ ಅಪ್ರತಿಮ ಕೊಡುಗೆಗಳು ಮತ್ತು ಇಂದಿಗೂ ಸಾಟಿಯಿಲ್ಲ. ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳ  ಸಚಿನ್​ ಅವರ ಆಟದ ವೈಖರಿಯನ್ನು ಮೆಚ್ಚುತ್ತಾರೆ. ಅವರು ಬ್ಯಾಟ್ ಹಿಡಿದು ಮೈದಾನಕ್ಕೆ ಎಂಟ್ರಿ ಕೊಟ್ಟರೆ ಸಾಕು ಅಭಿಮಾನಿಗಳು ಶಿಳ್ಳೆ ಹೊಡೆಯಲು ಪ್ರಾರಂಭಿಸುತ್ತಾರೆ.  ಏಕೆಂದರೆ ತೆಂಡೂಲ್ಕರ್ ಮೈದಾನಕ್ಕೆ ಕಾಲಿಟ್ಟಾಗ ಮ್ಯಾಜಿಕ್ ಆಗುತ್ತದೆ ಎನ್ನುವುದು ಗೊತ್ತಿರುವ ವಿಚಾರವಾಗಿದೆ.  ಆದರೆ ಇಂತಹ ಆಟಗಾರನನ್ನೆ ಬಿಗ್‌ಬಾಸ್ 17ರ ವಿನ್ನರ್ ಮುನಾವರ್ ಫಾರೂಖಿ ಅದ್ಭುತ ಬೌಲಿಂಗ್ ಮೂಲಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ವಿಕೆಟ್ ಕಬಳಿಸಿದ್ದಾರೆ. ಸಚಿನ್ ಔಟ್​ ಆಗುತ್ತಿದ್ದಂತೆ ಇಡೀ ಕ್ರೀಡಾಂಗಣವೇ ಸ್ತಬ್ಧವಾಗಿದೆ.

  ಇಂಡಿಯನ್ ಸ್ಟ್ರೀಟ್ ಸೂಪರ್ ಲೀಗ್ (ISPL) ನ ಉದ್ಘಾಟನೆ ಕ್ರಿಕೆಟ್ ದಂತಕಥೆಗಳು ಮತ್ತು ಸೆಲೆಬ್ರಿಟಿಗಳ ಝೇಂಕಾರದ ನಡುವೆ ಭವ್ಯವಾದ ಆರಂಭವನ್ನು ಪಡೆದುಕೊಂಡಿದೆ. ಥಾಣೆಯ ದಾದೋಜಿ ಕೋನದೇವ್ ಸ್ಟೇಡಿಯಂನಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮೆಗಾಪವರ್ ಸ್ಟಾರ್ ರಾಮ್ ಚರಣ್, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ಟೀಂ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ, ಕಾಲಿವುಡ್ ಸ್ಟಾರ್ ಹೀರೋ ಸೂರ್ಯ, ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತಿತರರು ಭಾಗವಹಿಸಿದ್ದರು.

  ಮುಂಬೈನಲ್ಲಿ ಆಯೋಜನೆಗೊಂಡಿರುವ ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ ಟೂರ್ನಿ ಇದೀಗ ಭಾರಿ ಕುತೂಹಲ ಕೆರಳಿಸಿದೆ.ಟೂರ್ನಿ ಆರಂಭಕ್ಕೂ ಮುನ್ನ ಆಯೋಜಿಸಿದ್ದ ಈ ಪಂದ್ಯದಲ್ಲಿ ಮಾಸ್ಟರ್ 11 ಹಾಗೂ ಖಿಲಾಡಿ 11 ತಂಡಗಳು ಮುಖಾಮುಖಿಯಾಗಿತ್ತು. ಮಾಸ್ಟರ್ ಇಲೆವೆನ್ ತಂಡವನ್ನು ಸಚಿನ್ ತೆಂಡೂಲ್ಕರ್ ಮುನ್ನಡೆಸಿದರೆ, ಅಕ್ಷಯ್ ಕುಮಾರ್ ಕಿಲಾಡಿ ತಂಡವನ್ನು ಮುನ್ನಡೆಸಿದರು. ಈ ಪಂದ್ಯದಲ್ಲಿ ಮಾಸ್ಟರ್ ಬ್ಲಾಸ್ಟರ್ ತಮ್ಮ ಟ್ರೇಡ್ ಮಾರ್ಕ್ ಹೊಡೆತಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದರು. 

  16 ಎಸೆತಗಳಲ್ಲಿ 30 ರನ್ ಗಳಿಸಿ ಉತ್ತಮ ಸ್ವಿಂಗ್ ತೋರಿದರು. ಹಿಂದಿ ಬಿಗ್ ಬಾಸ್ ವಿಜೇತ ಮುನಾವರ್ ಫಾರೂಕಿ ಅದ್ಭುತ ಬೌಲಿಂಗ್ ಮಾಡಿದರು. ಆದರೆ ಮುನಾವರ್ ಫಾರೂಕಿ ಎಸೆತದಲ್ಲಿ ಸಿಕ್ಸರ್ ಸಿಡಿಸಿಲು ಯತ್ನಿಸಿದ ಸಚಿನ್ ತೆಂಡೂಲ್ಕರ್ ಶಾರ್ಟ್ ಥರ್ಡ್ ಮ್ಯಾನ್‌ಗೆ ಕ್ಯಾಚ್ ನೀಡಿ ವಿಕೆಟ್ ಕೈಚೆಲ್ಲಿದರು.ಸಚಿನ್ ವಿಕೆಟ್ ಪತನ ಕ್ರೀಡಾಂಗಣವನ್ನೇ ಸ್ತಬ್ಧ ಮಾಡಿತ್ತು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts