More

    ಬಿಗ್​ಬಾಸ್​ ಶೋ ಪ್ರತಿ ಎಪಿಸೋಡ್​ಗೆ ನಾಗಾರ್ಜುನ್​ ಪಡೆಯುವ ಸಂಭಾವನೆ ಕೇಳಿದ್ರೆ ಶಾಕ್​ ಆಗ್ತಿರಾ!

    ಹೈದರಾಬಾದ್​: ವಿವಾದಿತ ರಿಯಾಲಿಟಿ ಶೋ ಬಿಗ್​ಬಾಸ್,​ ತೆಲುಗಿನಲ್ಲಿ ಮತ್ತೊಮ್ಮೆ ಶೀಘ್ರದಲ್ಲಿ ಬರುವುದಾಗಿ ಸ್ಟಾರ್​ ಮಾ ಚಾನೆಲ್​ ಖಚಿತಪಡಿಸಿದೆ. ಮೂರನೇ ಆವೃತ್ತಿ ನಿರೂಪಣೆ ಮಾಡಿದ್ದ ಅಕ್ಕಿನೇನಿ ನಾಗಾರ್ಜುನ್​ ಅವರೇ ನಾಲ್ಕನೇ ಆವೃತ್ತಿಯ ಬಿಗ್​ಬಾಸ್​ ಹೋಸ್ಟ್​ ಮಾಡಲು ತಯಾರಿ ಮಾಡಿಕೊಂಡಿದ್ದಾರೆ.

    ಈಗಾಗಲೇ ಕಾರ್ಯಕ್ರಮದ ಲೋಗೋ ಬಿಡುಗಡೆಯಾಗಿದ್ದು ಹೆಚ್ಚಿನ ನೀರಿಕ್ಷೆ ಮೂಡಿಸಿದೆ. ಇತ್ತೀಚಿನ ಬೆಳವಣಿಗೆಯೆಂದರೆ ನಾಗಾರ್ಜುನ್​ ಅವರು ಪ್ರತಿ ಎಪಿಸೋಡ್​ಗೆ 12 ಲಕ್ಷ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎಂಬುದು ತಿಳಿದುಬಂದಿದೆ. ಇದೇ ಕಾಲಿವುಡ್​ನಲ್ಲೀಗ ಹಾಟ್​ ನ್ಯೂಸ್​ ಆಗಿದೆ.

    ಇದನ್ನೂ ಓದಿ: ಸುಳ್ಳು ಹೇಳಿ ಬಾಯ್​ಫ್ರೆಂಡ್​​ ನೋಡಲು ಹೋದ ಬ್ಯೂಟಿಷಿಯನ್ ದುರಂತ ಅಂತ್ಯ: ಅಸಲಿ ಕಾರಣ ಬಹಿರಂಗ!​

    ಈಗಾಗಲೇ ಸ್ಪರ್ಧಿಗಳ ಹೆಸರು ಸಹ ಹರಿದಾಡುತ್ತಿದೆ. ಅದರಲ್ಲಿ ನಟಿ ಪೂನಂ ಬಜ್ವಾ ಪಾಲ್ಗೊಳ್ಳುವುದು ಪಕ್ಕಾ ಎನ್ನಲಾಗಿದೆ. ಇದರೊಂದಿಗೆ ಕರೊನಾ ನಡುವೆಯೂ ಶೋ ಏರ್ಪಡಿಸುತ್ತಿರುವುದು ವಿವಾದಕ್ಕೆ ಎಡೆಮಾಡಿಕೊಟ್ಟಿದ್ದು, ಯಾವ ರೀತಿ ಕಾರ್ಯಕ್ರಮ ನಡೆಸಿ ಕೊಡುತ್ತಾರೆ ಎಂಬುದೇ ಈಗ ಪ್ರಶ್ನೆಯಾಗಿ ಉಳಿದಿದೆ.

    ಸಿನಿಮಾ ವಿಚಾರಕ್ಕೆ ಬಂದರೆ ನಾಗಾರ್ಜುನ್​ ಅವರು ಸದ್ಯ ವೈಲ್ಡ್​ ಡಾಗ್​ ಚಿತ್ರದಲ್ಲಿ ತನಿಖಾಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. (ಏಜೆನ್ಸೀಸ್​)

    ಮುಂಬೈ ತಲುಪಿರುವ ಬಿಹಾರ ಪೊಲೀಸರು; ರಿಯಾ ಮನೆ ಬಾಗಿಲು ಬಡಿಯುತ್ತಾರಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts