More

    ಲಿಯೋನಾ ದೇಶದ್ರೋಹ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್: ಕ್ರಿಶ್ಚಿಯನ್​ ಧರ್ಮಕ್ಕೆ ಮತಾಂತರಗೊಂಡು ನಕ್ಸಲ್​ ಗುಂಪಿನೊಂದಿಗೆ ಸೇರಿಕೊಂಡಿದ್ದಳಾ ಪಾಕ್​ ಪ್ರಿಯೆ?

    ಬೆಂಗಳೂರು: ನಿನ್ನೆ ಫ್ರೀಡಂ ಪಾರ್ಕ್​ನಲ್ಲಿ ನಡೆದ ಸಿಎಎ ಮತ್ತು ಎನ್​ಆರ್​ಸಿ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದ ಅಮೂಲ್ಯಾ ಲಿಯೋನಾ ಪ್ರಕರಣದಲ್ಲಿ ಹೊಸ ಟ್ವಿಸ್ಟ್​ ಸಿಕ್ಕಿದೆ. ಆರೊಪಿಯ ಬಗ್ಗೆ ಬೆಂಗಳೂರು ಮಹಾನಗರ ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್​ ಮೂರು ಡೌಟ್​ಗಳನ್ನು ಎತ್ತಿ ಹಿಡಿದಿದ್ದಾರೆ.

    ಅಮೂಲ್ಯಾ ಲಿಯೋನಾ ಮೂಲತಃ ಹಿಂದೂ ಧರ್ಮದವಳಾಗಿದ್ದು ಆಕೆ ಕ್ರಿಶ್ಚಿಯನ್​ ಧರ್ಮಕ್ಕೆ ಮತಾಂತರಗೊಂಡಿದ್ದಾಳೆ ಎನ್ನಲಾಗಿದೆ. ಮತಾಂತರವಾಗಿರುವ ಆಕೆಗೆ ಕ್ರಿಶ್ಚಿಯನ್​ ಸೇರಿ ಅಲ್ಪಸಂಖ್ಯಾತ ಧಾರ್ಮಿಕ ಸಂಸ್ಥೆಗಳ ಬೆಂಬಲವಿದೆ ಎಂದು ಮಾಹಿತಿ ಲಭಿಸಿದೆ.

    ಅಮೂಲ್ಯ ಮೂಲತಃ ಚಿಕ್ಕಮಗಳೂರಿನ ಕೊಪ್ಪದವಳು. ಆ ಭಾಗದಲ್ಲಿ ನಕ್ಸಲ್​ ಚಟುವಟಿಕೆಗಳು ಹೆಚ್ಚಿರುವುದರಿಂದ ಆಕೆಯೂ ಸಹ ನಕ್ಸಲರೊಂದಿಗೆ ನಂಟು ಹೊಂದಿರಬಹುದು ಎನ್ನುವ ಅನುಮಾನವೂ ಇದೆ.

    ಸಿಎಎ ಮತ್ತು ಎನ್​ಆರ್​ಸಿ ವಿರುದ್ಧ ಹೋರಾಟ ನಡೆಸಿಕೊಂಡು ಬಂದಿರುವ ಈಕೆಗೆ ಮೋದಿ ಮತ್ತು ಅಮಿತ್​ ಷಾರನ್ನು ವಿರೋಧಿಸುವ ಟೀಂಗಳ ಬೆಂಬಲವೂ ಇತ್ತು. ಇದರ ಜತೆಗೆ ರಾಜಕೀಯ ಪಕ್ಷಗಳ ಕೈವಾಡವೂ ಇರಬಹುದು ಎನ್ನುವ ಅನುಮಾನವಿದ್ದು, ಈ ಮೂರು ಅನುಮಾನಗಳ ಜಾಡು ಹತ್ತಿರುವುದಾಗಿ ಭಾಸ್ಕರ್​ ರಾವ್​ ತಿಳಿಸಿದ್ದಾರೆ. ಈ ಮಾಹಿತಿಗಳು ಭಾಸ್ಕರ್​ ರಾವ್​ ಅವರು ರಾಜ್ಯ ಗೃಹ ಮಂತ್ರಿಗಳಿಗೆ ನೀಡಿರುವ ವರದಿಯಿಂದಾಗಿ ತಿಳಿದುಬಂದಿದೆ. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts