More

    ಯರಿಕೊಪ್ಪ ಬಳಿ ಬಿಗ್ ಮಿಶ್ರಾ ಹೋಟೆಲ್ ಮೇ 25ರಿಂದ ಆರಂಭ

    ಹುಬ್ಬಳ್ಳಿ: ಬಿಗ್ ಮಿಶ್ರಾ ಕೆಫೆ ವತಿಯಿಂದ ಹು-ಧಾ ಬೈಪಾಸ್‌ನ ಟೋಲ್ ಪ್ಲಾಸಾ ಬಳಿಯ ಯರಿಕೊಪ್ಪ ಗ್ರಾಮದಲ್ಲಿ ನಿರ್ಮಿಸಿರುವ ರಾಜಸ್ತಾನಿ ಥಾಲಿ ಹಾಗೂ ಉತ್ತರ ಕರ್ನಾಟಕದ ರುಚಿಕರ ಜೋಳದ ರೊಟ್ಟಿ ಥಾಲಿ ಹೋಟೆಲ್ ಮೇ 25ರಿಂದ ಕಾರ್ಯಾರಂಭಗೊಳ್ಳಲಿದೆ ಎಂದು ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಶ್ರೀಧರ ಬೋರಕರ ತಿಳಿಸಿದರು.
    ಯರಿಕೊಪ್ಪ ಗ್ರಾಮದ ಬಿಗ್ ಮಿಶ್ರಾ ಪೇಡಾ ಕೆಫೆ ಆವರಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
    ಸಿಹಿ ತಿನಿಸು, ನಮಕೀನ್ ಮತ್ತು ಬೇಕರಿ ಉತ್ಪನ್ನಗಳ ತಯಾರಿಕೆ ಹಾಗೂ ಮಾರಾಟದಲ್ಲಿ ತನ್ನದೆ ಆದ ಹೆಸರು ಮಾಡಿರುವ ಬಿಗ್ ಮಿಶ್ರಾ ಸಂಸ್ಥೆಯೂ ಈಗ ಹೋಟೆಲ್ ಉದ್ಯಮಕ್ಕೂ ಕಾಲಿಟ್ಟಿದೆ. ಗ್ರಾಹಕರಿಗೆ ಶುಚಿ-ರುಚಿಯಾದ ಆಹಾರ ಉಣಬಡಿಸುವ ನಿಟ್ಟಿನಲ್ಲಿ ರಾಜಸ್ತಾನಿ ಥಾಲಿ(300ರೂ.ಕ್ಕೆ ಅನ್‌ಲಿಮಿಟೆಡ್) ಹಾಗೂ ಜೋಳದ ರೊಟ್ಟಿ ಥಾಲಿ (225 ರೂ.ಅನ್‌ಲಿಮಿಟೆಡ್) ಊಟ ಸಿಗಲಿದೆ ಎಂದರು.
    ಬೈಪಾಸ್ ರಸ್ತೆ ಮೇಲೆ ಪ್ರಯಾಣಿಸುವ ಪ್ರಯಾಣಿಕರ ಅಗತ್ಯ ಗಮನದಲ್ಲಿಟ್ಟುಕೊಂಡು ಈಗಾಗಲೇ ಬಿಗ್ ಮಿಶ್ರಾ ಸಂಸ್ಥೆ ಲೈವ್ ಪೇಡಾ ತಯಾರಿಕಾ ಘಟಕ ಹಾಗೂ ಕೆೆ(ಉಪಹಾರ ಗೃಹ) ಪ್ರಾರಂಭಿಸಿದೆ. ಚಾಟ್ ಸೆಂಟರ್‌ನಲ್ಲಿ 20ಕ್ಕೂ ಹೆಚ್ಚು ವಿವಿಧ ಖಾದ್ಯ, ಜೂಸ್ ಮತ್ತು ಐಸ್‌ಕ್ರೀಂ ಹಾಗೂ ಕೇಕ್‌ಗಳ ಮಾರಾಟಕ್ಕೂ ಬಿಗ್ ಮಿಶ್ರಾ ಪೇಡಾ ಸಂಸ್ಥೆ ಹೆಸರಾಗಿದೆ. ಗ್ರಾಹಕರ ಸಂತೃಪ್ತಿ ಪ್ರಧಾನವಾಗಿಟ್ಟುಕೊಂಡು ಈ ಹೋಟೆಲ್‌ಗಳನ್ನು ಪ್ರಾರಂಭಿಸಿದ್ದೇವೆ. ಬೈಪಾಸ್ ಮೂಲಕ ಬೆಳಗಾವಿ, ಗೋವಾ, ಬೆಂಗಳೂರು, ಮುಂಬೈ, ಪುಣೆ ಸೇರಿ ವಿವಿಧ ಊರುಗಳಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುವುದು ನಮ್ಮ ಉದ್ದೇಶವಾಗಿದೆ. ಈ ಹೋಟೆಲ್‌ಗಳು ಬೆಳಗ್ಗೆ 7 ರಿಂದ ರಾತ್ರಿ 11ರವರೆಗೆ ಗ್ರಾಹಕರಿಗೆ ಸೇವೆ ಒದಗಿಸಲಿದೆ ಎಂದರು.
    ಮಿಶ್ರಾ ಸಂಸ್ಥೆಯ ಪಾರ್ಟನರ್‌ಗಳಾದ ಶ್ರೀಧರ ಶೆಟ್ಟಿ, ಯೋಗೇಶ್ ಜೈನ್, ಪತ್ರಕರ್ತ ಮಹೇಂದ್ರ ಚವ್ಹಾಣ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts