More

    ಕೆಎಲ್ ರಾಹುಲ್ ಭವಿಷ್ಯದ ನಾಯಕತ್ವ ಆಸೆಗೆ ಹಿನ್ನಡೆ ತಂದ ದಕ್ಷಿಣ ಆಫ್ರಿಕಾದಲ್ಲಿನ ಸೋಲು!

    ನವದೆಹಲಿ: ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ 1 ಟೆಸ್ಟ್ ಮತ್ತು 3 ಪಂದ್ಯಗಳ ಏಕದಿನ ಸರಣಿಯಲ್ಲಿ ಹಂಗಾಮಿ ನಾಯಕರಾಗಿ ಕಾರ್ಯನಿರ್ವಹಿಸಿದ ಕನ್ನಡಿಗ ಕೆಎಲ್ ರಾಹುಲ್ ಒಂದೂ ಗೆಲುವು ಕಾಣದೆ ಎಲ್ಲವನ್ನೂ ಸೋತರು. ಈ ವೈಲ್ಯವು ಅವರಿಗೆ ಭವಿಷ್ಯದಲ್ಲಿ ಟೀಮ್ ಇಂಡಿಯಾದ ಪೂರ್ಣ ಪ್ರಮಾಣದ ನಾಯಕತ್ವ ಒಲಿಸಿಕೊಳ್ಳಲು ಬಹುದೊಡ್ಡ ಹಿನ್ನಡೆಯಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

    ಬಿಸಿಸಿಐ ಜತೆಗಿನ ಜಟಾಪಟಿಯಿಂದ ವಿರಾಟ್ ಕೊಹ್ಲಿ ನಾಯಕತ್ವದಿಂದ ಸಂಪೂರ್ಣ ಮುಕ್ತರಾಗಿರುವ ಸಮಯದಲ್ಲಿ ರಾಹುಲ್ ತಂಡವನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸಲು ವಿಲರಾದರು ಎಂದು ದೂರಲಾಗುತ್ತಿದೆ. ಸುನೀಲ್ ಗಾವಸ್ಕರ್, ಸಂಜಯ್ ಮಂಜ್ರೇಕರ್ ಸಹಿತ ಹಲವು ಮಾಜಿ ಕ್ರಿಕೆಟಿಗರು ಕೆಎಲ್ ರಾಹುಲ್ ನಾಯಕತ್ವ ಶೈಲಿಯನ್ನು ಟೀಕಿಸಿದ್ದಾರೆ. ಕೆಲ ಕ್ರಿಕೆಟ್ ಪ್ರೇಮಿಗಳಂತೂ, ‘ಕೆಎಲ್ ರಾಹುಲ್ ಸಾರಥ್ಯದಲ್ಲಿ ಟೀಮ್ ಇಂಡಿಯಾ, ಪಂಜಾಬ್ ಕಿಂಗ್ಸ್ ತಂಡದಂತೆ ಆಡಿತು’ ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿದ್ದಾರೆ.

    ಕೋಚ್ ರಾಹುಲ್ ದ್ರಾವಿಡ್ ಬೆಂಬಲಕ್ಕೆ ನಿಂತಿದ್ದು, ಅನುಭವದ ಕೊರತೆಯಿಂದ ಕೆಎಲ್ ರಾಹುಲ್ ಎಡವಿದ್ದಾರೆ. ಇನ್ನಷ್ಟು ಪಂದ್ಯಗಳ ನಾಯಕತ್ವ ಸಿಕ್ಕಾಗ ಅವರು ಪಳಗಲಿದ್ದಾರೆ ಮತ್ತು ಇನ್ನಷ್ಟು ಉತ್ತಮವಾಗಿ ತಂಡವನ್ನು ಮುನ್ನಡೆಸಲಿದ್ದಾರೆ ಎಂದಿದ್ದಾರೆ. ಆದರೆ ಬಿಸಿಸಿಐ ವಲಯ, ರಾಹುಲ್ ನಾಯಕತ್ವದಿಂದ ಪ್ರಭಾವಿತವಾಗಿಲ್ಲ ಎನ್ನಲಾಗಿದೆ. ದೊಡ್ಡ ಜತೆಯಾಟಗಳು ಬಂದಾಗ ಅದನ್ನು ಮುರಿಯಲು ರಾಹುಲ್ ಬಳಿ ಯಾವುದೇ ಹೊಸ ಯೋಜನೆ ಕಾಣಿಸಿಲ್ಲ. ಅಲ್ಲದೆ ಆರಂಭಿಕರಾಗಿ ರಾಹುಲ್ ಅವರ ನಿಧಾನಗತಿಯ ಬ್ಯಾಟಿಂಗ್ ಕೂಡ ಟೀಕೆಗೆ ಗುರಿಯಾಗಿದೆ.

    ಇನ್ನು ಬೇಜವಾಬ್ದಾರಿಯ ಹೊಡೆತಗಳಿಗೆ ವಿಕೆಟ್ ಒಪ್ಪಿಸುತ್ತಿರುವ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಕೂಡ ನಾಯಕತ್ವ ರೇಸ್‌ನಿಂದ ಬಹುತೇಕ ಹೊರಬಿದ್ದಿದ್ದಾರೆ.

    ಇಂಗ್ಲೆಂಡ್ ವಿರುದ್ಧ ಕೊನೇ ಓವರ್‌ನಲ್ಲಿ 28 ರನ್ ಕಸಿದರೂ ಸೋತ ವೆಸ್ಟ್ ಇಂಡೀಸ್!

    ಭಾರತದ ಸ್ಮತಿ ಮಂದನಾಗೆ ಐಸಿಸಿ ವರ್ಷದ ಮಹಿಳಾ ಕ್ರಿಕೆಟರ್ ಪ್ರಶಸ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts