More

    ಬಿಡೆನ್ ದಾಖಲೆ ಮತಗಳಿಕೆ – ಅಧ್ಯಕ್ಷೀಯ ಅಭ್ಯರ್ಥಿಯೊಬ್ಬರ ದಾಖಲೆ ಗೆಲುವು

    ನ್ಯೂಯಾರ್ಕ್​ : ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್ ಮುರಿದಿದ್ದಾರೆ. ಜೋ ಬಿಡನ್ ಹೆಚ್ಚಿನ ಮತಗಳಿಕೆಯ ದಾಖಲೆಯನ್ನು ನಿರ್ಮಿಸಿ ಗಮನಸೆಳೆದಿದ್ದಾರೆ ಎಂದು ನ್ಯಾಷನಲ್ ಪಬ್ಲಿಕ್ ರೇಡಿಯೋ ವರದಿ ಮಾಡಿದೆ.

    ನವೆಂಬರ್ 4ರ ಮತಗಳಿಕೆ ಲೆಕ್ಕಾಚಾರ ಪ್ರಕಾರ ಬಿಡೆನ್​ಗೆ 70.7 ದಶಲಕ್ಷ ಮತಗಳು ಸಿಕ್ಕಿವೆ. ಇಷ್ಟು ಮತ ಗಳಿಕೆ ಬೇರಾವ ಅಧ್ಯಕ್ಷೀಯ ಅಭ್ಯರ್ಥಿಯೂ ಮಾಡಿಲ್ಲ. 2008ರಲ್ಲಿ ಬರಾಕ್ ಒಬಾಮ ಅವರು ಗಳಿಸಿದ ಮತಕ್ಕಿಂತ 3 ಲಕ್ಷ ಮತಗಳನ್ನು ಬಿಡೆನ್ ಗಳಿಸಿದ್ದಾರೆ. ಒಬಾಮಾ ಅವರು 2008ರಲ್ಲಿ 69,498,516 ಮತಗಳಿಸಿದ್ದರು.

    ಇದನ್ನೂ ಓದಿ: ಅಮೆರಿಕ ಚುನಾವಣೆ: ಭಾರತ-ಅಮೆರಿಕ ಬಾಂಧವ್ಯ ಏನು-ಹೇಗೆ?

    ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗಿಂತ 2.7 ದಶಲಕ್ಷ ಮತಗಳ ಅಂತರದ ಮುನ್ನಡೆಯನ್ನು ಬಿಡೆನ್ ಹೊಂದಿದ್ದು, ಎಲೆಕ್ಟೋರಲ್​ ವೋಟ್​ನಲ್ಲಿ ಬಿಗಿ ಸ್ಪರ್ಧೆಯನ್ನು ನೀಡಿದ್ದಾರೆ. ನಿನ್ನೆ ತನಕ ಶೇಕಡ 64 ಮತ ಎಣಿಕೆ ಆಗಿದೆ. ಟ್ರಂಪ್ ಅವರು ಕೂಡ ಒಬಾಮಾ ಅವರ ಮತಗಳಿಕೆಯ ದಾಖಲೆ ಮುರಿಯುವ ಸನಿಹದಲ್ಲಿದ್ದಾರೆ. (ಏಜೆನ್ಸೀಸ್)

    ಚುನಾವಣಾ ಸಿಬ್ಬಂದಿ ಜತೆಗೆ ಪೆನ್​ ವಿಚಾರಕ್ಕೆ ವಾಗ್ವಾದಕ್ಕಿಳಿದ್ರು ಮಾಜಿ ಶಾಸಕ ಕಾಶಪ್ಪನವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts