More

    ಬೀದರ್​ ಕ್ಷೇತ್ರಕ್ಕೆ ಈಶ್ವರ್​ ಖಂಡ್ರೆ ಪುತ್ರನ ಹೆಸರು ಫೈನಲ್​; ಸಿಎಂ-ಡಿಸಿಎಂ ಭೇಟಿಯಾಗಿ ಅಭಿನಂದಿಸಿದ ಸಾಗರ್​

    ಬೆಂಗಳೂರು: ಲೋಕಸಭಾ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಈಗಾಗಲೇ ಕಾಂಗ್ರೆಸ್​ ಪಕ್ಷ ಕರ್ನಾಟಕದಲ್ಲಿ ಏಳು ಹುರಿಯಾಳುಗಳ ಹೆಸರನ್ನು ಘೋಷಿಸಿ 21 ಕ್ಷೇತ್ರಗಳ ಅಭ್ಯರ್ಥಿಗಳನ್ನು ಬಾಕಿ ಉಳಿಸಿಕೊಂಡಿದೆ. ಶುಕ್ರವಾರ ಅಥವಾ ಶನಿವಾರ ಬಾಕಿ ಉಳಿಸಿಕೊಂಡಿರುವ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಕಾಂಗ್ರೆಸ್​ ಘೋಷಿಸಲಿದೆ ಎಂದು ತಿಳಿದು ಬಂದಿದೆ.

    ಅಭ್ಯರ್ಥಿಗಳ ಆಯ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್​ ನಾಯಕರು ಈಗಾಗಲೇ ಒಂದು ಸುತ್ತಿನ ಸಭೆ ನಡೆಸಿದ್ದು ಈಗಾಗಲೇ 17 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದ್ದು, ನಾಲ್ಕು ಕ್ಷೇತ್ರಗಳಿಗೆ ಬಾಕಿ ಉಳಿಸಿಕೊಳ್ಳಲಾಗಿದೆ. ಅದರಂತೆ ಬೀದರ್​ ಲೋಕಸಭಾ ಕ್ಷೇತ್ರಕ್ಕೆ ಸಚಿವ ಈಶ್ವರ್ ಖಂಡ್ರೆ ಪುತ್ರ ಸಾಗರ್​ ಖಂಡ್ರೆಗೆ ಕೊಡಲು ಕಾಂಗ್ರೆಸ್​ ಹೈಕಮಾಂಡ್​ ತೀರ್ಮಾನಿಸಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿಯಿದೆ.

    ಬೀದರ್​ ಲೋಕಸಭೆ ಕ್ಷೇತ್ರದ ಟಿಕೆಟ್​ ವಿಚಾರವಾಗಿ ಹುಮ್ನಾಬಾದ್​ ಮಾಜಿ ಶಾಸಕ ರಾಜಶೇಖರ್​ ಪಾಟೀಲ್​ ಹಾಗೂ ಸಾಗರ್​ ಖಂಡ್ರೆ ನಡುವೆ ಪೈಪೋಟಿ ಏರ್ಪಟ್ಟಿತ್ತು. ಇದೀಗ ಅಂತಿಮವಾಗಿ ಕಾಂಗ್ರೆಸ್​ ಹೈಕಮಾಂಡ್​ ಸಾಗರ್​ ಖಂಡ್ರೆಗೆ ಟಿಕೆಟ್​ ನೀಡಲು ಬಯಸಿದ್ದು, ಬೀದರ್​ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಗೊಂದಲಕ್ಕೆ ತೆರೆ ಬಿದ್ದಿದೆ.

    Sagar Khandre

    ಇದನ್ನೂ ಓದಿ: ಮೈಚಳಿ ಬಿಟ್ಟು ಹೊಸ ಫೋಟೋಶೂಟ್ ಮಾಡಿಸಿದ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ

    ಬೀದರ್​ ಲೋಕಸಭೆ ಕ್ಷೇತ್ರಕ್ಕೆ ಆರಂಭದಿಂದಲೂ ಸಾಗರ್‌ ಖಂಡ್ರೆಯವರ ಹೆಸರು ಕೇಳಿ ಬರುತ್ತಿತ್ತು. ಅದಕ್ಕೆ ಪೂರಕವಾಗಿ ಜಿಲ್ಲೆಯಾದ್ಯಂತ ಪ್ರಚಾರ ಕೂಡ ಕೈಗೊಳ್ಳಲಾಗಿತ್ತು. ಪ್ರತಿಯೊಂದು ಹಬ್ಬ, ಹರಿದಿನ ಹಾಗೂ ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡರು ಜಿಲ್ಲಾ ಪ್ರವಾಸ ಕೈಗೊಂಡಾಗ ಜಿಲ್ಲೆಯಾದ್ಯಂತ ಸಾಗರ್‌ ಖಂಡ್ರೆಯವರ ಫ್ಲೆಕ್ಸ್‌, ಬ್ಯಾನರ್‌ಗಳು ರಾರಾಜಿಸುತ್ತಿದ್ದವು. ಈಗ ಅಂತಿಮವಾಗಿ ಸಾಗರ್‌ ಅವರಿಗೆ ಟಿಕೆಟ್‌ ಖಚಿತವಾಗಿದ್ದು, ಕಾಂಗ್ರೆಸ್​ ನಾಯಕರು ಚುನಾವಣೆಗೆ ತಯಾರಿ ಆರಂಭಿಸಿದ್ದಾರೆ.

    ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (NSUI) ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿರುವ ಸಾಗರ್​ ಖಂಡ್ರೆ ಟಿಕೆಟ್‌ ಖಚಿತವಾದ ಬೆನ್ನಲ್ಲೇ ಸಾಗರ್‌ ಖಂಡ್ರೆಯವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಮನೆಗೆ ತೆರಳಿ ಕೃತಜ್ಞತೆ ಸಲ್ಲಿಸಿದ್ದಾರೆ. ಇದರ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts