More

    ಕರೊನಾ ವರದಿ ಕುರಿತು ಡಿಸಿ, ಎಸ್ಪಿ ವಿರುದ್ಧ ಅವಾಚ್ಯ ಪದ ಬಳಸಿ ವಿಡಿಯೋ ವೈರಲ್​ ಮಾಡಿದ್ದವನ ಬಂಧನ

    ಬೀದರ್: ಕರೊನಾ ಸೋಂಕಿತರ ವರದಿ ಕುರಿತು ಡಿಸಿ, ಎಸ್ಪಿ ವಿರುದ್ಧ ಅವಾಚ್ಯ ಪದ ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಟ್ಟವನನ್ನು ಪೊಲೀಸರು ಬಂಧಿಸಿದ್ದಾರೆ.

    ಸಂತೋಷಕುಮಾರ ಧನ್ನೂರೆ ವಿಡಿಯೋ ಶೇರ್ ಮಾಡಿದ ವ್ಯಕ್ತಿ. ಮೂಲತಃ ಭಾಲ್ಕಿ ತಾಲೂಕಿನ ಸಿದ್ದೇಶ್ವರ ಗ್ರಾಮದ ನಿವಾಸಿಯಾಗಿರುವ ಈತ ಸದ್ಯ ಬೀದರ್ ಓಲ್ಡ್ ಸಿಟಿಯಲ್ಲಿ ವಾಸವಾಗಿದ್ದಾನೆ. ಆರೋಪಿಯನ್ನು ಬಂಧಿಸಲಾಗಿದ್ದು, ನಗರ ಪೊಲೀಸ್​ ಠಾಣೆ ಪ್ರಕರಣ ದಾಖಲಾಗಿದೆ.

    ಸಿಎಂ ಯಡಿಯೂರಪ್ಪ ಅವರಿಗೆ ನನ್ನ ಬಹಿರಂಗ ಪ್ರಶ್ನೆ ಎಂದು ಮಾತಾಡಿ ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ. ಬೀದರಿನಲ್ಲಿ 10 ಜನರಿಗೆ ಕರೊನ್ ಪಾಸಿಟಿವ್ ಬರಲು ಜಿಲ್ಲಾಡಳಿತ ಕಾರಣ ಎಂದು ಆರೋಪಿಸಿದ್ದ. ತಬ್ಲಿಘಿ ಜಮಾತ್ ಸಭೆಗೆ ಹೋಗಿ ಬಂದವರನ್ನು ಪತ್ತೆ ಹಚ್ಚಿ, ಮೊದಲೇ ಕ್ರಮ ಕೈಗೊಳ್ಳದ ಡಿಸಿ, ಎಸ್ಪಿ ಅವರ ನಿಷ್ಕಾಳಜಿಯಿಂದ ಜಿಲ್ಲೆಗೆ ಕರೊನಾ ಬಂದಿದೆ ಎಂದು ಕಿಡಿಕಾರಿದ್ದ.

    ಕರೊನಾ ಸೋಂಕಿತರ ವರದಿ ಕುರಿತು ಡಿಸಿ ಸುಳ್ಳು ಹೇಳಿದ್ದಾರೆ ಎಂದು ಕೆಲ ಮುಸ್ಮೀಮರ ಧ್ವನಿಯುಳ್ಳ ಆಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆದ ಬೆನ್ನಲ್ಲೇ ಈ ವಿಡಿಯೋ ಹೊರಬಿದ್ದಿದ್ದು, ಇದಕ್ಕೆ ಸಂಚು ರೂಪಿಸಿದ ಆರೋಪಯನ್ನು ಬಂಧಿಸಲಾಗಿದೆ.

    ಕಾಶ್ಮೀರ ಕಣಿವೆಗೆ ನುಸುಳಲು ಯತ್ನಿಸಿದ 9 ಉಗ್ರರ ಹತ್ಯೆ, ಭದ್ರತಾ ಪಡೆಯ ಮೂವರು ಸಿಬ್ಬಂದಿ ಹುತಾತ್ಮ

    ಜಾಲಿ ರೈಡ್‌ಗೆ ಅಲ್ಲ- ಹೊಟ್ಟೆನೋವಿನ ಟ್ರೀಟ್‌ಮೆಂಟ್‌ಗಾಗಿ ಹೊರಬಂದಿದ್ದೆ: ವೈರಲ್‌ ಸುದ್ದಿಯ ಬಗ್ಗೆ ನಟಿ ಶರ್ಮಿಳಾ ಮಾಂಡ್ರೆ ಬೇಸರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts