More

    ವಿಡಿಯೋ ವೈರಲ್​ ಆಗ್ತಿದ್ದಂತೆ ಬಿಡದಿ ಆಸ್ಪತ್ರೆ ವೈದ್ಯೆಯರಿಬ್ಬರ ಅಮಾನತು!

    ರಾಮನಗರ: ಬಾಣಂತಿಯನ್ನು ಡಿಸ್ಚಾರ್ಜ್​ ಮಾಡಲು 6 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದ ವೈದ್ಯೆಯರಿಬ್ಬರನ್ನು ಅಮಾನತು ಮಾಡಲಾಗಿದೆ.

    ಬಿಡದಿಯ ಸಮುದಾಯ ಆರೋಗ್ಯ ಕೇಂದ್ರದ ಪ್ರಸೂತಿ ತಜ್ಞೆ ಡಾ. ಶಶಿಕಲಾ ಹಾಗೂ ಡಾ.ಐಶ್ವರ್ಯ ಅವರನ್ನ ಅಮಾನತು ಮಾಡಿ ರಾಮನಗರ ಡಿಎಚ್ಒ ಕಾಂತರಾಜ್​ ಆದೇಶ ಹೊರಡಿಸಿದ್ದಾರೆ. 5 ದಿನದ ಹಿಂದೆ ಹೆರಿಗೆಗೆ ರೂಪಾ ಎಂಬುವವರು ದಾಖಲಾಗಿದ್ದರು. ಹೆರಿಗೆಯಾಗಿದ್ದು, ಡಿಸ್ಚಾರ್ಜ್​ ಮಾಡುವಾಗ ವೈದ್ಯೆಯರು 6 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ರೂಪಾ ಅವರ ಪತಿ 2 ಸಾವಿರ ಹೊಂದಿಸಿಕೊಂಡು ಕೊಡಲು ಹೋಗಿದ್ದಾರೆ. ಕಡಿಮೆ ಆಯ್ತೆಂದು ಆ ಹಣ ಮುಟ್ಟ ವೈದ್ಯರಾದ ಡಾ.ಶಶಿಕಲಾ ಹಾಗೂ ಡಾ.ಐಶ್ವರ್ಯ ಇಬ್ಬರೂ, 6 ಸಾವಿರ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಅಷ್ಟೊಂದು ಹಣ ಇಲ್ಲ ಮೇಡಂ, ನನ್ನ ಬಳಿ ಇರೋದೇ 2 ಸಾವಿರ ರೂಪಾಯಿ. ನಾನು ಗಾರ್ಮೆಂಟ್ಸ್​ನಲ್ಲಿ ಕೆಲಸ ಮಾಡೋದು, ಇನ್ನೂ ಸಂಬಳ ಕೂಡ ಆಗಿಲ್ಲ. ಇರೋದು 2 ಸಾವಿರ ಮಾತ್ರ, ಹೆಚ್ಚು ಕೊಡಲು ಆಗಲ್ಲ ಎಂದರೂ ಕೇಳಿಲ್ಲ.

    ‘ನೀವು ಕೊಡೋ ಹಣವನ್ನು ನಾವು ಎಲ್ಲರಿಗೂ ಹಂಚಬೇಕು. ಪ್ರತಿಯೊಬ್ಬರಿಗೂ ಎರಡು ಸಾವಿರ ರೂ. ಕೊಡಬೇಕು. ಒಬ್ಬರಿಗೊಂದು ಮತ್ತೊಬ್ಬರಿಗೊಂದು ಮಾಡಲ್ಲ, 6 ಸಾವಿರ ಫಿಕ್ಸ್​. 2 ಸಾವಿರ ಅವರಿಗೆ, 2 ಸಾವಿರ ಇವರಿಗೆ, 2 ಸಾವಿರ ನನಗೆ… ಎಂದು ವೈದ್ಯೆ ಹೇಳಿದ್ದಾರೆ. ನೀವು ಕೊಡೋ 2 ಸಾವಿರದಲ್ಲಿ ಎಲ್ಲರಿಗೂ 500 ಕೊಡೋಕೆ ಆಗುತ್ತಾ? ಆಗಲ್ಲ 6 ಸಾವಿರ ಕೊಡಿ, ನಾವು ಕಮ್ಮಿ ತಗೊಂಡ್ರೆ ವಾರ್ಡ್​ನಲ್ಲಿ ಬೇರೆಯವರಿಗೆ ಗೊತ್ತಾದ್ರೆ ಎಲ್ಲರೂ ಅಷ್ಟೇ ಕೊಡ್ತಾರೆ… ಎಂದು ಮತ್ತೊಬ್ಬ ಹೇಳಿದ್ದಾರೆ. ಈ ಎಲ್ಲ ದೃಶ್ಯವೂ ರೋಗಿಯೊಬ್ಬರ ಮೊಬೈಲ್​ನಲ್ಲಿ ಸೆರೆಯಾಗಿದೆ. ವಿಡಿಯೋ ಸಹಿತ ದಿಗ್ವಿಜಯ ನ್ಯೂಸ್​ ಸುದ್ದಿ ಪ್ರಸಾರ ಮಾಡಿತ್ತು. ಇದರ ಬೆನ್ನಲ್ಲೇ ಇಬ್ಬರು ವೈದ್ಯೆಯರನ್ನೂ ಅಮಾನತು ಮಾಡಿ ಡಿಎಚ್​ಒ ಆದೇಶಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಡಿಎಚ್​ಒ, ವೈದ್ಯೆಯರಿಗೆ ನೋಟಿಸ್ ನೀಡಲಾಗಿದೆ. ಲಂಚ ಪಡೆಯುತ್ತಿರುವ ಬಗ್ಗೆ ವಿಡಿಯೋದಲ್ಲಿ ಸ್ಪಷ್ಟವಾಗಿದೆ. ಹಾಗಾಗಿ ಇಬ್ಬರನ್ನೂ ಅಮಾನತು ಮಾಡಿದ್ದೇವೆ. ಈ ಬಗ್ಗೆ ಸಂಪೂರ್ಣ ವರದಿ ಸಂಗ್ರಹಿಸಿ ಕ್ರಮ ಕೈಗೊಳ್ಳುತ್ತೇವೆ. ಈ ಪ್ರಕರಣ ಸಂಬಂಧ ಇಬ್ಬರು ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ‌. ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು.

    ವೈದ್ಯೆಯರ ಹಣದಾಹದ ವಿಡಿಯೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲೂ ವೈರಲ್​ ಆಗುತ್ತಿದ್ದು, ಸಾರ್ವಜನಿಕರಿಂದ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. (ದಿಗ್ವಿಜಯ ನ್ಯೂಸ್​)

    6 ಸಾವಿರ ಫಿಕ್ಸ್​, ಹಣ ತಗೋಳೋದ್ರಲ್ಲಿ ನಾವು ಭೇದಭಾವ ಮಾಡಲ್ಲ: ಬಿಡದಿಯಲ್ಲಿ ವೈದ್ಯೆಯರ ಹಣದಾಹದ ವಿಡಿಯೋ ವೈರಲ್​

    ಡೀಸೆಲ್​ ಖಾಲಿಯಾಗಿ ರಸ್ತೆಯಲ್ಲೇ ನಿಂತ ಆಂಬುಲೆನ್ಸ್​ ಅನ್ನು ತಳ್ಳಿಕೊಂಡೇ ಹೋದ ಮಗಳು-ಅಳಿಯ! ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ಅಪ್ಪ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts