More

    ಬಿಡಾಡಿ ದನಗಳು ಗೋಶಾಲೆಗೆ ರವಾನೆ?

    ಹುಳಿಯಾರು: ಹೆದ್ದಾರಿಗಳ ಇಕ್ಕೆಲಗಳಲ್ಲಿ ಹುಲುಸಾಗಿ ಬೆಳೆಯುವ ಹುಲ್ಲಿನ ಆಸೆಗೆ ಜಾನುವಾರುಗಳು ಹೆದ್ದಾರಿಗಳಿಗೆ ಲಗ್ಗೆ ಇಡುತ್ತಿದ್ದು ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ, ಅಷ್ಟೇ ಅಲ್ಲದೆ ಅಪಘಾತಗಳಿಗೂ ಕಾರಣವಾಗುತ್ತಿದ್ದು ಬಿಡಾಡಿ ದನಗಳನ್ನು ಗೋ ಶಾಲೆಗೆ ರವಾನಿಸಬೇಕೆಂಬ ಒತ್ತಾಯಗಳು ಕೇಳಿಬಂದಿವೆ.

    ಪಟ್ಟಣದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 234ರ ಇಕ್ಕೆಲಗಳಲ್ಲಿ ಬೆಳೆದಿರುವ ಹುಲ್ಲು ತಿನ್ನುವ ಬರುವ ಜಾನುವಾರುಗಳು ಮೆಯ್ದ ಬಳಿಕ ಮಲಗುವುದು, ಇಕ್ಕೆಲಗಳಿಗೆ ವಿರಾಜಮಾನವಾಗಿ ಓಡಾಡುತ್ತಿರುತ್ತವೆ, ಇದರಿಂದಾಗಿ ಹೆದ್ದಾರಿಯಲ್ಲಿ ವಾಹನಗಳು ವೇಗವಾಗಿ ಚಲಿಸುವ ವೇಳೆ ಜಾನುವಾರುಗಳನ್ನು ಉಳಿಸಲು ಹೋಗಿ ಭೀಕರ ಅಪಘಾತಗಳಾಗಿರುವ ಉದಾಹರಣೆಗಳು ಸಾಕಷ್ಟಿವೆ, ಇನ್ನು ಕೆಲವೊಮ್ಮೆ ಜಾನುವಾರುಗಳೇ ಅಪಘಾತದಲ್ಲಿ ಬಲಿಯಾಗಿವೆ. ಮಳೆಗಾಲದಲ್ಲಿ ಈ ಸಮಸ್ಯೆ ಹೆಚ್ಚಾಗಲಿದ್ದು ಜಾನುವಾರುಗಳನ್ನು ಮಾಲೀಕರು ಮನೆಯಲ್ಲಿ ಕಟ್ಟಿಹಾಕಬೇಕು. ಇಲ್ಲದಿದ್ದರೇ ಅವುಗಳನ್ನು ಗೋ ಶಾಲೆಗೆ ರವಾನಿಸಲಾಗುವುದು ಎಂದಿರುವ ಲಿಂಗಪ್ಪನಪಾಳ್ಯ ಮಾಜಿ ಗ್ರಾಪಂ ಸದಸ್ಯ ಜಯಣ್ಣ, ಈ ಕುರಿತು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಲಾಗಿದೆ ಎಂದಿದ್ದಾರೆ.

    ಜಾನುವಾರುಗಳನ್ನು ರಸ್ತೆಗೆ ಬಿಡದೆ ಮನೆಯಲ್ಲಿ ಕಟ್ಟಿಹಾಕಿಕೊಳ್ಳಲು ಮಾಲೀಕರಿಗೆ ನೋಟಿಸ್ ನೀಡಲಾಗುವುದು.
    ಎಲ್.ವಿ.ಮಂಜುನಾಥ್ ಪಪಂ ಮುಖ್ಯಾಧಿಕಾರಿ, ಹುಳಿಯಾರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts