More

    ಭೂಮಿಪೂಜೆ ಕಾರ್ಯಕ್ರಮ ರದ್ದು

    ಚಾಮರಾಜನಗರ: ಹನೂರು ತಾಲೂಕಿನ ಹುಲುಸುಗುಡ್ಡೆ ಸಮೀಪದ ಮಂಗಲ ಏಕಲವ್ಯ ಮಾದರಿ ವಸತಿ ಶಾಲೆಯ ಮುಖ್ಯ ರಸ್ತೆಯ ಕಾಮಗಾರಿ ಪ್ರಾರಂಭಕ್ಕೆ ಗುರುವಾರ ನಿಗದಿಯಾಗಿದ್ದ ಭೂಮಿಪೂಜೆ ಕಾರ್ಯಕ್ರಮ ರದ್ದಾಗಿದೆ.


    ಏಕಲವ್ಯ ಶಾಲೆಯಿಂದ ಹುಲುಸುಗುಡ್ಡೆಯವರೆಗೆ ರಸ್ತೆ ದುರಸ್ತಿಗೊಳಿಸುವ ಉದ್ದೇಶದಿಂದ ಕೆಆರ್‌ಐಡಿಎಲ್ ವತಿಯಿಂದ 3.83 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಮಾಡಲು ಅನುಮೋದನೆ ದೊರೆತಿತ್ತು. ಅದರಂತೆ ಶಾಸಕ ಮಂಜುನಾಥ್ ಅವರು ಭೂಮಿ ಪೂಜೆ ನೆರವೇರಿಸುವುದಾಗಿ ಮಾತು ನೀಡಿದ್ದರು.

    ಹೀಗಾಗಿ, ಗುರುವಾರ ರಸ್ತೆ ಕಾಮಗಾರಿ ಭೂಮಿ ಪೂಜೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಗ್ರಾಪಂ ಅಧ್ಯಕ್ಷೆ ಉಮಾ, ಉಪಾಧ್ಯಕ್ಷೆ ಶಿವಲಾಂಬಿಕೆ, ಸದಸ್ಯರಾದ ಜಿ. ಕನಕರಾಜು, ಸಿ. ಪ್ರಭುಸ್ವಾಮಿ, ಪಿಡಿಒ ದೊರೆಯಾ, ಮುಖಂಡರಾದ ವೀರಭದ್ರ, ಶೇಖರ್, ಮರಿಸ್ವಾಮಿ ಹಾಗೂ ಇನ್ನಿತರರು ಶಾಸಕರ ಆಗಮನಕ್ಕಾಗಿ ಕಾದುಕುಳಿತಿದ್ದರು. ಆದರೆ, ಶಾಸಕರು ಅರ್ಧ ದಾರಿಗೆ ಬಂದು ಅಧಿಕಾರಿಗಳಿಂದ ಮಾಹಿತಿ ಪಡೆದು ಭೂಮಿಪೂಜೆ ನೆರವೇರಿಸದೆ ವಾಪಸ್ ತೆರಳಿದರು.


    ಸುಮಾರು ಮೂರು ತಾಸು ಕಾದುಕುಳಿತ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷೆ, ಸಾರ್ವಜನಿಕರಿಗೆ ಶಾಸಕರು ಬರುವುದಿಲ್ಲ ಎಂದು ಮಾಹಿತಿ ನೀಡಲಾಯಿತು. ಇದರಿಂದ ಆಕ್ರೋಶಗೊಂಡ ಜನರು, ಯಾವ ಕಾರಣಕ್ಕೆ ನಮ್ಮನ್ನು ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದೀರಿ? ಅಲ್ಲದೇ, ಮೂರು ತಾಸು ಕಾಯಿಸಿ ಇದೀಗ ಶಾಸಕರು ಬರುವುದಿಲ್ಲ ಎಂದು ಭೂಮಿಪೂಜೆ ರದ್ದುಗೊಳಿಸುವ ಮೂಲಕ ನಮಗೆ ಅವಮಾನ ಮಾಡಿದ್ದೀರಿ ಎಂದು ಕೆಆರ್‌ಐಡಿಎಲ್ ಎಇಗಳಾದ ಶೋಭಾ, ಕಾರ್ತಿಕ್ ಅವರನ್ನು ತರಾಟೆಗೆ ತೆಗೆದುಕೊಂಡರು. ಇಂತಹ ಕೆಲಸವನ್ನು ಯಾವತ್ತೂ ಮಾಡಬೇಡಿ ಎಂದು ಅಧಿಕಾರಿಗಳಿಗೆ ಛೀಮಾರಿ ಹಾಕಿದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts