More

    ತಿಂಗಳಿಗೆ 6 ಸಾವಿರ ಸಂಪಾದಿಸೋ ವ್ಯಕ್ತಿಯಿಂದ 132 ಕೋಟಿ ರೂಪಾಯಿ ಬ್ಯಾಂಕ್​ ವ್ಯವಹಾರ: ಶಾಕ್​ ನೀಡಿದ ಐಟಿ ನೋಟಿಸ್​!​​

    ಭೋಪಾಲ್​: ತಿಂಗಳಿಗೆ 6 ಸಾವಿರ ರೂ. ಸಂಪಾದಿಸುವ ವ್ಯಕ್ತಿಯ ಹೆಸರಿನಲ್ಲಿ 132 ಕೋಟಿ ರೂಪಾಯಿ ಬ್ಯಾಂಕ್​ ವ್ಯವಹಾರ ನಡೆದಿರುವುದಕ್ಕೆ ವಿವರಣೆ ಕೇಳಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನೋಟಿಸ್​ ನೀಡಿರುವ ಘಟನೆ ಮಧ್ಯಪ್ರದೇಶದಲ್ಲಿ ಗುರುವಾರ ನಡೆದಿದೆ.

    ರವಿ ಗುಪ್ತಾ ಎಂಬುವರು ಮಧ್ಯಪ್ರದೇಶದ ಗ್ವಾಲಿಯರ್ ಪಟ್ಟಣದ ಭಿಂದ್​ ಏರಿಯಾದ ನಿವಾಸಿಯಾಗಿದ್ದಾರೆ. ನಿಮ್ಮ ಹೆಸರಿನ ಆ್ಯಕ್ಸಿಸ್​ ಬ್ಯಾಂಕ್​ ಖಾತೆಯಲ್ಲಿ 132 ಕೋಟಿ ರೂಪಾಯಿ ವ್ಯವಹಾರ ನಡೆದಿದೆ. ಇದಕ್ಕೆ ವಿವರಣೆ ನೀಡಿ ಎಂದು ಐಟಿ ನೋಟಿಸ್​ ಕಳುಹಿಸಿರುವುದಾಗಿ ಸ್ವತಃ ಗುಪ್ತ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ವಿಶೇಷವೆಂದರೆ ಗುಪ್ತ ಅವರ ಮಾಸಿಕ ಆದಾಯ ಕೇವಲ 6 ಸಾವಿರ ರೂ. ಮಾತ್ರ.

    ಇದನ್ನೂ ಓದಿ: ನಿಮ್ಮ ಖಾತೆಗೆ 58 ಲಕ್ಷ ರೂ. ಜಮಾ ಆಗಿದ್ದು 1.05 ಕೋಟಿ ರೂ. ತೆರಿಗೆ ಪಾವತಿಸಿ: ಸ್ಲಂ ನಿವಾಸಿಗೆ ಐಟಿ ಶಾಕ್​

    ಇದೊಂದು ಫೋರ್ಜರಿ ಎಂದು ಕರೆದಿರುವ ಗುಪ್ತ, ಈ ವಿಚಾರ ಆ್ಯಕ್ಸಿಸ್​ ಬ್ಯಾಂಕ್​ನಿಂದ ತಿಳಿಯಿತು. 2011ರಲ್ಲಿ ಮುಂಬೈ ಶಾಖೆಯಲ್ಲಿ ಖಾತೆ ತೆರೆಯಲಾಗಿದೆ. ಇದರ ಮೂಲಕವೇ 132 ಕೋಟಿ ರೂಪಾಯಿ ವ್ಯವಹಾರ ನಡೆದಿದೆ. ಇದಕ್ಕೆ ಸಂಬಂಧಿಸಿ ಅನೇಕ ಬಾರಿ ಐಟಿ ನನಗೆ ನೋಟಿಸ್​ ನೀಡಿದೆ ಎಂದು ಗುಪ್ತ ತಿಳಿಸಿದ್ದಾರೆ.

    ಇದೀಗ 3.5 ಕೋಟಿ ರೂಪಾಯಿ ತೆರಿಗೆ ಸಂದಾಯ ಮಾಡುವಂತೆ ಐಟಿ ಬೇಡಿಕೆಯಿಟ್ಟಿದೆ. ಆದರೆ, ಬ್ಯಾಂಕ್​ ಖಾತೆಯನ್ನು ನಾನು ತೆರೆದಿಲ್ಲ. ಬೇರೊಬ್ಬರು ನನ್ನ ಹೆಸರಿನಲ್ಲಿ ಖಾತೆಯನ್ನು ತೆರೆದಿರಬಹುದು ಅಥವಾ ಆ್ಯಕ್ಸಿಸ್​ ಬ್ಯಾಂಕ್​ ಅವರೇ ತೆರೆದಿರಬಹುದು ಎಂದು ಗುಪ್ತ ಆರೋಪಿಸಿದ್ದಾರೆ. ಆದರೆ, ಬ್ಯಾಂಕ್​ ಇದನ್ನು ಅಲ್ಲಗೆಳೆದಿದ್ದು, ಐಟಿ ಇಲಾಖೆಗೆ ಹೋಗಿ ಕೇಳುವಂತೆ ಹೇಳಿದೆ. ಈ ಸಂಬಂಧ ಗುಪ್ತ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೋಲಿಸರು ತನಿಖೆ ಕೈಗೊಂಡಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts