More

    ಭೀಮಗಡ, ಕಣಕುಂಬಿಯಲ್ಲಿ ಉತ್ತಮ ಮಳೆ

    ಖಾನಾಪುರ: ತಾಲೂಕಿನ ಕಣಕುಂಬಿ ಮತ್ತು ಭೀಮಗಡ ಅರಣ್ಯ ಸೇರಿ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಗುರುವಾರ ರಾತ್ರಿಯಿಂದ ಶುಕ್ರವಾರ ಸಂಜೆ ವರೆಗೆ ಸತತವಾಗಿ ಮಳೆ ಸುರಿದಿದೆ.

    ಅರಣ್ಯ ಪ್ರದೇಶದಲ್ಲಿ ಉತ್ತಮ ಮಳೆಯಾಗಿದ್ದರಿಂದ ಮಲಪ್ರಭಾ, ಮಹದಾಯಿ, ಪಾಂಡರಿ ನದಿಗಳು ಹಾಗೂ ಕೋಟ್ನಿ, ಅಲಾತ್ರಿ, ಮಂಗೇತ್ರಿ, ಕುಂಬಾರ, ತಟ್ಟಿ, ಪಣಸೂರಿ, ಬೈಲ್, ಕಳಸಾ-ಬಂಡೂರಿ ಹಳ್ಳಗಳಲ್ಲಿ ನೀರಿನ ಸಂಗ್ರಹ ಹೆಚ್ಚುತ್ತಿದೆ. ಖಾನಾಪುರ ತಾಲೂಕಿನ ಜಾಂಬೋಟಿ, ಲೋಂಡಾ ಮತ್ತು ನಾಗರಗಾಳಿ ಅರಣ್ಯ ಪ್ರದೇಶದಲ್ಲೂ ಶುಕ್ರವಾರ ಉತ್ತಮ ಮಳೆ ಸುರಿದಿದೆ.

    ಕಂದಾಯ ಇಲಾಖೆಯ ಮೂಲಗಳ ಪ್ರಕಾರ ಕಣಕುಂಬಿ ಮತ್ತು ಸುತ್ತಮುತ್ತಲಿನ ಅರಣ್ಯ ಪ್ರದೇಶದಲ್ಲಿ ಶುಕ್ರವಾರ ಬೆಳಗ್ಗೆ ವರೆಗೆ 22.2 ಮಿ.ಮೀ., ಜಾಂಬೋಟಿ 8.6 ಮಿ.ಮೀ., ಲೋಂಡಾ 5 ಮಿ.ಮೀ., ನಾಗರಗಾಳಿ ಅರಣ್ಯದಲ್ಲಿ 6.8 ಮಿ.ಮೀ. ಮಳೆ ಸುರಿದ ವರದಿಯಾಗಿದೆ. ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಿದ್ದು, ಸಾರ್ವಜನಿಕರು ಹರಿಯು ತ್ತಿರುವ ನೀರಿನ ಬಳಿ ತೆರಳದಂತೆ ಹಾಗೂ ದನ- ಕರುಗಳನ್ನು ಬಿಡದಂತೆ ಕಂದಾಯ ಇಲಾಖೆ ಸೂಚಿಸಿದೆ. ಮಳೆಯಿಂದಾಗಬಹುದಾದ ಸಮಸ್ಯೆಗಳನ್ನು ಎದುರಿಸಲು ತಾಲೂಕು ಆಡಳಿತ ಸಜ್ಜಾಗಿದೆ ಎಂದು ತಹಸೀಲ್ದಾರ್ ಕಚೇರಿಯ ಮೂಲಗಳು ತಿಳಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts