More

    ಭೀಮಾ ತೀರದಲ್ಲಿ ಬೆಳೆ ಹಾನಿ, ಅಧಿಕಾರಿಗಳ ಪರಿಶೀಲನೆ

    ರೇವತಗಾಂವ: ಭೀಮಾ ನದಿಯ ಪ್ರವಾಹದಿಂದಾಗಿ ಬೆಳೆ ಹಾನಿಗೊಳಗಾದ ಚಡಚಣ ತಾಲೂಕಿನ ದಸೂರ ಹಾಗೂ ಉಮರಜ ಸೇರಿ ಸುತ್ತಮುತ್ತಲಿನ ಗ್ರಾಮಗಳ ಜಮೀನುಗಳಿಗೆ ಇಂಡಿಯ ಸಹಾಯಕ ಕೃಷಿ ನಿರ್ದೇಶಕ ಮಹಾದೇವಪ್ಪ ಏವೂರ, ಚಡಚಣ ತಹಸೀಲ್ದಾರ್ ಸುರೇಶ ಚವಲರ, ಕಂದಾಯ ನಿರೀಕ್ಷಕ ಪಿ.ಜೆ. ಕೊಡಹೊನ್ನ, ಕೃಷಿ ಅಧಿಕಾರಿ ಲಕ್ಷ್ಮೀ ಕಾಮಗೊಂಡ, ಗ್ರಾಮ ಲೆಕ್ಕಾಧಿಕಾರಿ ವಿ.ಎಂ. ಕೋಳಿ, ಸಿ.ಎಸ್. ದಟ್ಟಿ ಭೇಟಿ ನೀಡಿ ಸಮೀಕ್ಷೆ ನಡೆಸಿದರು.
    ಸಹಾಯಕ ಕೃಷಿ ನಿರ್ದೇಶಕ ಮಹಾದೇವಪ್ಪ ಏವೂರ ಮಾತನಾಡಿ, ಬಹುತೇಕ ಇನ್ನೇರಡು ದಿನಗಳಲ್ಲಿ ಬೆಳೆ ಸಮೀಕ್ಷೆ ಕಾರ್ಯಗಳು ಪೂರ್ಣಗೊಳ್ಳಲಿದ್ದು, ಬೆಳೆ ಹಾನಿಗೊಳಗಾಗಿ ಸಂಕಷ್ಟದಲ್ಲಿರುವ ರೈತರಿಗೆ ತ್ವರಿತವಾಗಿ ಖುಷ್ಕಿ ಭೂಮಿಯಲ್ಲಿರುವ ಒಂದು ಹೆಕ್ಟೇರ್ ಬೆಳೆಗೆ 6800 ರೂ. ಹಾಗೂ ನೀರಾವರಿ ಜಮೀನಿನಲ್ಲಿರುವ ಬೆಳೆಗೆ ಹೆಕ್ಟೇರ್‌ಗೆ 13500 ರೂ.ಗಳಂತೆ ಪರಿಹಾರ ನೀಡಲಾಗುವುದೆಂದು ತಿಳಿಸಿದರು.
    ತಹಸೀಲ್ದಾರ್ ಸುರೇಶ ಚವಲರ ಮಾತನಾಡಿ, ನಿಖರ ಹಾಗೂ ವಾಸ್ತವಾಂಶವುಳ್ಳ ಮಾಹಿತಿಯನ್ನು ಪಡೆದು ಬೆಳೆ ಹಾನಿಗೊಳಗಾದ ಯಾವ ರೈತನಿಗೂ ಅನ್ಯಾಯವಾಗಬಾರದೆಂಬ ಉದ್ದೇಶದಿಂದ ಮಾರ್ಗಸೂಚಿ ರೂಪಿಸಲಾಗಿದೆ. ಕಬ್ಬು, ತೊಗರಿ, ಮುಸುಕಿನ ಜೋಳ, ಸೂರ್ಯಕಾಂತಿ, ಹತ್ತಿ ಸೇರಿ ಇತರ ಬೆಳೆಗಳ ಸಮೀಕ್ಷೆ ಕಾರ್ಯ ನಡೆಸಲಾಯಿತು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts