More

    ರವಿ ಬೆಳಗೆರೆ ಖ್ಯಾತಿ ಹೆಚ್ಚಿಸಿದ ಭೀಮಾತೀರ..!

    ವಿಜಯಪುರ: ಭೀಮಾತೀರದ ಹಂತಕರ ಆಯುಧದಷ್ಟೇ ಹರಿತವಾದದ್ದು ಲೇಖಕ ರವಿ ಬೆಳಗೆರೆ ಅವರ ಲೇಖನಿ.

    ಹೌದು, ಭೀಮಾತೀರ ಹಂತಕರು ಎಂಬ ಪದ ಹುಟ್ಟುಹಾಕಿದ ರವಿ ಬೆಳಗೆರೆ ಎಂಬ ಖ್ಯಾತ ಲೇಖಕನನ್ನು ಕಳೆದುಕೊಂಡ ಭೀಮೆ ಒಡಲು ಕಂಬನಿಗರಿಯುತ್ತಿದೆ.

    ಭೀಮಾತೀರದೊಂದಿಗೆ ರವಿ ಬೆಳಗೆರೆ ಅವರ ಒಡನಾಟ ಅವಿಸ್ಮರಣೀಯ. ಅದೊಂದು ಕುಖ್ಯಾತ ಬರಹವಾದರೂ ರವಿ ಬೆಳಗೆರೆ ಮತ್ತು ಅವರು ನಡೆಸುತ್ತಿರುವ ಹಾಯ್ ಬೆಂಗಳೂರು ಪತ್ರಿಕೆಯ ಖ್ಯಾತಿ ಹೆಚ್ಚಿಸಿದ್ದು ಸುಳ್ಳಲ್ಲ‌.

    ಇದನ್ನೂ ಓದಿ: ನಿನ್ನೆ ಸಂಜೆಯಷ್ಟೇ ಸಂಭ್ರಮಿಸಿದ್ದ ಬೆಳಗೆರೆ ಕುಟುಂಬದಲ್ಲಿ ಬೆಳಗಾಗುವಷ್ಟರಲ್ಲಿ ಆವರಿಸಿತು ಶೋಕದ ಕಾರ್ಮೋಡ!

    ಪತ್ರಿಕೆಯಲ್ಲಿ ಬರುತ್ತಿದ್ದ ಸರಣಿಯಷ್ಟೇ ಅವರ ಭೀಮಾತೀರದ ಪುಸ್ತಕವನ್ನು ಜನ ಮುಗಿಬಿದ್ದು ಓದಿದ್ದರು. ಅಷ್ಟೇ ಅಲ್ಲ ಮುಂದೆ ಅದೇ ಹೆಸರಿನಲ್ಲಿ ನಿರ್ಮಾಣಗೊಳ್ಳುತ್ತಿದ್ದ ಸಿನಿಮಾವೊಂದು ವಿವಾದಕ್ಕೆ ಕಾರಣವಾಗಿ ಹೆಸರು ಬದಲಿಸಿಕೊಳ್ಳಬೇಕಾಯಿತು.

    ರವಿ ಬೆಳಗೆರೆ ಅವರ ಬರಹಕ್ಕೆ ಭೀಮಾತೀರದ ಜನ ಮನಸೋತಿದ್ದರು. ಇಲ್ಲಿನ ಒಂದೊಂದೇ ಹತ್ಯೆ ಬಗ್ಗೆ ಬೆಳಗೆರೆ ಬರೆಯುತ್ತಾ ಹೋದರು. ಪ್ರತಿಯಾಗಿ ಭೀಮಾತೀರದ ಜನ ಅವರನ್ನು ಬೆಳೆಸುತ್ತಾ ಹೋದರು.

    ಭೀಮಾತೀರದ ಹಂತಕ ಚಂದಪ್ಪ ಹರಿಜನ ಚರಿತ್ರೆ ಬರೆಯುವ ಮುನ್ನ ರವಿ ಬೆಳಗೆರೆ ಸಾಕಷ್ಟು ಬಾರಿ ವಿಜಯಪುರಕ್ಕೆ ಬಂದಿದ್ದರಾದರೂ ಇಂಡಿ ಎಂಬ ಪುಣ್ಯ ನೆಲಕ್ಕೆ ಭೇಟಿ ನೀಡಿರಲಿಲ್ಲ. ಸಂತರು, ಶರಣರು, ಸೂಫಿಗಳಿಗೆ ಹೆಸರಾದ ಇಂಡಿಗೆ ಕಾಲಿಟ್ಟಿದ್ದೇ ಭೀಮಾತೀರದ ಹಂತಕರ ಆಹ್ವಾನದ ಮೇರೆಗೆ ಎಂಬುದನ್ನು ಬೆಳಗೆರೆ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದರು.

    ಇದನ್ನೂ ಓದಿ: ಬದುಕಿಡೀ ಬರೆದ ರವಿ ಬೆಳಗೆರೆ; ಬರೆಯುತ್ತಲೇ ಬದುಕು ಮುಗಿಸಿದರು…

    ಇಲ್ಲಿನ ಲಿಂಬೆ ಬೆಳೆ ಬಗ್ಗೆ ಸಾಕಷ್ಟು ವರ್ಣನೆ ಮಾಡಿದ್ದರು. ಹೊಟ್ಟೆ ಹಸಿದು ಕಾಲ್ನಡಿಗೆಯಲ್ಲಿ ಸಾಗುತ್ತಿರುವಾಗಿ ರೈತ ಕುಟುಂಬವೊಂದು ಬಿಸಿ ಬಿಸಿ ರೊಟ್ಟಿ ಮಾಡಿ ಮಜ್ಜಿಗೆ ಕಾಲ ಕೊಟ್ಟಿದ್ದನ್ನು ಬೆಳೆಗೆರೆ ಭೀಮಾತೀರದ ವಿಷಯ ಬಂದಾಗಲೊಮ್ಮೆ ನೆನೆಯುತ್ತಲೇ ಇದ್ದರು.

    ಭೀಮಾತೀರದ ಕೊಲೆ ಪ್ರಕರಣಗಳಿಗೆ ಕೊನೆಯೇ ಇಲ್ಲವೇ ಎಂದು ಬರವಣಿಗೆಯುದ್ದಕ್ಕೂ ತಮ್ಮನ್ನೇ ತಾವು ಕೇಳಿಕೊಂಡರು. ಕೊನೆಗೆ ಈ ಎಲ್ಲ ಕುಕೃತ್ಯಗಳಿಗೆ ಸುಖಾಂತ್ಯ ಬಯಸಿದ್ದ ಲೇಖಕನೇ ಇಂದು ಇಲ್ಲವಾದ ಸುದ್ದಿ ಕೇಳಿ ಭೀಮಾತೀರ ದುಃಖತಪ್ತವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts