More

    ಭಾವಲೋಕದ ಸೇತುವೆ ನಾಟಕ

    ತೆಲಸಂಗ: ನಾಟಕಗಳು ಬಾಹ್ಯಲೋಕದಿಂದ ಭಾವಲೋಕಕ್ಕೆ ಹೋಗಲು ಸೇತುವೆ ಇದ್ದಂತೆ ಎಂದು ವಕೀಲ ಅಮೋಘ ಖೊಬ್ರಿ ಹೇಳಿದರು.

    ಗ್ರಾಮದಲ್ಲಿ ಶ್ರೀ ಗುರು ಕುಮಾರೇಶ್ವರ ನಾಟ್ಯ ಸಂಘ (ರಿ) ಹಾನಗಲ್ ಹಾಗೂ ಶ್ರೀ ಪುಟ್ಟರಾಜ ಕವಿ ಗವಾಯಿಗಳ ರಂಗಸಂಸ್ಥೆ ತೆಲಸಂಗ ಇವರ ಸಹಕಾರದೊಂದಿಗೆ ರಂಗಧಾರ ರೆಪರ್ಟರಿ ಕೊಪ್ಪಳ ಹಾಗೂ ಕಲ್ಲುರ ಸಾಂಸ್ಕೃತಿಕ ಕಲಾ ಸಂಘ (ರಿ) ಕಲ್ಲೂರ ಇವರಿಂದ ಕಾಲೇಜು ರಂಗಸಂಚಾರ 2023-24ರ ಪಿಯುಸಿ ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಪಠ್ಯಾಧಾರಿತ ಚಂದ್ರಶೇಖರ ಕಂಬಾರ ಅವರ ಬೆಪ್ಪು ತಕ್ಕಡಿ ಬೋಳೆಶಂಕರ ಹಾಗೂ ಪೂರ್ಣಚಂದ್ರ ತೇಜಸ್ವಿ ಅವರ ಕಷ್ಣೇಗೌಡರ ಆನೆ ನಾಟಕ ಪ್ರದರ್ಶನವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

    ವಿದ್ಯಾರ್ಥಿಗಳು ನಾಟಕವನ್ನು ನೋಡಿ ಸಂಭ್ರಮಿಸುವುದರೊಂದಿಗೆ ಪರೀಕ್ಷಾ ದಷ್ಠಿಯಿಂದಲೂ ಹೆಚ್ಚು ಅನುಕೂಲವಾಯಿತು ಎಂದು ಸಂತಸ ಹಂಚಿಕೊಂಡರು. ನಾಟಕ ನಿರ್ದೇಶಕ ಲಕ್ಷ್ಮಣ ಪೀರಗಾರ, ಹಿರಿಯರಾದ ಐ.ಎನ್.ಮುಜಾವರ, ಮಲ್ಲಿಕಾರ್ಜುನ ಹತ್ತಿ, ಪ್ರಾಚಾರ್ಯ ಸಂಗಮೇಶ ಬಸರಗಿ, ಉಪನ್ಯಾಸಕರಾದ ಬಿ.ಜಿ.ಸಾರ್ವಾಡ, ಸುರೇಶ ಸನಗೊಂಡ, ಬಿ.ಆರ್.ಪಾಟೀಲ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts