More

    ವಸಂತ ಮಾಸಾಚರಣೆಗೆ ಸಾಂಸ್ಕೃತಿಕ ಹಬ್ಬ

    ಬೆಂಗಳೂರು: ಭಾರತೀಯ ವಿದ್ಯಾಭವನವು ಇನ್ಫೋಸಿಸ್ ಪ್ರತಿಷ್ಠಾನದ ಸಹಯೋಗದೊಂದಿಗೆ ವಸಂತ ಮಾಸವನ್ನು ಸ್ವಾಗತಿಸಲು ಮೇ 25ರಿಂದ 31ರವರೆಗೆ ಬೃಹತ್ ಸಾಂಸ್ಕೃತಿಕ ಹಬ್ಬ ಆಯೋಜಿಸಿದೆ.

    25ರ ಸಂಜೆ 5 ಗಂಟೆಗೆ ವಸಂತೋತ್ಸವದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಇನ್ಫೋಸಿಸ್ ಲಿಮಿಟೆಡ್‌ನ ಉಪಾಧ್ಯಕ್ಷ ಸುನೀಲ್‌ಕುಮಾರ್ ಧಾರೇಶ್ವರ್, ಬಹುಭಾಷಾ ವಿದ್ವಾಂಸ ಶತಾವಧಾನಿ ಆರ್. ಗಣೇಶ್, ಭಾರತೀಯ ವಿದ್ಯಾಭವನದ ಉಪಾಧ್ಯಕ್ಷ ಚಿರಂಜೀವಿ ಸಿಂಗ್ ಸೇರಿ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಉತ್ಸವದಲ್ಲಿ ಮಿಥುನ್ ಶ್ಯಾಂ ತಂಡ ‘ವಸಂತ ವೈಭವ’ ಭರತನಾಟ್ಯ ಪ್ರದರ್ಶನ ನಡೆಸಿಕೊಡಲಿದ್ದಾರೆ.

    26ರಂದು ಗಾಯಕ ಪ್ರವೀಣ್ ಡಿ. ರಾವ್ ನೇತತ್ವದಲ್ಲಿ ‘ಕೋಗಿಲೆ ಹಾಡಿತು’ ಲಘು ಸಂಗೀತ ಕಾರ್ಯಕ್ರಮವಿದೆ. 27ರಂದು ಸಂಜೆ 6ಕ್ಕೆ ತಿರುಮಲೆ ಶ್ರೀನಿವಾಸ್ ಮತ್ತು ತಂಡದಿಂದ ‘ವಸಂತ ವಾದ್ಯಗೋಷ್ಠಿ’, ರಾತ್ರಿ 7.30ಕ್ಕೆ ಪವನ್ ರಂಗಾಚಾರ್ ಮತ್ತು ತಂಡದಿಂದ ‘ವಸಂತ ಗಾಯನ’ ನಡೆಯಲಿದೆ.
    28ರ ಸಂಜೆ 6ಕ್ಕೆ ಪ್ರತಿಭಾ ನಂದಕುಮಾರ್ ಅಧ್ಯಕ್ಷತೆಯಲ್ಲಿ ‘ವಸಂತ ಕವಿಗೋಷ್ಠಿ’ ಆಯೋಜಿಸಿದ್ದು, ರಾತ್ರಿ 7ಕ್ಕೆ ಶರ್ಮಿಳಾ ಮುಖರ್ಜಿ ಒಡಿಸ್ಸಿ ನೃತ್ಯ ಪ್ರದರ್ಶಿಸಲಿರುವರು. 29ರಂದು ಸಂಜೆ 6ಕ್ಕೆ ದಿವಾಕರ ಹೆಗಡೆ ಮತ್ತು ತಂಡದಿಂದ ‘ತಾಳ ಮದ್ದಳೆ’, ರಾತ್ರಿ 7ಕ್ಕೆ ವೀಣಾ ಮತ್ತು ಧನ್ಯ ತಂಡದಿಂದ ‘ಮೋಹಿನಿಯಟ್ಟಂ’ ಪ್ರದರ್ಶನವಿದೆ. 30ರಂದು ಸಂಜೆ 6ಕ್ಕೆ ಡಾ. ಲಲಿತಾ ಶ್ರೀನಿವಾಸನ್ ನಿರ್ದೇಶನದಲ್ಲಿ ‘ಬಾರೋ ವಸಂತ’ ಭರತನಾಟ್ಯ ಪ್ರದರ್ಶನ. ರಾತ್ರಿ 7ಕ್ಕೆ ಪ್ರತಿಭಾ ನಾರಾಯಣ ತಂಡದಿಂದ ‘ಮೋಹಿನಿಯಟ್ಟಂ’ ಪ್ರದರ್ಶನ ಏರ್ಪಡಿಸಲಾಗಿದೆ. 31ರ ಸಂಜೆ 6ಕ್ಕೆ ಪಂಡಿತ್ ಪರಮೇಶ್ವರ ಹೆಗಡೆ ತಂಡದಿಂದ ‘ಲಲಿತರಾಗ ರಸ’ ಹಿಂದುಸ್ತಾನಿ ಸಂಗೀತ, ರಾತ್ರಿ 7.30ಕ್ಕೆ ಡಾ. ಟಿ.ಎಸ್. ಸತ್ಯವತಿ ಅವರಿಂದ ‘ವಸಂತ ರಾಗ’ ಕರ್ನಾಟಕ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.

    ವಸಂತೋತ್ಸವದ ಈ ಎಲ್ಲ ದಿನ ವಸಂತ ಋತುವಿಗೆ ಸಂಬಂಧಿಸಿದ ಕಲಾ ಪ್ರದರ್ಶನವಿರುತ್ತದೆ. ಉತ್ಸವದಲ್ಲಿ ಪಾಲ್ಗೊಳ್ಳಲು ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ ಎಂದು ಭವನದ ನಿರ್ದೇಶಕರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts