More

    ಭಾವೈಕ್ಯದಿಂದ ಎಲ್ಲರೂ ಜೀವನ ಸಾಗಿಸಲಿ

    ಕುಕನೂರು: ಎಲ್ಲರೂ ಒಂದೇ ಎನ್ನುವ ಮನೋಭಾವನೆ ಹಾಗೂ ಭಾವೈಕ್ಯದೊಂದಿಗೆ ಬದುಕಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದು ಯಲಬುರ್ಗಾದ ಶ್ರೀಧರ ಮುರಡಿ ಹಿರೇಮಠದ ಶ್ರೀ ಬಸವಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ಪಟ್ಟಣದಲ್ಲಿ ನವೀಕರಣಗೊಂಡ ಇಟಗಿ ಮಸೂತಿ (ಮಸೀದಿ)ಯನ್ನು ಸೋಮವಾರ ಉದ್ಘಾಟಿಸಿ ಮಾತನಾಡಿ, ಹಬ್ಬ ಹರಿದಿನಗಳನ್ನು ಎಲ್ಲರೂ ಒಂದಾಗಿ ಆಚರಿಸಬೇಕು.

    ಇದನ್ನೂ ಓದಿ: ಭಾವೈಕ್ಯದಿಂದ ಎಲ್ಲರೂ ಜೀವನ ಸಾಗಿಸಲಿ

    ದೇವಸ್ಥಾನ, ಮಸೂತಿಗಳಲ್ಲಿ ಮನುಷ್ಯ ಪ್ರವೇಶ ಮಾಡಿದಾಗ ಶಾಂತಿ ಭಾವನೆಗಳು ಮೂಡಬೇಕು. ಬಡವರು, ಅನಾಥರಿಗೆ ದಾನ-ಧರ್ಮ ಮಾಡುವ ಮೂಲಕ ಎಲ್ಲರೂ ಒಂದೇ ಎಂಬ ಭಾವನೆಗಳನ್ನು ಬೆಳೆಸಿಕೊಳ್ಳಬೇಕು. ಯುವ ಜನಾಂಗಕ್ಕೆ ಸಂಪ್ರದಾಯ, ಭಾವೈಕ್ಯದ ಬೋಧನೆ ಅಗತ್ಯ ಎಂದರು.

    ಶ್ರೀ ಅಭಿನವ ಅನ್ನದಾನೇಶ್ವರ ಸ್ವಾಮೀಜಿ ಮಾತನಾಡಿ, ಉತ್ತರ ಕರ್ನಾಟಕ ಭಾಗದಲ್ಲಿ ಹಿಂದೂ-ಮುಸ್ಲಿಮರು ಮೊಹರಂ ಹಬ್ಬವನ್ನು ಸಾಮರಸ್ಯ, ಭಾವೈಕ್ಯದಿಂದ ಆಚರಿಸುತ್ತಾ ಬಂದಿದ್ದಾರೆ. ಇಂದಿಗೂ ಇಸ್ಲಾಂ ಧರ್ಮದ ಹಿರಿಯರು ಮಠ ಮಾನ್ಯಗಳ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ. ವೀರಶೈವ ಮಠಗಳು ಎಲ್ಲ ಧರ್ಮಗಳನ್ನು ಅಪ್ಪಿಕೊಳ್ಳುತ್ತವೆ.

    ಪ್ರೀತಿ, ತ್ಯಾಗದಿಂದ ಧರ್ಮ ಕಟ್ಟಬೇಕು. ಇಸ್ಲಾಂ ಶಾಂತಿ, ಶರಣಾಗತಿ ಎಂಬ ಅರ್ಥ ಸೂಚಿಸುತ್ತದೆ. ಸಮಾಜಕ್ಕೆ ಒಳೆಯದನ್ನು ಕೊಟ್ಟರೇ ಮರಳಿ ನಮಗೆ ಒಳೆಯದನ್ನು ಕೊಡುತ್ತದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts