More

    ಮಹಾಲಕ್ಷ್ಮೀ ದೇವಿ ಸನ್ನಿಧಿಯಲ್ಲಿ ಭಸ್ಮ ಕಾರ್ಯಕ್ರಮ

    ರಟ್ಟಿಹಳ್ಳಿ: ಕೊಲ್ಲಾಪುರದ ಮಹಾಲಕ್ಷ್ಮೀ ದೇವಿ ಎಂದೇ ಪ್ರಸಿದ್ಧಿ ಹೊಂದಿರುವ ಇಲ್ಲಿನ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಸೋಮವಾರ ಅಪಾರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಭಸ್ಮ ಮತ್ತು ವಿವಿಧ ಧಾರ್ವಿುಕ ಕಾರ್ಯಕ್ರಮಗಳು ಸಂಭ್ರಮದಿಂದ ಜರುಗಿದವು.

    ದೀಪಾವಳಿ ಅಮಾವಾಸ್ಯೆ ನಿಮಿತ್ತ ಮಹಾಲಕ್ಷ್ಮೀ ದೇವಿಗೆ ಬೆಳಗ್ಗೆ ಅಭಿಷೇಕ ಮತ್ತು ವಿಶೇಷ ಅಲಂಕಾರ ಪೂಜೆ ಕಾರ್ಯಕ್ರಮಗಳು ಜರುಗಿದವು. ಬೆಳಗ್ಗೆ 6 ಗಂಟೆಯಿಂದ ಭಕ್ತರು ಸರತಿಯಲ್ಲಿ ನಿಂತು ದೇವಿ ದರ್ಶನ ಪಡೆದರು. ದೇವಸ್ಥಾನದ ಮುಂಭಾಗದಲ್ಲಿ ಇರುವ ಅಗ್ನಿಕುಂಡದಲ್ಲಿ ಬೆಳಗ್ಗೆಯಿಂದ ಭಕ್ತರು ಒಣಕೊಬ್ಬರಿ ಬಟ್ಟಲು, ತುಪ್ಪ, ವಸ್ತ್ರಗಳನ್ನು ಹಾಕುವ ಮೂಲಕ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು.

    ರಟ್ಟಿಹಳ್ಳಿ, ಶಿರಗಂಬಿ, ಮಕರಿ, ಕುಡುಪಲಿ, ಹಿರೇಮೊರಬ, ದೊಡ್ಡಗುಬ್ಬಿ, ಸೇರಿದಂತೆ ಸುತ್ತಮುತ್ತಲಿನ ನೂರಾರು ಗ್ರಾಮಗಳು ಮತ್ತು ವಿವಿಧ ಜಿಲ್ಲೆಗಳಿಂದ ಅನೇಕ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು.

    ರಾತ್ರಿ 9.30ಕ್ಕೆ ದೇವಿಯ ಸಮ್ಮುಖದಲ್ಲಿ ಶ್ರೀ ವೀರಭದ್ರೇಶ್ವರ ಹಾಗೂ ಬೀರಲಿಂಗೇಶ್ವರ ಮತ್ತು ಹೊಳೆಸಾಲು ದುರ್ಗಾದೇವಿ ಆಗಮನದ ನಂತರ ಮುತೆôದೆಯರು ಉಡಿ ತುಂಬಿದರು. ಬಳಿಕ ಅಗ್ನಿಕುಂಡದಲ್ಲಿ ಭಸ್ಮ ಕಾರ್ಯಕ್ರಮ ಆರಂಭವಾಯಿತು. ರಾತ್ರಿ ಡೊಳ್ಳು ಕುಣಿತ ಮತ್ತು ಭಜನೆ ಜರುಗಿತು. ಇಲ್ಲಿನ ಸನ್ನಿಧಿಯಲ್ಲಿ ದೀಪಾವಳಿಯ ಅಮಾವಾಸ್ಯೆಯಂದು ಸಿಗುವ ಭಸ್ಮವನ್ನು ರೈತರು ತಮ್ಮ ಜಮೀನುಗಳಿಗೆ ಹಾಕುವುದರಿಂದ ಉತ್ತಮ ಮಳೆ, ಬೆಳೆ, ಜಾನುವಾರುಗಳಿಗೆ, ಮನೆಗಳಲ್ಲಿ ಬಳಸುವುದರಿಂದ ಉತ್ತಮ ಆರೋಗ್ಯ ಹಾಗೂ ಅಭಿವೃದ್ಧಿ ಪ್ರಾಪ್ತಿಯಾಗುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts