More

    ಶಿಕ್ಷಕರ ಫೆಡರೇಶನ್‌ನಿಂದ `ಭಾರತ ಯಾತ್ರೆ’

    ಧಾರವಾಡ: ಶಿಕ್ಷಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಎಂದು ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಫೆಡರೇಶನ್ ಕಾರ್ಯಾಧ್ಯಕ್ಷ ಬಸವರಾಜ ಗುರಿಕಾರ ಹೇಳಿದರು.
    ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ. ೫ರಿಂದ ಅ. ೫ರವರೆಗೆ ೪ ತಂಡಗಳಲ್ಲಿ ಭಾರತ ಯಾತ್ರೆ ಆರಂಭವಾಗಲಿದೆ. ಮೊದಲ ತಂಡ ಕನ್ಯಾಕುಮಾರಿಯಿಂದ ಹೊರಟು ಕೇರಳ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಗೋವಾ, ಮಹಾರಾಷ್ಟç, ಮಧ್ಯಪ್ರದೇಶ, ಉತ್ತರಪ್ರದೇಶ, ಹರಿಯಾಣದಲ್ಲಿ ಸಂಚರಿಸಿ ಅ. ೫ರಂದು ದೆಹಲಿ ತಲುಪಲಿದೆ. ನಾನು ಇದರ ನೇತೃತ್ವ ವಹಿಸಲಿದ್ದು, ಫೆಡರೇಶನ್ ಖಜಾಂಚಿ ಹರಿಗೋವಿಂದನ್, ಉಪ ಮಹಾ ಪ್ರಧಾನ ಕಾರ್ಯದರ್ಶಿ ರಂಗರಾಜನ್, ಇತರರು ಭಾಗಹಿಸಲಿದ್ದಾರೆ ಎಂದರು.
    ೨ನೇ ತಂಡ ಆಸ್ಸಾಂ ರಾಜಧಾನಿ ಗುವಾಹಟಿಯಿಂದ ಹೊರಟು ಪಶ್ಚಿಮಬಂಗಾಲ, ಒಡಿಶಾ, ಜಾರ್ಖಂಡ್, ಬಿಹಾರ, ಉತ್ತರಪ್ರದೇಶ ಮೂಲಕ ದೆಹಲಿ ತಲುಪಲಿದೆ. ೩ನೇ ತಂಡ ಗುಜರಾತ್‌ನ ಸೋಮನಾಥ ಮಂದಿರದಿAದ ಹೊರಟು ಮಹಾರಾಷ್ಟç, ಮಧ್ಯಪ್ರದೇಶ, ರಾಜಸ್ಥಾನ, ಹರಿಯಾಣ ಮೂಲಕ ದೆಹಲಿ ತಲುಪಲಿದೆ. ೪ನೇ ಯಾತ್ರೆಯು ಪಂಜಾಬ್‌ನಿAದ ಆರಂಭಗೊAಡು ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಉತ್ತರ ಪ್ರದೇಶ ಮೂಲಕ ದೆಹಲಿ ತಲುಪಲಿದೆ ಎಂದರು.
    ನೂತನ ಪಿಂಚಣಿ ಯೋಜನೆ ರದ್ದುಗೊಳಿಸಿ ಹಳೇ ಪಿಂಚಣಿ ಯೋಜನೆ ಜಾರಿಗೊಳಿಸುವುದು, ನೂತನ ಶಿಕ್ಷಣ ನೀತಿಯಲ್ಲಿನ ಲೋಪದೋಷ ಹಾಗೂ ಶಿಕ್ಷಕ ವಿರೋಽ ನೀತಿಗಳನ್ನು ಕೈ ಬಿಡುವುದು, ಶಿಕ್ಷಕರಿಗೆ ಏಕರೂಪ ವೇತನ ಶ್ರೇಣಿ ನಿಗದಿಪಡಿಸುವುದು, ಅತಿಥಿ ಶಿಕ್ಷಕರನ್ನು ಕಾಯಂಗೊಳಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತ ಯಾತ್ರೆ ಕೈಗೊಳ್ಳಲಾಗುತ್ತಿದೆ. ೪ ಯಾತ್ರೆಗಳ ಮೂಲಕ ಅಲ್ಲಲ್ಲಿ ಬಹಿರಂಗ ಸಮಾವೇಶಗಳನ್ನು ನಡೆಸಿ ಆಯಾ ರಾಜ್ಯ ಸರ್ಕಾರಗಳಿಗೆ ಹಕ್ಕೊತ್ತಾಯ ಮಂಡಿಸಲಾಗುವುದು ಎಂದರು.
    ಮೊದಲ ಯಾತ್ರೆಯು ಸೆ. ೧೭ರಂದು ಹುಮ್ನಾಬಾದ್ ಮೂಲಕ ಕರ್ನಾಟಕ ಪ್ರವೇಶಿಸಲಿದೆ. ಅಲ್ಲಿಂದ ಹೊರಟು ೨೧ರಂದು ಧಾರವಾಡ ನಂತರ ಶಿರಸಿ ಮೂಲಕ ಗೋವಾಗೆ ತೆರಳುವುದು. ಎಲ್ಲ ಯಾತ್ರೆಗಳು ಅ. ೫ರಂದು ದೆಹಲಿಯ ಜಂತರಮAತರ್‌ನಲ್ಲಿ ತೆರಳಿ ಬಹಿರಂಗ ಸಮಾವೇಶ ನಡೆಸಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts