More

    ಪ್ರಧಾನಿ ಜನಪರ ಯೋಜನೆಗಳಿಂದ ಭಾರತ ಸ್ಮಾರ್ಟ್; ಸಣ್ಣ ಅಂಗಡಿಗಳಲ್ಲೂ ಡಿಜಿಟಲ್ ಪೇಮೆಂಟ್ ವ್ಯವಸ್ಥೆ

    ಶಿಕಾರಿಪುರ: ಭಾರತ ವಿಕಸಿತ ಭಾರತವಾಗಲು ನಾವು ಪ್ರಧಾನಿ ಅವರ ಜನಪರವಾದ ಯೋಜನೆಗಳನ್ನು ಸಮರ್ಥವಾಗಿ ಅನುಷ್ಠಾನಗೊಳಿಸಲು ಪ್ರೇರಕರಾಗಬೇಕು ಮತ್ತು ಪೂರಕವಾಗಿ ಕೆಲಸ ಮಾಡಬೇಕು ಎಂದು ಗ್ರಾಪಂ ಅಧ್ಯಕ್ಷ ಎಸ್.ನಿರಂಜನ್ ಹೇಳಿದರು.

    ತಾಲೂಕಿನ ತೊಗರ್ಸಿಯಲ್ಲಿ ಮಂಗಳವಾರ ವಿಕಸಿತ ಭಾರತ ಸಂಕಲ್ಪ ಯಾತ್ರೆ ಅಡಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಆರೋಗ್ಯ, ಶಿಕ್ಷಣ, ಮೂಲ ಸೌಕರ್ಯ, ಉದ್ಯೋಗ, ಕೃಷಿಯಲ್ಲಿ ಇನ್ನೂ ಹೆಚ್ಚಿನ ಸುಧಾರಣೆ ಆಗಬೇಕು. ಕೌಶಲಾಭಿವೃದ್ಧಿಗೆ ಆದ್ಯತೆ ನೀಡಬೇಕು. ಭಾರತ 2047ರ ವೇಳೆಗೆ ವಿಶ್ವದಲ್ಲೇ ಅಭಿವೃದ್ಧಿ ಹೊಂದಿದ ಹಿರಿಯಣ್ಣನಾಗಿ ನಿಲ್ಲಬೇಕು ಎಂಬ ಉದ್ದೇಶದಿಂದ ಪ್ರಧಾನಿ ಮೋದಿ ಈ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಇದೊಂದು ಸಾಮಾಜಿಕ ಕ್ರಾಂತಿ ಎಂದರು.
    ನಾವೆಲ್ಲರೂ ಬಹುತೇಕ ಒಂದಿಲ್ಲೊಂದು ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಪಾಲುದಾರರೇ ಆಗಿದ್ದೇವೆ. ಜನತೆ ಈಗ ಡಿಜಿಟಲ್ ವ್ಯವಹಾರಕ್ಕೆ ಹೊಂದಿಕೊಂಡಿದ್ದಾರೆ. ಪುಟ್ಟ ಅಂಗಡಿಗಳಲ್ಲೀ ಸ್ಕಾೃನರ್ ಇದೆ. ಕೇವಲ 5 ರೂ. ಅನ್ನು ಜನ ಇದರ ಮೂಲಕ ಪಾವತಿಸುತ್ತಿದ್ದಾರೆ. ಇದು ಡಿಜಿಟಲ್ ಇಂಡಿಯಾ ಯೋಜನೆಯ ಅನುಷ್ಠಾನದ ಫಲ ಎಂದು ಹೇಳಿದರು.
    ಹೂ ಮಾರುವರು, ಬುಟ್ಟಿ ಹೆಣೆಯುವವರು, ಮೀನಿನ ಬಲೆ ತಯಾರಿಸುವವರು ಸೇರಿದಂತೆ ಅತಿ ಸಣ್ಣ ಸಣ್ಣ ತಯಾರಕರಿಗೆ ವಿಶ್ವಕರ್ಮ ಯೋಜನೆ ಅತ್ಯಂತ ಉಪಯುಕ್ತವಾಗಿದೆ. ಫಸಲ್ ಬಿಮ ಯೋಜನೆಯು ರೈತರಿಗೆ ವರದಾನವಾಗಿದೆ. ಬರಗಾಲದಲ್ಲಿ ರೈತರ ಆತ್ಮಹತ್ಯೆಗಳು ಬಹಳಷ್ಟು ಕಡಿಮೆಯಾಗಿವೆ ಎಂದರು.
    ಗ್ರಾಪಂ ಉಪಾಧ್ಯಕ್ಷೆ ಕವಿತಾ, ಸದಸ್ಯರಾದ ಸುರೇಶ್, ಮೂಕಪ್ಪ, ಗೌರಮ್ಮ, ಕವಿತಾ, ನಸರೀನ್ ಬಾನು, ಬ್ಯಾಂಕ್ ಆಫ್ ಬರೋಡಾದ ಮನೀಷ್, ಆದಿತ್ಯ ಗ್ಯಾಸ್‌ನ ಗಂಗಾಧರ್, ಆರೋಗ್ಯ ಇಲಾಖೆಯ ಡಾ. ರಾಹುಲ್, ಪಿಡಿಒ ನಾಗರಾಜ್, ತಾಪಂ ಮಾಜಿ ಅಧ್ಯಕ್ಷ ಕವಲಿ ಸುಬ್ರಹ್ಮಣ್ಯ, ಅರಣ್ಯ ಅಭಿವೃದ್ಧಿ ನಿಗಮದ ಮಾಜಿ ಉಪಾಧ್ಯಕ್ಷ ಕೊಳಗಿ ರೇವಣಪ್ಪ, ಭೋವಿ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಸಣ್ಣಹನುಮಂತಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಜೆ.ಪರಮೇಶ್ವರಪ್ಪ, ಶಿವಯೋಗಿ ಗೌಡ, ಮಲ್ಲನಗೌಡ, ಎಂ.ಎನ್.ಗವಳಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts