More

    ಹಸಿರು ವಲಯ ರಕ್ಷಣೆ ಸರ್ವರ ಹೊಣೆ

    ಭರಮಸಾಗರ: ಕೊರೊನಾ ವಿಷಯದಲ್ಲಿ ಚಿತ್ರದುರ್ಗ ಜಿಲ್ಲೆ ಹಸಿರು ವಲಯದಲ್ಲಿದ್ದು, ಇದರ ರಕ್ಷಣೆ ಸರ್ವರ ಹೊಣೆ ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು.

    ಪ್ರವಾಸಿ ಮಂದಿರದಲ್ಲಿ ಶನಿವಾರ ವಿವಿದ ಇಲಾಖೆ ಹಾಗೂ ಜನಪ್ರತಿನಿದಿಗಳೊಂದಿಗೆ ಕರೊನಾ ತಡೆಗೆ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಚರ್ಚಿಸಿದ ವೇಳೆ ಮಾತನಾಢಿದರು.

    ಹೋಬಳಿಯ ಜನತೆ ಎಲ್ಲದಕ್ಕೂ ಹೆಚ್ಚಿಗೆ ದಾವಣಗೆರೆಯನ್ನೇ ಆಶ್ರಯಿಸಿದ್ದಾರೆ. ಈಗಾಗಲೇ ದಾವಣಗೆರೆ ಕೆಂಪು ವಲಯಕ್ಕೆ ಬಂದಿದೆ. ಆದ್ದರಿಂದ ಇಲ್ಲಿನ ಜನತೆ ಅಲ್ಲಿಗೆ ಅನಗತ್ಯ ಭೇಟಿ ನೀಡಬಾರದು ಎಂದು ಮನವಿ ಮಾಡಿದರು.

    ಕೆಂಪು ವಲಯದಿಂದ ಜಿಲ್ಲೆಯ ಗಡಿ ಪ್ರವೇಶಿಸುವ ವಾಹನಗಳಿಗೆ ಕಡಿವಾಣ ಹಾಕಬೇಕು. ಪಾಸ್ ಇದ್ದರೆ ಆರೋಗ್ಯ ತಪಾಸಣೆ ನಡೆಸಿ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು ಎಂದು ಸೂಚಿಸಿದರು.

    ಜಿಲ್ಲಾ ಪಂಚಾಯಿತಿ ಸದಸ್ಯ ಡಿ.ವಿ.ಶರಣಪ್ಪ, ತಾಪಂ ಸದಸ್ಯರಾದ ಕಲ್ಲೇಶ್, ನಾಗೇಂದ್ರಪ್ಪ, ಕೋಗುಂಡೆ ಮಂಜುನಾಥ್, ಬಿಜೆಪಿ ಮಂಡಲ ಅಧ್ಯಕ್ಷ ಶೈಲೇಶ್ ಕುಮಾರ್, ಸಾಮಿಲ್ ಶಿವಣ್ಣ, ಸಿ.ಟಿ.ಮಹಂತೇಶ್, ಬೆಸ್ಕಾಂ ನಿವೃತ್ತ ಇಂಜಿನಿಯರ್ ಚಂದ್ರಶೇಖರಪ್ಪ, ಲೋಹಿತಾಕ್ಷಪ್ಪ, ಕಿರಣ್, ಯಶಸ್, ಕೊಳಹಾಳು ಶರಣಪ್ಪ, ನಾರಾಯಣರಾವ್, ಪಿಎಸ್‌ಐ ರಾಜು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts