More

    ಮೌಢ್ಯತೆಗೆ ಸ್ಮಾರಕಗಳು ನಾಶ

    ಭರಮಸಾಗರ: ಮೂಢನಂಬಿಕೆ ಹಾಗೂ ತಪ್ಪು ಗ್ರಹಿಕೆಯಿಂದ ಸಾವಿರಾರು ವರ್ಷಗಳ ಇತಿಹಾಸ ತಿಳಿಸಿಕೊಡುವ ಸ್ಮಾರಕಗಳನ್ನು ನಾಶ ಪಡಿಸುತ್ತಿರುವುದು ಕಳವಳಕಾರಿ ವಿಷಯ ಎಂದು ಪುರಾತತ್ವ ಇಲಾಖೆ ಅಧಿಕಾರಿ ಪ್ರಹ್ಲಾದ್ ತಿಳಿಸಿದರು.

    ಭರಮಸಾಗರ ಸರ್ಕಾರಿ ಪ್ರಥಮದರ್ಜೆ ಕಾಲೇಜು ಎನ್ನೆಸ್ಸೆಸ್ ಘಟಕ, ಚಿತ್ರದುರ್ಗ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಆಶ್ರಯದಲ್ಲಿ ಇಸಾಮುದ್ರ ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸ್ಮಾರಕಗಳ ಸ್ವಚ್ಛತಾ ಕಾರ್ಯದಲ್ಲಿ ಮಾತನಾಡಿದರು.

    ಸ್ಮಾರಕಗಳನ್ನು ನಾಶ ಮಾಡಿದರೆ ಇತಿಹಾಸ ಕಳೆದು ಹೋಗುತ್ತದೆ. ಹೊಲ, ತೋಟ ಅಥವಾ ಬೇರೆ ಯಾವುದೇ ಸ್ಥಳಗಳಲ್ಲಿ ಪ್ರಾಚೀನ ಕಾಲದ ವಸ್ತುಗಳು ಇದ್ದರೆ ಅವುಗಳನ್ನು ಸಂರಕ್ಷಿಸಿ ಪುರಾತತ್ವ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರೆ ಅವುಗಳನ್ನು ಸಂರಕ್ಷಿಸಿ ಇಡಲಾಗುತ್ತದೆ ಎಂದರು.

    ಗ್ರಾಮದ ಐತಿಹಾಸಿಕ ಪ್ರಸಿದ್ಧ ಮೈಲಾರಲಿಂಗ, ಆಂಜನೇಯ ಸ್ವಾಮಿ ದೇವಸ್ಥಾನ ಬಳಿ ಶಾಸನಗಳ ಸಂರಕ್ಷಣೆಗೆ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು. ಎನ್ನೆಸ್ಸೆಸ್ ವಿದ್ಯಾರ್ಥಿಗಳು ಊರಿನ ಬೀದಿಗಳಲ್ಲಿ ಸಂಚರಿಸಿ ಸ್ಮಾರಕಗಳ ಸಂರಕ್ಷಣೆ ಕುರಿತು ಅರಿವು ಮೂಡಿಸಿದರು.

    ಪ್ರಾಂಶುಪಾಲ ಡಾ.ಆರ್.ಮಹೇಶ್, ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಲೋಕೇಶನಾಯ್ಕ, ಡಾ.ಪ್ರವೀಣ್ ಕುಮಾರ್, ಸಂಗಮೇಶ್ವರ, ಎನ್.ಎಸ್.ಚಿದಾನಂದದಪ್ಪ, ಡಾ.ವೀರೇಂದ್ರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts