More

    ಕೆರೆ ಮಣ್ಣನ್ನು ಜಮೀನಿಗೆ ಬಳಸಿ ಲಾಭ ಗಳಿಸಿ

    ಭರಮಸಾಗರ: ಕೆರೆಯ ಮಣ್ಣನ್ನು ಜಮೀನಿಗೆ ಹೇರಿಕೊಳ್ಳುವುದರಿಂದ ಅಧಿಕ ಇಳುವರಿ ಜತೆಗೆ ಅಂತರ್ಜಲ ಹೆಚ್ಚಳಕ್ಕೂ ಅನುಕೂಲವಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಐಇಸಿ ಸಂಯೋಜಕ ರವೀಂದ್ರನಾಥ್ ತಿಳಿಸಿದರು.

    ಗ್ರಾಮ ಪಂಚಾಯಿತಿ ಆವರಣದಲ್ಲಿ ಜಲಾಮೃತ ಸಮಿತಿಯಿಂದ ಆಯೋಜಿಸಿದ್ದ ಜಲಾಮೃತ ಯೋಜನೆ ಮಾಹಿತಿ ಮತ್ತು ಜಾಗೃತಿ ಸಭೆಯಲ್ಲಿ ಮಾತನಾಡಿದರು.

    ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ಜಲಮೂಲಗಳ ಪುನಶ್ಚೇತನಕ್ಕೆ ಜಲಾಮೃತ ಯೋಜನೆ ಸಹಕಾರಿಯಾಗಿದೆ. ಇದರಡಿ ಕೆರೆ ಹೂಳೆತ್ತಲಾಗುತ್ತದೆ. ರೈತರು ನಿಗದಿಪಡಿಸಿದ ವಂತಿಗೆ ಪಾವತಿಸಿ ತಮಗೆ ಬೇಕಾದಷ್ಟು ಫಲವತ್ತಾದ ಮಣ್ಣನ್ನು ಜಮೀನುಗಳಿಗೆ ಸ್ವಂತ ಖರ್ಚಿನಲ್ಲಿ ಸಾಗಿಸಿಕೊಳ್ಳಬಹುದು ಎಂದು ತಿಳಿಸಿದರು.

    ಸಂಪನ್ಮೂಲ ವ್ಯಕ್ತಿ ಸತ್ಯನಾರಾಯಣ್ ಮಾತನಾಡಿ, ಯೋಜನೆಯಡಿ ಹೂಳೆತ್ತಲು ಭರಮಸಾಗರ ವ್ಯಾಪ್ತಿಯ ದೊಡ್ಡಕೆರೆ, ಚಿಕ್ಕಕೆರೆ, ಬೇವಿನಹಳ್ಳಿ ಕೆರೆಗಳು ಒಳಪಟ್ಟಿವೆ. ಮೊದಲ ಹಂತದ ಕಾಮಗಾರಿಯನ್ನು ಫೆ.28 ರೊಳಗಾಗಿ ಪೂರ್ಣಗೊಳಿಸಲು 12 ಲಕ್ಷ ರೂ. ಟೆಂಡರ್ ಆಗಿದೆ ಎಂದು ತಿಳಿಸಿದರು.

    ಪಿಡಿಒ ಶ್ರೀದೇವಿ, ತಾಪಂ ಸದಸ್ಯ ಕಲ್ಲೇಶ್, ತಾಂತ್ರಿಕ ಸಹಾಯಕ ದಿನೇಶ್, ಗ್ರಾಪಂ ಸದಸ್ಯರಾದ ನಿರಂಜನ್, ಸಿ.ಟಿ. ಮಹಾಂತೇಶ್, ಜಯ್ಯಣ್ಣ, ಸಂತೋಷ್, ಚನ್ನಮ್ಮ, ಲೋಲಾಕ್ಷಮ್ಮ, ನಾಗರಾಜ್, ಶಾಂತವೀರಪ್ಪ, ಎನ್.ಟಿ. ಶಿವರಾಜ್, ಟಿ. ತಿಪ್ಪೇಸ್ವಾಮಿ, ಓಂಕಾರಪ್ಪ, ಗ್ರಾಪಂ ಸಿಬ್ಬಂದಿ, ಕೃಷಿ ಅಧಿಕಾರಿ ಶ್ರೀನಿವಾಸ್, ಸಹಾಯಕ ಕೃಷಿ ಅಧಿಕಾರಿ ಪತ್ತಾರ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts