More

    ಯಕ್ಷಗಾನ ಶ್ರೀಮಂತಗೊಳಿಸಿದ ಹೊಸ್ತೋಟ ಭಾಗವತರು

    ಅಂಕೋಲಾ: ಯಕ್ಷಋಷಿ ಹೊಸ್ತೋಟ ಮಂಜುನಾಥ ಭಾಗವತ ಅವರು 250ಕ್ಕೂ ಹೆಚ್ಚು ಪ್ರಸಂಗಳನ್ನು ರಚಿಸಿ, ವಿವಿಧೆಡೆ ಸಾವಿರಾರು ಜನರಿಗೆ ತರಬೇತಿ ನೀಡಿ ಯಕ್ಷಗಾನವನ್ನು ಶ್ರೀಮಂತಗೊಳಿಸಿದ ಮೋತಿಗುಡ್ಡದ ಯಕ್ಷ ಗುರು. ಅವರು ಇಂದಿನ ಹಾಗೂ ಮುಂದಿನ ಪೀಳಿಗೆಯವರಿಗೆ ಪ್ರೇರಕವಾಗಿದ್ದಾರೆ ಎಂದು ಶಾಸಕಿ ರೂಪಾಲಿ ಎಸ್. ನಾಯ್ಕ ಹೇಳಿದರು.
    ತಾಲೂಕಿನ ಮೋತಿ ಗುಡ್ಡದಲ್ಲಿ ಶುಕ್ರವಾರ ಅಶ್ವತ್ಥ ಧಾಮ ಹಾಗೂ ದಿ. ಮಂಜುನಾಥ ಭಾಗವತರ ಪುತ್ಥಳಿ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
    ಕ್ಷೇತ್ರ ಅಭಿವೃದ್ಧಿಗೆ ಯಾವತ್ತೂ ಸಿದ್ಧ. ಮೋತಿಗುಡ್ಡದಲ್ಲಿ ಸಭಾಭವನ ಮತ್ತು ರಸ್ತೆ ನಿರ್ವಿುಸಿಕೊಡುವ ಜವಾಬ್ದಾರಿ ನನ್ನ ಮೇಲಿದೆ ಎಂದರು.
    ಯಕ್ಷಗಾನದ ಹಿರಿಯ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಮಾತನಾಡಿ, ಜಿಲ್ಲೆಯಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಒಳಾಂಗಣ ಥಿಯೇಟರ್ ನಿರ್ವಣವಾಗಬೇಕು. ಈ ಮೂಲಕ ಯುವ ಯಕ್ಷಗಾನ ಪಟುಗಳಿಗೆ ಅನುಕೂಲವಾಗಲಿದೆ ಎಂದರು.
    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಅಶ್ವತ್ಥ ಧಾಮ ಅಭಿವೃದ್ಧಿ ಸಮಿತಿ ಅಧ್ಯಕ್ಷ, ಮತ್ತು ಪರಿಸರ ಬರಹಗಾರ ಶಿವಾನಂದ ಕಳವೆ ಮಾತನಾಡಿ, ಭಾಗವತರ ನೆನಪುಗಳ ಜತೆಯಲ್ಲಿ ಅವರೊಂದಿಗೆ ಒಡನಾಟದ ಕುರುಹ, ಯಕ್ಷಗಾನದ ಹಸ್ತಪತ್ರಿ ಮತ್ತಿತರ ಪರಿಕರಗಳನ್ನು ನಮ್ಮೊಡನೆ ಹಂಚಿಕೊಳ್ಳಬೇಕು ಎಂದರು. ವಸಂತಕುಮಾರ ಕತಗಾಲ ಪ್ರಾಸ್ತ್ತಾವಿಕವಾಗಿ ಮಾತನಾಡಿದರು.
    ಮೂರ್ತಿ ಕಲಾಕಾರ ಕಾರ್ಕಳದ ಗುಣವಂತೇಶ್ವರ ಭಟ್ಟರನ್ನು ಮತ್ತು ಮಂಜುನಾಥ ಭಾಗವತರ ಹಿತೈಷಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
    ಮೋತಿಗುಡ್ಡದ ಮಾಧವ ಹೊಸ್ಮನಿ, ಶಂಕರ ಭಾಗವತ, ನಾಗರಾಜ ಜೋಶಿ, ಜಿ.ಎಸ್. ಭಟ್ಟ ಹೊಸ್ತೋಟ, ಜಗದೀಶ ನಾಯಕ, ಗೋಪಾಲಕೃಷ್ಣ ವೈದ್ಯೆ ಇದ್ದರು. ಗಿರೀಶ ಭಟ್ಟ ಸ್ವಾಗತಿಸಿದರು, ಭಾಸ್ಕರ ಹೆಗಡೆ ನಿರ್ವಹಿಸಿದರು, ನಾರಾಯಣ ಹೊಸ್ಮನಿ ವಂದಿಸಿದರು. ಕಾರ್ಯಕ್ರಮ ಬಳಿಕ ಯಕ್ಷಗಾನ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts