More

    ಆರ್ಥಿಕ ಬೆಳವಣಿಗೆಗಾಗಿ ಮರಾಠ ಸಮಾಜಕ್ಕೆ 2ಎ ಮೀಸಲಾತಿ ನೀಡಿ

    ಬೆಳಗಾವಿ: ಕರ್ನಾಟಕದಲ್ಲಿ ಮರಾಠ ಸಮಾಜ ಗುಂಪು-ಪಂಗಡಗಳಲ್ಲಿ ವಿಭಜನೆಯಾಗಿದೆ. ಎಲ್ಲರನ್ನೂ ಒಗ್ಗೂಡಿಸುವ ಪ್ರಯತ್ನ ಮಾಡಬೇಕಿದೆ. ರಾಜ್ಯದಲ್ಲಿ ಮರಾಠ ಸಮುದಾಯದ 70 ಲಕ್ಷ ಜನರಿದ್ದು, ಸಮುದಾಯಕ್ಕೆ ಸರ್ಕಾರ ಕೂಡಲೇ 2ಎ ಮೀಸಲಾತಿ ನೀಡಬೇಕು ಎಂದು ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಆಗ್ರಹಿಸಿದರು.
    ನಗರದ ವಡಗಾವಿಯ ಆದರ್ಶ ವಿದ್ಯಾಮಂದಿರದಲ್ಲಿ ಸಕಲ ಮರಾಠ ಸಮಾಜ ಬೆಳಗಾವಿ ಸಂಘಟನೆಯಿಂದ ಆಯೋಜಿಸಿದ್ದ ಶೋಭಾಯಾತ್ರೆ, ಜಗದ್ಗುರು ವೇದಾಂತ ಮಂಜುನಾಥ ಭಾರತಿ ಶ್ರೀಗಳ ಗುರುವಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ರಾಜಕೀಯದಲ್ಲಿರುವ ಮರಾಠ ಸಮುದಾಯದವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಲು ನಾವು ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ. ನಮ್ಮ ಸಮಾಜದ ಹಕ್ಕನ್ನು ನಮಗೆ ನೀಡಲಿ ಎಂದು ಸರ್ಕಾರವನ್ನು ಆಗ್ರಹಿಸಲು ಸೇರಿದ್ದೇವೆ ಎಂದರು. ಛತ್ರಪತಿ ಶಿವಾಜಿ ಮಹಾರಾಜರು ಎಲ್ಲ ಜಾತಿಯನ್ನು ಒಗ್ಗೂಡಿಸಿಕೊಂಡು ಹಿಂದವಿ ಸ್ವರಾಜ್ ಸ್ಥಾಪನೆ ಮಾಡಿದ್ದರು. ಇದೀಗ ಆರ್ಥಿಕವಾಗಿ ಮರಾಠ ಸಮಾಜವನ್ನು ಮುಂದೆ ತರಲು ಸಂವಿಧಾನಿಕವಾಗಿ ಸಲ್ಲಬೇಕಾದ ಮೀಸಲಾತಿ ಸೌಲಭ್ಯವನ್ನು ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿಸಬೇಕಿದ್ದು, ಇದಕ್ಕಾಗಿ ಹೋರಾಡಲು ಸಮಾಜವನ್ನು ಒಗ್ಗೂಡಿಸಬೇಕಿದೆ ಎಂದರು.

    ಸಕಲ ಮರಾಠ ಸಮಾಜದ ಬೆಳಗಾವಿ ಮುಖಂಡ ಕಿರಣ ಜಾಧವ ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜರ ನೆರವಿನಲ್ಲಿ ಬೆಳೆದ ವೀರತ್ವದ ಸಮಾಜ ಮರಾಠ ಸಮಾಜವಾಗಿದೆ. ಶತಮಾನಗಳಿಂದಲೂ ಈ ಸಮಾಜ ರಾಷ್ಟ್ರಪ್ರೇಮ, ಸ್ವಾಭಿಮಾನ, ಸ್ವಾವಲಂಬನೆ, ತ್ಯಾಗ ಮನೋಭಾವನೆಯಿಂದ ಮುನ್ನಡೆದಿದೆ. ರಾಜ್ಯವ್ಯಾಪಿ ಇರುವ ಮರಾಠ ಸಮಾಜವನ್ನು ನಿರ್ಲಕ್ಷಿಸದೆ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿದರು.

    ಅದ್ದೂರಿ ಮೆರವಣಿಗೆ: ಕಪಿಲೇಶ್ವರ ಮಂದಿರದಿಂದ ವಡಗಾವಿಯ ಆದರ್ಶ ಮಹಾವಿದ್ಯಾಲಯದವರೆಗೆ ಮಂಜುನಾಥ ಭಾರತಿ ಶ್ರೀಗಳ ಶೋಭಾಯಾತ್ರೆ ವಾದ್ಯಮೇಳಗ ಳೊಂದಿಗೆ ವಿಜೃಂಭಣೆಯಿಂದ ಸಾಗಿತು. ಛತ್ರಪತಿ ಸಂಭಾಜಿ ರಾಜೆ ಭೋಸಲೆ, ಕೊಲ್ಲಾಪುರದ ಶ್ರೀಮಂತ ಯುವರಾಜ, ಕಾಶಿ ವೇದಾಂತಚಾರ್ಯ ಸ್ವಾಮಿ ಸ್ವಹಂ ಚೈತನ್ಯ ಪುರಿ, ರಾಷ್ಟ್ರೀಯ ಧರ್ಮಾಚಾರ್ಯ ರಾಜಮನೆತನದ ರಾಜಶ್ರೀ ಶ್ರೀಭಗವಾನ್ ಗಿರಿ, ಮಹಾರಾಜರು ನೂಲ್, ಮಾಜಿ ಮೇಯರ್ ಶಿವಾಜಿ ಸುಂಟ್ಕರ್, ಡಾ.ಸೋನಾಲಿ ಸರ್ನೋಬತ್, ರತನ್ ಪಾಟೀಲ, ರಮಾಕಾಂತ ಕೊಂಡಸ್ಕರ್, ರಮೇಶ ಗೋರಲ ಇದ್ದರು.

    ಭಾವೈಕ್ಯತೆಯ ನೀರು ನೀಡಿದ ದಕ್ಷಿಣ ಮುಸ್ಲಿಂ ಜಮಾತ್: ಶಿವಾಜಿ ಮಹಾರಾಜರ ಉದ್ಯಾನ ಮಾರ್ಗವಾಗಿ ನಾಥಪೈ ವೃತ್ತ ತಲುಪಿದ ಶೋಭಾಯಾತ್ರೆಯಲ್ಲಿ ದಕ್ಷಿಣ ಮುಸ್ಲಿಂ ಜಮಾತ್‌ನ ವತಿಯಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಅಮ್ಜದ್ ಮೋಮಿನ್, ಅಶ್ಫಾಕ್ ಘೋರಿ, ಅಬ್ದುಲ್ ಬಾಗಲಕೋಟೆ, ಹಮೀದ್ ಬಾಗಲಕೋಟಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts