More

    ಶಾಸಕ ಸಂಗಮೇಶ್ವರ್ ಪುತ್ರ ಬಸವೇಶ್‌ಗೆ ಜಾಮೀನು ಮಂಜೂರು

    ಶಿವಮೊಗ್ಗ: ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್ ಅವರ ಪುತ್ರ ಬಸವೇಶ್ ಅವರಿಗೆ ಹೈಕೋರ್ಟ್ ಸೋಮವಾರ ಜಾಮೀನು ಮಂಜೂರು ಮಾಡಿದೆ.
    ಕಳೆದ ಫೆ.28ರಂದು ಕಬಡ್ಡಿ ಆಟದ ವೇಳೆ ಗುಂಪು ಘರ್ಷಣೆಯಲ್ಲಿ ಬಿಜೆಪಿ ಮುಖಂಡರ ಮೇಲೆ ಹಲ್ಲೆ ನಡೆಸಿದ ಹಾಗೂ ಜಾತಿ ನಿಂಧನೆ ಆರೋಪ ಕೇಳಿಬಂದಿತ್ತು. ಘಟನೆ ಬಳಿಕ ತಲೆಮರೆಸಿಕೊಂಡಿದ್ದ ಬಸವೇಶ್ ಅವರನ್ನು ಭದ್ರಾವತಿ ಪೊಲೀಸರು ಮಾ.6ರಂದು ಚಿತ್ರದುರ್ಗದಲ್ಲಿ ಬಂಧಿಸಿದ್ದರು.
    ಸುಮಾರು 1 ತಿಂಗಳು 6 ದಿನ ಬಂಧನದಲ್ಲಿದ್ದ ಬಸವೇಶ್ ಅವರಿಗೆ ಯುಗಾದಿ ಹಬ್ಬಕ್ಕೂ ಒಂದು ದಿನ ಮುಂಚಿತವಾಗಿ ಜಾಮೀನು ಮಂಜೂರಾಗಿದೆ.
    ಏನಿದು ಪ್ರಕರಣ ?
    ಫೆ.27 ಮತ್ತು 28ರಂದು ಭದ್ರಾವತಿಯ ಕನಕ ಮಂಟಪದಲ್ಲಿ ಜೈಶ್ರೀರಾಮ್ ಘೋಷಣೆ ಕೂಗಿರುವುದಕ್ಕೆ ಭದ್ರಾವತಿಯ ಬಿಜೆಪಿ ಮುಖಂಡ ಧರ್ಮಪ್ರಸಾದ್ ಸೇರಿ ಹಲವರ ಮೇಲೆ ಶಾಸಕ ಸಂಗಮೇಶ್ವರ್ ಕಡೆಯ ಗುಂಪು ಹಲ್ಲೆ ನಡೆಸಿತ್ತು.
    ಘಟನೆಯಲ್ಲಿ ಸಂಗಮೇಶ್ವರ್ ಪುತ್ರ ಬಸವೇಶ್ ಹಾಗೂ ಇತರೆ 15 ಜನರ ವಿರುದ್ಧ 307 ಮತ್ತು ಜಾತಿ ನಿಂದನೆ ಪ್ರಕರಣ ದಾಖಲಾಗಿತ್ತು. ಈ ಹಿನ್ನಲೆಯಲ್ಲಿ ಬಸವೇಶ್ ಸೇರಿ 15 ಜನರನ್ನು ಪೊಲೀಸರು ಬಂಧಿಸಿದ್ದರು.
    ಬಸವೇಶ್ ಅವರ ಜಾಮೀನು ಅರ್ಜಿಯನ್ನು ಸ್ಥಳೀಯ ಭದ್ರಾವತಿ ಮತ್ತು ಶಿವಮೊಗ್ಗ ನ್ಯಾಯಾಲಯಗಳು ತಿರಸ್ಕರಿಸಿದ್ದವು. ಹಾಗಾಗಿ ಹೈಕೋರ್ಟ್‌ಗೆ ಜಾಮೀನು ಅರ್ಜಿ ಮೇಲ್ಮನವಿ ಸಲ್ಲಿಸಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಧೀಶರು ಜಾಮೀನು ನೀಡಿ ಆದೇಶಿಸಿದ್ದಾರೆ. ಆದರೆ ಆದೇಶ ಪ್ರತಿ ಸಿಗದ ಕಾರಣ ಯುಗಾದಿಗೂ ಮುನ್ನವೇ ಬಿಡುಗಡೆ ಭಾಗ್ಯ ಕಡಿಮೆ ಎಂದು ಹೇಳಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts