More

    ಭದ್ರಾ ಲಾಭ ಪಡೆಯಲು ಪೈಪೋಟಿ: ಮಾಜಿ ಸಿಎಂ ಕುಮಾರಸ್ವಾಮಿ ಆರೋಪ

    ಹಿರಿಯೂರು: ಕೆ.ಸಿ.ರೆಡ್ಡಿ ನೇತೃತ್ವ ಸಮಿತಿ ವರದಿಯಂತೆ ೨೦೦೬ರಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಒಪ್ಪಿಗೆ ನೀಡಿ, ೪ ವರ್ಷದ ಕಾಲಮಿತಿಯಲ್ಲಿ ಯೋಜನೆ ಪೂರ್ಣಗೊಳಿಸುವಂತೆ ಆದೇಶಿಸಿದ್ದು ನಮ್ಮ ಸರ್ಕಾರ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

    ನಗರದ ನೆಹರು ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ಜೆಡಿಎಸ್ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿ, ಬಯಲುಸೀಮೆಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಲು ಯೋಜನೆ ಜಾರಿಗೆ ಮುನ್ನುಡಿ ಬರೆದಿದ್ದು ಜೆಡಿಎಸ್ ಪಕ್ಷ. ಆದರೆ, ಭದ್ರಾ ಮೇಲ್ದಂಡೆ ಯೋಜನೆ ೧೨-೧೩ ವರ್ಷ ಕಳೆದರು ಆಮೆಗತಿಯಲ್ಲಿ ಸಾಗುತ್ತಿದೆ. ಆದರೂ ಇದರ ಲಾಭ ಪಡೆಯಲು ಎರಡು ರಾಷ್ಟ್ರೀಯ ಪಕ್ಷಗಳು ಪೈಪೋಟಿ ನಡೆಸುತ್ತಿವೆ ಎಂದು ದೂರಿದರು.

    ಬಿ.ಎಲ್.ಗೌಡ ಕಟ್ಟಿದ ಜಿಲ್ಲೆಯ ಜನರ ಜೀವನಾಡಿ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗುವುದು. ಹಿರಿಯ ರಾಜಕಾರಣಿ, ಮಾದಿಗ ಸಮುದಾಯದ ದಿವಂಗತ ಡಿ.ಮಂಜುನಾಥ್ ಅವರು ತಾಲೂಕಿನ ಅಭಿವೃದ್ಧಿಗೆ ನೀಡಿದ ಕೊಡುಗೆ ಸ್ಮರಣೀಯ, ಮಂಜುನಾಥ್ ಗೆಲುವಿನಲ್ಲಿ ಒಕ್ಕಲಿಗ ಸಮಾಜ ಪ್ರಮುಖ ಪಾತ್ರವಹಿಸಿದ್ದು, ಈ ಬಾರಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಮಾದಿಗ ಸಮಾಜ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

    ಬಿಜೆಪಿ ಸರ್ಕಾರ ಯಾದವ ಸಮಾಜಕ್ಕೆ ಯಾವುದೇ ಕೊಡುಗೆ ನೀಡಿಲ್ಲ, ರಾಜ್ಯದ ವಿವಿಧೆಡೆ ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ ಮಾಡಿದಾಗ ಮೊದಲು ಅವರ ಪರ ನಿಂತಿದ್ದು ಜೆಡಿಎಸ್ ಎಂಬುದನ್ನು ಮುಸ್ಲಿಮರು ಮರೆಯಬಾರದು ಎಂದರು.

    ಜೆಡಿಎಸ್ ಅಭ್ಯರ್ಥಿ ಎಂ.ರವೀಂದ್ರಪ್ಪ ಮಾತನಾಡಿ, ಬಿಜೆಪಿ ನನ್ನ ಮೇಲೆ ಐಟಿ ದಾಳಿ ಮಾಡಿಸಿದ್ದು, ಇಂತಹ ಬೆದರಿಕೆಗೆ ನಾನು ಹೆದರುವುದಿಲ್ಲ, ತಾಲೂಕಿನಲ್ಲಿ ಜೆಡಿಎಸ್ ಪರ ಅಲೆಗೆ ಎರಡು ರಾಷ್ಟ್ರೀಯ ಪಕ್ಷಗಳಿಗೆ ನಡುಕ ಶುರುವಾಗಿದೆ ಎಂದು ತಿಳಿಸಿದರು.

    ಪಕ್ಷದ ತಾಲೂಕಾಧ್ಯಕ್ಷ ಹನುಮಂತರಾಯ, ಎಂಎಲ್ಸಿ ಶರವಣ, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಗಿರಿಜಪ್ಪ, ತಿಪ್ಪೇಸ್ವಾಮಿ, ನಜ್ಮಾ ನಜೀರ್, ಜಿ.ಕಲ್ಪನಾ, ಜಿ.ಎಸ್.ಶಿವಪ್ರಸಾದ್ ಗೌಡ, ತಿಮ್ಮರಾಜ್, ಕಿರಣ್ ಗೌಡ, ಬಸವರಾಜ್, ದೊಡ್ಡಯ್ಯ, ಶಿವಣ್ಣ, ಎಂ.ಡಿ.ರವಿ, ಕೇಶವಮೂರ್ತಿ, ಕೆ.ಶಂಕರಮೂರ್ತಿ, ಫಾರೂಕ್, ಹಾರ್ಡ್‌ವೇರ್ ಶಿವಣ್ಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts