More

    ಮಾಗಡಿಗೆ ಭದ್ರಾ ಡ್ಯಾಂ ನೀರು

    ಚಿಕ್ಕಮಗಳೂರು: ಮುಂದಿನ ನಾಲ್ಕು ತಿಂಗಳಲ್ಲಿ ಮಾಗಡಿ-ಕೈಮರ, ರಾಮೇದೇವರಹಳ್ಳಿಗಳಿಗೆ ಭದ್ರಾ ಜಲಾಶಯದಿಂದ ಪೈಪ್‌ಲೈನ್ ಮುಖಾಂತರ ನೀರು ಒದಗಿಸಲು ಉದ್ದೇಶಿಸಲಾಗಿದೆ ಎಂದು ಶಾಸಕಿ ನಯನಾ ಮೋಟಮ್ಮ ತಿಳಿಸಿದರು.

    ಮೂಡಿಗೆರೆ ತಾಲೂಕಿನ ಮಾಗಡಿಯಲ್ಲಿ ಭದ್ರಾ ಜಲಾಶಯದಿಂದ ನೀರು ಹರಿಸುವ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಬಯಲುಸೀಮೆ ಪ್ರದೇಶವಾಗಿರುವ ಈ ಭಾಗದಲ್ಲಿ ಕುಡಿಯುವ ನೀರು ಅಗತ್ಯವಾಗಿದೆ. ಗ್ರಾಮಸ್ಥರು ಕುಡಿಯುವ ನೀರು ವ್ಯರ್ಥ ಮಾಡಬಾರದು ಎಂದು ಮನವಿ ಮಾಡಿದರು.
    ಮಾಗಡಿ ಗ್ರಾಮದಲ್ಲಿ 12 ಎಕರೆ ಸರ್ಕಾರಿ ಜಾಗವನ್ನು ನಿವೇಶನವನ್ನಾಗಿ ಮಾರ್ಪಡಿಸಿ ನಿವೇಶನರಹಿತರಿಗೆ ವಿತರಿಸುವ ಉದ್ದೇಶವಿದೆ. ಜಾಗಕ್ಕೆ ಶಾಸಕರ ಅನುದಾನದಲ್ಲಿ 5 ಲಕ್ಷ ರೂ. ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿದರು.
    ಜಿಪಂ ಮಾಜಿ ಸದಸ್ಯ ಕೆ.ವಿ.ಮಂಜುನಾಥ್, ಮುಗುಳುವಳ್ಳಿ ಗ್ರಾಪಂ ಅಧ್ಯಕ್ಷೆ ಭಾಗ್ಯಾ, ಸದಸ್ಯರಾದ ಕಲಾವತಿ, ರಘುನಾಥನ್, ಮಲ್ಲೇಶ್, ವನಿತಾ, ಮಾಜಿ ಅಧ್ಯಕ್ಷ ಕೆ.ಎಸ್.ಪ್ರಕಾಶ್, ಕಾಂಗ್ರೆಸ್ ಮುಖಂಡರಾದ ಮುದಪೀರ್, ಎಂ.ವಿಜಯ್‌ಕುಮಾರ್, ಗ್ರಾಪಂ ಮಾಜಿ ಸದಸ್ಯ ಕೆ.ವಿ.ವಿರೂಪಾಕ್ಷಪ್ಪ, ಗುತ್ತಿಗೆದಾರ ರೋಹಿತ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts