More

    ಇಂದು ದೆಹಲಿಯಲ್ಲಿ ಬಿಜಿಎಂಎಲ್ ಉಳಿವಿನ ಸಭೆ

    ಕೆಜಿಎಫ್ಚಿ: ನ್ನದ ಗಣಿ ಮರು ಆರಂಭಿಸುವಂತೆ 20 ವರ್ಷಗಳಿಂದ ಬಿಜಿಎಂಎಲ್ ಕಾರ್ಮಿಕ ವರ್ಗ ಮಂಡಿಸಿದ್ದ ಬೇಡಿಕೆ ನಿರ್ಣಾಯಕ ಘಟ್ಟಕ್ಕೆ ಬಂದಿದ್ದು, ದೆಹಲಿಯಲ್ಲಿಂದು ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ ನಿರ್ಧಾರವಾಗಲಿದೆ. 2001ರಲ್ಲಿ ಅಂದಿನ ಕೇಂದ್ರ ಸರ್ಕಾರ ನಷ್ಟದ ಕಾರಣ ನೀಡಿ ಚಿನ್ನದ ಗಣಿ ಸ್ಥಗಿತಗೊಳಿಸಿತ್ತು. ಇದರಿಂದ ಸಾವಿರಾರು ಕಾರ್ಮಿಕರು ಬೀದಿಗೆ ಬೀಳುವಂತಾಗಿತ್ತು. ಕೇಂದ್ರದ ಈ ನೀತಿ ವಿರೋಧಿಸಿದ ಕಾರ್ಮಿಕರು ಕಾರ್ಖಾನೆ ಆರಂಭಕ್ಕೆ ಸುದೀರ್ಘ ಹೋರಾಟ ನಡೆಸಿಕೊಂಡು ಬಂದಿದ್ದರೂ ಪ್ರಯೋಜನವಾಗಿರಲಿಲ್ಲ.

    ವರದಿ ಕೇಳಿದ ಸರ್ಕಾರ: ಕಾರ್ಮಿಕರ ಹೋರಾಟದ ಫಲವಾಗಿ ಹಿಂದಿನ ಸರ್ಕಾರ ಗಣಿ ಪ್ರದೇಶದಲ್ಲಿ ಲಭ್ಯವಿರುವ ಚಿನ್ನದ ನಿಕ್ಷೇಪಗಳ ಸಂಶೋಧನೆ ನಡೆಸಿ ವರದಿ ನೀಡುವಂತೆ ಸೂಚಿಸಿತ್ತು. ಹೈದರಾಬಾದ್‌ನ ಖಾಸಗಿ ಕಂಪನಿ 5 ವರ್ಷಗಳಿಂದ ಈ ಪ್ರದೇಶದಲ್ಲಿ ಪರಿಶೀಲಿಸಿದಾಗ 250 ಅಡಿಯಲ್ಲಿ ಚಿನ್ನದ ನಿಕ್ಷೇಪವಿರುವುದು ಕಂಡು ಬಂದ ಹಿನ್ನೆಲೆ ಕೇಂದ್ರದ ಗಣಿ ಸಚಿವಾಲಯಕ್ಕೆ ವರದಿ ಸಲ್ಲಿಸಲಾಗಿತ್ತು.
    5 ಅಮೂಲ್ಯ ಖನಿಜ ಸಂಪತ್ತು ಪತ್ತೆ: ಹಿಂದೆ 10, 12 ಸಾವಿರ ಆಳದಲ್ಲಿ ಗಣಿಗಾರಿಕೆ ನಡೆಸಲಾಗುತ್ತಿತ್ತು. ಆದರೀಗ ಚಿನ್ನದ ಜತೆ ಟಂಗ್‌ಸ್ಟನ್, ಪ್ಲಾಟಿನಮ್, ಮರ್ಕ್ಯೂರಿ, ಕಾಪರ್ ಪತ್ತೆಯಾಗಿದೆ. ವಿಶ್ವಮಟ್ಟದಲ್ಲಿ ಅತ್ಯಧಿಕ ಬೇಡಿಕೆ ಇರುವುದರಿಂದ ಅಮೆರಿಕ, ಕೋರಿಯಾ, ಚೀನಾ, ಜಪಾನ್ ಗಣಿಗಾರಿಕೆ ನಡೆಸಲು ಅನುಮತಿಗಾಗಿ ಕೇಂದ್ರ ಸರ್ಕಾರದ ಹಿಂದೆ ಬಿದ್ದಿವೆ. ಟಂಗ್‌ಸ್ಟನ್ ಖನಿಜ ಸ್ಯಾಟಲೈಟ್‌ಗಳಿಗೆ (ಉಪಗೃಹ) ಮತ್ತು ಸೌರಶಕ್ತಿ ಉತ್ಪಾದನೆಯಲ್ಲೂ ಬಳಕೆಯಾಗುತ್ತದೆ ಎಂದು ಹೇಳಲಾಗುತ್ತಿದೆ.

    ಕೊನೇ ಸ್ಥಾನದಲ್ಲಿ ಕೆಜಿಎ್: ಏಷ್ಯಾದಲ್ಲಿ 1ನೇ ಸ್ಥಾನದಲ್ಲಿದ್ದ ಕೆಜಿಎ್ ಇಂದು ಕೊನೇ ಸ್ಥಾನದಲ್ಲಿದೆ. ಆದರೆ ಸಂಶೋಧನೆ ವೇಳೆ ಅಮೂಲ್ಯ ಸಂಪತ್ತು ಲಭ್ಯವಾಗಿರುವುದು ಆಶಾಭಾವನೆ ಮೂಡಿದೆ. ಆದರೆ ಇಲ್ಲಿನ ರಾಜಕಾರಣಿಗಳು ಹೇಗೆ ಇದನ್ನು ಸದ್ಬಳಕೆ ಮಾಡಿಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

    ಗಣಿ ಸಚಿವರಿಗೆ ಮನವಿ: ಇತ್ತೀಚೆಗೆ ಕಾರ್ಮಿಕ ಮುಖಂಡ ಪುರುಷೋತ್ತಮ್ ಕಾರ್ಖಾನೆ ಮರು ಆರಂಭಿಸುವಂತೆ ಕೇಂದ್ರ ಗಣಿ ಸಚಿವ ಪ್ರಹ್ಲಾದ್ ಜೋಷಿಗೆ ಮನವಿ ಮಾಡಿದ್ದರು. ಸ್ಪಂದಿಸಿದ ಸಚಿವರು ಗುರುವಾರ ನಡೆಯುವ ಕ್ಯಾಬಿನೆಟ್ ಮೀಟಿಂಗ್‌ನಲ್ಲಿ ನಿರ್ಣಯ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಮನೆ ಸ್ವಂತಕ್ಕೆ ವರದಿ: ಈಗಾಗಲೆ ಬಿಜಿಎಂಎಲ್ ಅಧಿಕಾರಿ ಸೆಲ್ವಂ ದೆಹಲಿಗೆ ತೆರಳಿದ್ದು, ಎಸ್‌ಟಿಬಿ ಯೋಜನೆಯಡಿ ಸ್ವಯಂ ನಿವೃತ್ತಿ ಪಡೆದಿರುವ ಬಿಜಿಎಂಎಲ್ ಕಾರ್ಮಿಕರ ಕಾಲನಿಗಳಲ್ಲಿರುವ ಮನೆಗಳನ್ನು ಸ್ವಂತಕ್ಕೆ ಮಾಡುವಂತೆ ಸಭೆಗೆ ವರದಿ ನೀಡಲಿದ್ದಾರೆ. ಸಭೆಯಲ್ಲಿ ಕೈಗೊಳ್ಳಲಾಗುವ ತೀರ್ಮಾನ ಬಜೆಟ್‌ನಲ್ಲಿ ಸೇರ್ಪಡೆಯಾಗಲಿರುವುದರಿಂದ ಕಾರ್ಮಿಕರ ಭವಿಷ್ಯ ಸಭೆ ಮೇಲೆ ನಿಂತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts