More

    ಬಂಡಾಯದ ನಾಡಲ್ಲಿ ಬೆಟ್ಟಿಂಗ್ ಬಲುಜೋರು

    ನವಲಗುಂದ: ಕ್ರಿಕೆಟ್ ಆಟದಲ್ಲಿ ಸೋಲು-ಗೆಲುವು, ಚುನಾವಣೆಯಲ್ಲಿ ಅಭ್ಯರ್ಥಿಗಳ ಸೋಲು-ಗೆಲುವಿನ ಬಗ್ಗೆ ಬೆಟ್ಟಿಂಗ್ ನಡೆಯುವುದು ಸಾಮಾನ್ಯ.

    ಆದರೆ, ಈ ಬಾರಿ ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ, ನವಲಗುಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾರು ಎನ್ನುವ ಕುರಿತು ಬೆಟ್ಟಿಂಗ್ ಜೋರಾಗಿದೆ.
    ನವಲಗುಂದ ಕ್ಷೇತ್ರದ ಟಿಕೆಟ್ ಬಯಸಿ 8 ಜನ ಅರ್ಜಿ ಸಲ್ಲಿದ್ದರು.

    ಆದರೆ, ಹೈಕಮಾಂಡ್ ಅಳೆದು ತೂಗಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ವಿನೋದ ಅಸೂಟಿ ಹಾಗೂ ಕಳೆದ ವರ್ಷವೇ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡ ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ ಇಬ್ಬರ ಹೆಸರು ಅಂತಿಮಗೊಳಿಸಿದೆ ಎನ್ನಲಾಗುತ್ತಿದೆ.

    ಹೀಗಾಗಿ, ಇಬ್ಬರ ನಡುವೆ ಟಿಕೆಟ್‌ಗಾಗಿ ತೀವ್ರ ಪೈಪೋಟಿ ನಡೆದಿದ್ದು, ದೆಹಲಿಯಲ್ಲಿಯೇ ಬೀಡು ಬಿಟ್ಟಿದ್ದಾರೆ. ಇದೇ ಈಗ ಕ್ಷೇತ್ರದಲ್ಲಿ ಬೆಟ್ಟಿಂಗ್‌ಗೆ ದಾಳವಾಗಿದ್ದು, ಇಬ್ಬರ ಹೆಸರ ಮೇಲೆ ಭರ್ಜರಿ ಭಾಜಿ ಕಟ್ಟಲಾಗುತ್ತಿದೆ.

    ಕಾಂಗ್ರೆಸ್ ತನ್ನ ಮೊದಲ ಪಟ್ಟಿಯಲ್ಲಿ 124 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಮಾಡಿದೆ. 2ನೇ ಪಟ್ಟಿಯಲ್ಲಿ ಬಂಡಾಯ ನಾಡು ನವಲಗುಂದ ಕ್ಷೇತ್ರದ ಅಭ್ಯರ್ಥಿ ಘೋಷಣೆ ಮಾಡುವ ನಿರೀಕ್ಷೆ ಇತ್ತು.

    ಎನ್.ಎಚ್. ಕೋನರಡ್ಡಿ ಸಂಭವನೀಯ ಅಭ್ಯರ್ಥಿ ಎಂದು ಹೇಳಲಾಗಿತ್ತು. ಆದರೆ, 2ನೇ ಪಟ್ಟಿಯಲ್ಲಿ ಕ್ಷೇತ್ರದ ಅಭ್ಯರ್ಥಿ ಘೋಷಣೆಯಾಗಿಲ್ಲ. ಇದು ಮತ್ತಷ್ಟು ಕುತೂಹಲ ಕೆರಳಿಸುವ ಜತೆಗೆ ಇಂತಹವರಿಗೆ ಟಿಕೆಟ್ ಸಿಗುತ್ತದೆ ಎಂದು ಇಬ್ಬರ ಅಭಿಮಾನಿಗಳು, ಬೆಂಬಲಿಗರು ಬೆಟ್ಟಿಂಗ್ ಕಟ್ಟುತ್ತಿದ್ದಾರೆ.

    ಸಂಭಾವ್ಯ ಪಟ್ಟಿಯಲ್ಲಿ ಎನ್.ಎಚ್. ಕೋನರಡ್ಡಿ ಹೆಸರು ಕೇಳಿಬಂದಿದ್ದರಿಂದ ಅವರ ಪರ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಲಾಗಿದೆ.

    ಇತ್ತ ವಿನೋದ ಅಸೂಟಿ ಬೆಂಬಲಿಗರೂ ನಮ್ಮ ನಾಯಕನೇ ಅಭ್ಯರ್ಥಿ ಅಂತಾ ಹೇಳಿಕೊಳ್ಳುತ್ತಿದ್ದಾರೆ. ಹೀಗಾಗಿ, ಅಸೂಟಿ ಮತ್ತು ಕೋನರಡ್ಡಿ ಬೆಂಬಲಿಗರು ಲಕ್ಷಾಂತರ ರೂಪಾಯಿ ಬೆಟ್ಟಿಂಗ್ ನಡೆಸಿದ್ದಾರೆ.

    ನಾನು ವಿನೋದ ಅಸೂಟಿ ಅವರಿಗೆ ಕಾಂಗ್ರೆಸ್ ಟಿಕೆಟ್ ದೊರೆಯುತ್ತದೆ ಎಂದು 1 ಲಕ್ಷ ರೂಪಾಯಿ ಬೆಟ್ಟಿಂಗ್ ಕಟ್ಟಿದ್ದೇನೆ. ಅವರಿಗೆ ಟಕೆಟ್ ಸಿಗಲಿದೆ ಹೆಸರು ಹೇಳಲಿಚ್ಛಿಸದ ಅಭಿಮಾನಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts