More

    ಬೆತ್ತನಗೆರೆ ಶಂಕರ ರಾಜಕೀಯಕ್ಕೆ ಎಂಟ್ರಿ; ಸ್ವಾಗತಿಸಿದ ಬಿಜೆಪಿ ನಾಯಕರು!

    ನೆಲಮಂಗಲ: ಚುನಾವಣಾ ಸಮಯ ಹತ್ತಿರವಾಗುತ್ತಿದ್ದಂತೆ, ಹೊಸ ಹೊಸ ಮುಖಗಳು ರಾಜಕೀಯ ಕ್ಷೇತ್ರಕ್ಕೆ ಎಂಟ್ರಿ ಪಡೆಯುತ್ತಿವೆ. ಮಾಜಿ ರೌಡಿ ಸೈಲೆಂಟ್ ಸುನೀಲ ರಾಜಕೀಯಕ್ಕೆ ಎಂಟ್ರಿ ಪಡೆಯುತ್ತಿದ್ದಾನೆ ಎಂಬ ಸುದ್ದಿ ನಿಜವಾಗುವ ಲಕ್ಷಣ ಕಾಣುತ್ತಿದ್ದಂತೆ, ಬೆತ್ತನಗೆರೆ ಶಂಕರ (ನಲ್ಲೂರು ಶಂಕರೇಗೌಡ) ಸಧ್ಯದಲ್ಲೇ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗುವ ಸಾಧ್ಯತೆಯಿದೆ.

    ಬೆತ್ತನಗೆರೆ ಶಂಕರ 20 ವರ್ಷಗಳ ಹಿಂದೆ ನಟೋರಿಯಸ್ ರೌಡಿ ಶೀಟರ್ ಆಗಿ ಗುರುತಿಸಿಕೊಂಡು, ರಕ್ತಚರಿತ್ರೆಗೆ ಕಾರಣವಾಗಿದ್ದ. 2005ರಲ್ಲಿ ರೌಡಿಸಂ‌ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಶಂಕರ, ನೆಲಮಂಗಲದಿಂದ ಪ್ರಕರಣವೊಂದರಲ್ಲಿ ಗಡಿಪಾರು ಆಗಿದ್ದ. ಸದ್ಯ ಮೈಸೂರಿನ ಎಚ್​.ಡಿ ಕೋಟೆಯಲ್ಲಿ 15 ಎಕರೆ ಜಮೀನು ಖರೀದಿಸಿ, ಕೃಷಿ ಮಾಡಿಕೊಂಡಿದ್ದಾನೆ.

    ಸದ್ಯ ಬೆತ್ತನಗೆರೆ ಶಂಕರ ತನ್ನ ಹೆಸರನ್ನು ನಲ್ಲೂರು ಶಂಕರ್​​ ಗೌಡ ಎಂದು ಬದಲಾಯಿಸಿಕೊಂಡು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾನೆ. ಈ ಮೂಲಕ ಸಧ್ಯದಲ್ಲೇ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಲು ಸಿದ್ಧತೆ ನಡೆಸಿಕೊಳ್ಳುತ್ತಿದ್ದಾನೆ. ಇದಕ್ಕೆ ಸಾಕ್ಷಿಯೆಂಬಂತೆ ಬಿಜೆಪಿ ನಾಯಕರಾದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವಿಜಯೇಂದ್ರ, ಎಸ್‌.ಟಿ ಸೋಮಶೇಖರ್, ಬಿ.ಸಿ ಪಾಟೀಲ್ ಸೇರಿದಂತೆ ಹಲವು ನಾಯಕರುಗಳೊಂದಿಗೆ ಕಾಣಿಸಿಕೊಂಡಿದ್ದಾನೆ. ಕೊಲೆ, ಸುಲಿಗೆ ಆರೋಪ ಹೊಂದಿರುವ ಬೆತ್ತನಗೆರೆ ಶಂಕರನ ಮೇಲೆ ನೆಲಮಂಗಲ ನಗರ, ಗ್ರಾಮಾಂತರ, ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ 25 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

    ಬೆತ್ತನಗೆರೆ ಶಂಕರ ರಾಜಕೀಯಕ್ಕೆ ಎಂಟ್ರಿ; ಸ್ವಾಗತಿಸಿದ ಬಿಜೆಪಿ ನಾಯಕರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts