More

    ಅಡಿಕೆ ಬೆಳೆಗೆ ಎಲೆಚುಕ್ಕೆ ರೋಗ ಅಧ್ಯಯನಕ್ಕೆ ತಜ್ಞರ ಸಮಿತಿ: ಕೇಂದ್ರದ ನಿರ್ಧಾರ ಸ್ವಾಗತಿಸಿದ ಸಚಿವ ಆರಗ ಜ್ಞಾನೇಂದ್ರ

    ಬೆಂಗಳೂರು: ಮಲೆನಾಡು ಹಾಗೂ ಕರಾವಳಿ ಪ್ರದೇಶದ ಅಡಿಕೆ ಬೆಳೆಗೆ ಕಾಡುತ್ತಿರುವ ಎಲೆಚುಕ್ಕೆ ರೋಗ ಅಧ್ಯಯನಕ್ಕೆ ಕೇಂದ್ರ ಸರ್ಕಾರ ತಜ್ಞರ ತಂಡ ರಚಿಸಿದ್ದು, ಈ ನಿರ್ಧಾರವನ್ನು ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಸ್ವಾಗತಿಸಿದ್ದಾರೆ.

    ಏಳು ಜನ ತಜ್ಞರನ್ನು ಒಳಗೊಂಡ ಸಮಿತಿ ಇಷ್ಟರಲ್ಲೇ ರಾಜ್ಯಕ್ಕೆ ಆಗಮಿಸಿ ರೈತರು ಅನುಭವಿಸುತ್ತಿರುವ ಸಂಕಷ್ಟದ ಬಗ್ಗೆ ಅಧ್ಯಯನ ನಡೆಸಿ ಪರಿಹಾರ ಸೂಚಿಸಲಿದ್ದಾರೆ ಎಂದು ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

    ರಾಜ್ಯದಲ್ಲಿ ಸುಮಾರು 20 ಸಾವಿರ ಹೆಕ್ಟೇರ್ ಪ್ರದೇಶದ ಅಡಿಕೆ ತೋಟಗಳು, ಎಲೆ ಚುಕ್ಕೆ ರೋಗಕ್ಕೆ ಬಲಿಯಾಗಿದ್ದು, ಕಾಳ್ಗಿಚ್ಚಿನಂತೆ, ಇತರೆಡೆ ಹರಡುತ್ತಿರುವ ಕಾರಣ ರೈತರಲ್ಲಿ ಆತಂಕ ಹೆಚ್ಚಿಸಿದೆ. ಐವತ್ತು ಲಕ್ಷ ಜನರಿಗೆ, ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಜೀವನೋಯ ಕಲ್ಪಿಸಿಕೊಟ್ಟಿರುವ, ಅಡಿಕೆ ಬೆಳೆ, ನಮ್ಮ ಭಾಗದ ರೈತರ ಆರ್ಥಿಕ ಜೀವನಾಡಿಯಾಗಿದೆ. ತಜ್ಞರ ನೀಡಲಿರುವ ಪರಿಹಾರೋಪಾಯವು ಅಡಿಕೆ‌ ಬೆಳೆಗಾರರ ಆತಂಕ ದೂರ ಮಾಡಲಿದೆ ಎಂಬ ವಿಶ್ವಾಸವನ್ನು ಆರಗ ಜ್ಞಾನೇಂದ್ರ ವ್ಯಕ್ತಪಡಿಸಿದ್ದಾರೆ.

    ಕಳೆದ ವಾರವಷ್ಟೇ, ಅಡಿಕೆ ಬೆಳೆಗಾರರ ಆತಂಕಕ್ಕೆ ಕಾರಣವಾದ, ಎಲೆ ಚುಕ್ಕೆ ರೋಗಕ್ಕೆ ಪರಿಹಾರ ಬಯಸಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಿಯೋಗವು ದೆಹಲಿಗೆ ತೆರಳಿ, ಕೇಂದ್ರ ಕೃಷಿ ಸಚಿವ ನರೆಂದ್ರ ಸಿಂಗ್ ತೋಮರ್ ಅವರನ್ನು ಭೇಟಿಯಾಗಿ, ಮನವಿ ಸಲ್ಲಿಸಿ, ಸಮಸ್ಯೆಗೆ ಕ್ಷಿಪ್ರ ಪರಿಹಾರಕ್ಕೆ ವಿನಂತಿಸಿತ್ತು.

    2023ಕ್ಕೆ ಒಕ್ಕಲಿಗರಿಗೆ ಮೀಸಲಾತಿ ತರದಿದ್ದರೆ ನಾನು ಮುಖ ತೋರಿಸಲ್ಲ: ಕುಮಾರಸ್ವಾಮಿ ಶಪಥ

    ಬ್ರಿಟನ್​ ಪ್ರಧಾನಿ ರೇಸ್​ನಿಂದ ಹಿಂದೆ ಸರಿದ ಬೋರಿಸ್​ ಜಾನ್ಸನ್​: ರಿಷಿಗೆ ಪ್ರಧಾನಿ ಪಟ್ಟ ಒಲಿಯುವ ಸಾಧ್ಯತೆ

    ರಂಗೋಲಿಯಲ್ಲಿ ಮೂಡಿದ ಕಾಂತಾರ; ಕಲಾವಿದೆಯ ಕೈಚಳಕಕ್ಕೆ ಮೆಚ್ಚುಗೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts