More

    Quit Smoking; ಧೂಮಪಾನ ತ್ಯಜಿಸಲು ಇಲ್ಲಿದೆ ನೋಡಿ ಒಳ್ಳೆಯ ಟಿಪ್ಸ್

    ಬೆಂಗಳೂರು: ಧೂಮಪಾನ ಮತ್ತು ಮಧ್ಯಮ ಮದ್ಯಪಾನವು ಆರೋಗ್ಯಕ್ಕೆ ಹಾನಿಕಾರಕವೆಂದು ಎಲ್ಲರಿಗೂ ತಿಳಿದಿದೆ. ಆದರೆ ಇವುಗಳಿಂದ ಹೊರಬರುವುದು ಸ್ವಲ್ಪ ಕಷ್ಟವೆಂದೇ ಹೇಳಬಹುದು. ನೀವು ತುಂಬಾ ಸುಲಭವಾಗಿ ಧೂಮಪಾನವನ್ನು ಬಿಡಬಹುದು ಎಂದು ನೀವು ಭಾವಿಸುತ್ತೀರಾ? ಹಾಗಿದ್ರೆ ನಾವು ಹೇಳುವ ಸಹಹೆಯನ್ನು ಪಾಲಿಸಿ…

    ಧೂಮಪಾನದಿಂದ ನಿಕೋಟಿನ್ ದೇಹದಲ್ಲಿ ಬಿಡುಗಡೆಯಾಗುತ್ತದೆ. ಇದರಿಂದಾಗಿ ಕ್ಯಾನ್ಸರ್, ಅಧಿಕ ರಕ್ತದೊತ್ತಡ, ಹೃದಯದ ತೊಂದರೆಗಳು ಮತ್ತು ಶ್ವಾಸಕೋಶದ ಸಮಸ್ಯೆಗಳು ಉದ್ಭವಿಸುತ್ತವೆ. ಧೂಮಪಾನವು ವಿಶೇಷವಾಗಿ ಉಸಿರಾಟದ ತೊಂದರೆಗಳನ್ನು ಉಂಟುಮಾಡುತ್ತದೆ.

    1) ವ್ಯಾಯಾಮ ಮತ್ತು ಜಿಮ್: ವ್ಯಾಯಾಮ ಆರೋಗ್ಯಕ್ಕೆ ಒಳ್ಳೆಯದು ಎಂದು ಎಲ್ಲರಿಗೂ ಗೊತ್ತು ಇದು ಸಿಗರೇಟು ಬಿಡುವ ಸಾಧನವೂ ಹೌದು. ದೈಹಿಕ ಚಟುವಟಿಕೆ ಮತ್ತು ವ್ಯಾಯಾಮ ಹೆಚ್ಚಾದಂತೆ ಸಿಗರೇಟು ಮತ್ತು ನಿಕೋಟಿನ್ ಅನ್ನು ಅಷ್ಟಾಗಿ ದೇಹ ಬೇಡುವುದಿಲ್ಲ.

    2) ಚೆನ್ನಾಗಿ ನೀರು ಕುಡಿಯಿರಿ: ದಿನಕ್ಕೆ 8-10 ಗ್ಲಾಸ್ ನೀರು ಕುಡಿದರೆ ಆರೋಗ್ಯವಾಗಿರಬಹುದಾಗಿದ್ದು, ದೇಹದ ಇಮ್ಯೂನಿಟಿ ಹೆಚ್ಚಾಗುತ್ತದೆ. ಧೂಮಪಾನ ಮಾಡಲು ಮನಸ್ಸು ರಚ್ಚೆ ಹಿಡಿದಾಗ 1-2 ಗ್ಲಾಸ್ ನೀರು ಕುಡಿದು ಬಿಡಿ. ಸಿಗರೇಟ್ ಸೇದುವ ಕ್ರೇವಿಂಗ್ ತಾನಾಗಿಯೇ ಕಡಿಮೆಯಾಗುತ್ತದೆ.

    3) ಸಿಗರೇಟು ಸೇದಿದ ಕೂಡಲೆ ಸ್ವಲ್ಪ ಟೆನ್ಶನ್ ಕಡಿಮೆ ಆಯಿತಪ್ಪ ಎನ್ನುವ ಅದೆಷ್ಟೋ ಜನರಿದ್ದಾರೆ. ಆದರೆ ಸಿಗರೇಟು ಬಿಟ್ಟ ಮೇಲೆ ಈ ಒತ್ತಡವನ್ನು ನಿಭಾಯಿಸಲು ಬೇರೇನಾದರೂ ದಾರಿ ನಾವೇ ಹುಡುಕಬೇಕಾಗುತ್ತದೆ. ಹೀಗಾಗಿ ನಿಮ್ಮಗೆ ಇರುವ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವತ್ತ ಗಮನ ಹರಿಸಿ.

    4) ನಿಮ್ಮ ಕೊಠಡಿಯ ಗೋಡೆಗಳಿಗೂ ಸಹ ಧೂಮಪಾನದ ಹೊಗೆ ಮತ್ತು ವಾಸನೆ ಅಂಟಿರುವುದರಿಂದ ಗೋಡೆಗಳಿಗೆ ನೀವು ಹೊಸದಾಗಿ ಪೇಂಟ್ ಮಾಡಬಹುದು. ಇದರಿಂದ ನಿಮ್ಮ ಮನಸ್ಸಿಗೂ ಖುಷಿ ಸಿಗುತ್ತದೆ. ನಿಮ್ಮಲ್ಲಿ ಹೊಸ ಹುರುಪು ನೋಡಿದಂತಹ ಅನುಭವ ಉಂಟಾಗುತ್ತದೆ. ನಂತರ ಹೆಚ್ಚು ಸಕಾರತ್ಮಕವಾಗಿ ನೀವು ಧೂಮಪಾನವನ್ನು ಬಿಟ್ಟು ಬಿಡಬಹುದು.

    5) ಯಾವಾಗ ನೀವು ಸಿಗರೇಟ್ ಸೇವಿಸಬೇಕೆಂದು ಬಯಸುತ್ತೀರೋ, ಆಗ ಮನಸ್ಸನ್ನು ಅದರಿಂದ ವಿಮುಖಗೊಳಿಸಿ. ಕಾರ್ಬೋನೇಟ್ ಮಾಡಲಾದ ಪಾನೀಯಗಳನ್ನು ಸೇವಿಸಬೇಡಿ. ಏಕೆಂದರೆ ಇವುಗಳು ನಿಮ್ಮ ದೇಹಕ್ಕೆ ಮತ್ತಷ್ಟು ಟಾಕ್ಸಿನ್‍ಗಳನ್ನು ಸೇರ್ಪಡೆಗೊಳಿಸಬಹುದು. ಇದರ ಜೊತೆಗೆ ನಿರಂತರ ವ್ಯಾಯಾಮವು ಸಹ ನಿಮ್ಮ ಧೂಮಪಾನ ಬಿಡುವ ನಿರ್ಧಾರಕ್ಕೆ ಸಹಾಯ ಮಾಡಬಲ್ಲವು.

    ಗಮನಿಸಿ: ಈ ಮಾಹಿತಿಯನ್ನು ತಜ್ಞರಿಂದ ಸಂಗ್ರಹಿಸಲಾಗಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

    ಸಲಿಂಗಿಗಳ ಹಕ್ಕುಗಳ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್​ ನೀಡಿದ ನಿರ್ದೇಶನಗಳೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts