More

    ಗ್ರಾಹಕರಿಗೆ ಹೊಸ ಆಫರ್ ನೀಡಿದ ಬೆಸ್ಕಾಂ; ವಿದ್ಯುತ್ ಬಿಲ್ ಮೇಲೆ 0.25%ರಷ್ಟು ರಿಯಾಯಿತಿ

    ಬೆಂಗಳೂರು: ಸಂಕ್ರಾಂತಿ ಹಬ್ಬದ ಸಂಭ್ರಮ ಮುಗಿಯುತ್ತಿದ್ದಂತೆ ಇದೀಗ ಬೆಸ್ಕಾಂ ತನ್ನ ಗ್ರಾಹಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಬೆಸ್ಕಾಂ ತನ್ನ ಗ್ರಾಹಕರಿಗೆ ವಿದ್ಯುಲ್ ಬಿಲ್​ ಮೇಲೆ ರಿಯಾಯಿತಿ ನೀಡಲು ನಿರ್ಧರಿಸಿದೆ.

    ಗ್ರಾಹಕರು ತಮ್ಮ ವಿದ್ಯುತ್ ಬಿಲ್​ನ್ನು ನಿಗದಿತ ದಿನಾಂಕಕ್ಕಿಂತ 10 ದಿನ ಮುಂಚಿತವಾಗಿ ಪಾವತಿಸಿದಲ್ಲಿ ಶೇ. 0.25 ರಷ್ಟು ರಿಯಾಯಿತಿ ಘೋಷಣೆ ಮಾಡಿದೆ. ಅಲ್ಲದೆ ವಿದ್ಯುತ್ ಬಿಲ್ ಮೊತ್ತ 1 ಲಕ್ಷ ರೂ. ಮೀರಿದರೆ ಪ್ರೋತ್ಸಾಹ ಧನ ನೀಡುವುದಾಗಿ ತಿಳಿಸಿದೆ. ಮಾಸಿಕ ವಿದ್ಯುತ್ ಬಿಲ್ 1 ಸಾವಿರ ರೂ. ಮೀರಿದ ಮುಂಗಡ ಪಾವತಿಗೂ ಶೇ 0.25 ರಷ್ಟು ರಿಯಾಯಿತಿ ನೀಡಲು ಬೆಸ್ಕಾಂ ನಿರ್ಧರಿಸಿದೆ.

    ಬೆಸ್ಕಾಂ ವ್ಯಾಪ್ತಿಯಲ್ಲಿ ಗ್ರಾಹಕರು ನಿಗದಿತ ಅವಧಿಯೊಳಗೆ ಬಿಲ್ ಪಾವತಿಸದೇ ಇರುವ ಹಿನ್ನೆಲೆಯಲ್ಲಿ ಸಂಸ್ಥೆ ತನ್ನ ಗ್ರಾಹಕರಿಗೆ ಹೊಸ ಕೊಡುಗೆಯನ್ನು ನೀಡಿದೆ. ಈ ಬಗ್ಗೆ ನೂತನ ನಿರ್ಧಾರದ ಬಗ್ಗೆ ಬೆಸ್ಕಾಂ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಅಧಿಕೃತ ಟ್ವಿಟರ್ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts