More

    ಹೆಲ್ಮೆಟ್​ ಧರಿಸದೇ ಸ್ಕೂಟರ್​ನಲ್ಲಿ ಕ್ಷೇತ್ರ ಪರ್ಯಟನೆ: ಕ್ರಮ ವಹಿಸದ ಟ್ರಾಫಿಕ್​ ಪೊಲೀಸ್​, ಸಾರ್ವಜನಿಕರ ಕಿಡಿ

    ಬೆಂಗಳೂರು: ಹೆಲ್ಮೆಟ್​ ಧರಿಸದೇ ದ್ವಿಚಕ್ರ ವಾಹನದಲ್ಲಿ ಕ್ಷೇತ್ರ ಪರ್ಯಟನೆ ಮಾಡುವ ಮೂಲಕ ಚಿಕ್ಕಪೇಟೆ ಕ್ಷೇತ್ರದ ಬಿಜೆಪಿ ಶಾಸಕ ಉದಯ್​ ಬಿ. ಗರುಡಾಚಾರ್​ ಅವರು ಚರ್ಚೆಗೆ ಗ್ರಾಸವಾಗಿದ್ದಾರೆ.

    ಟ್ರಾಫಿಕ್​ ಪೊಲೀಸ್​ ಎದುರಲ್ಲೆ ಶಾಸಕರು ಹೆಲ್ಮೆಟ್​ ಇಲ್ಲದೆ ಸಂಚಾರ ಮಾಡಿದ್ದಾರೆ. ಸಂಚಾರಿ ನಿಯಮ ಉಲ್ಲಂಘನೆ ಕಂಡೊಡನೆ ಹಿಡಿದು ದಂಡ ಹಾಕಬೇಕಾದ ಟ್ರಾಫಿಕ್​ ಪೊಲೀಸ್​ ಸುಮ್ಮನಿರುವುದನ್ನು ನೋಡಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ಕೆಲಸವನ್ನು ನಾವೇನಾದರೂ ಮಾಡಿದ್ದರೆ, ಅಲ್ಲಿಯೇ ತಡೆದು ನಿಲ್ಲಸಿ, ದಂಡ ವಿಧಿಸುವುದಲ್ಲದೆ, ನಾನಾ ಪ್ರಶ್ನೆಗಳನ್ನು ಕೇಳಿ ಜೀವ ಹಿಂಡುತ್ತಿದ್ದರು ಎಂದು ಸಾಮಾನ್ಯ ಜನರು ಟೀಕಾ ಪ್ರಹಾರ ನಡೆಸಿದ್ದಾರೆ.

    ಕಾನೂನುಗಳೆಲ್ಲ ಕೇವಲ ಜನ ಸಾಮಾನ್ಯರಿಗೆ ಮಾತ್ರ ಎಂಬ ಮಾತು ಮತ್ತೊಮ್ಮೆ ನಿಜವಾದಂತಿದೆ. ದ್ವಿಚಕ್ರ ಚಾಲಕ ಹಾಗೂ ಹಿಂಬದಿಯಲ್ಲಿ ಕುತ್ತಿದ ಶಾಸಕ ಹೆಲ್ಮೆಟ್ ಇಲ್ಲದೆ ವಾಹನ ಚಾಲನೆ ಮಾಡಿದ್ದಾರೆ. ಟ್ರಾಫಿಕ್ ಪೊಲೀಸರಿಗೆ ಕಣ್ಣು ಇದ್ರೂ ಶಾಸಕರ ವಿಚಾರದಲ್ಲಿ ಕುರುಡಾಗಿದ್ದಾರೆ.

    ಬೇರೆ ಜನ ಈ ರೀತಿ ಹೆಲ್ಮೆಟ್ ಇಲ್ದೆ ಚಾಲನೆ ಮಾಡುದ್ರೆ ಕೇಸ್, ಫೈನ್ ಅಂತಾ ಹೇಳ್ತಾರೆ. ಆದರೆ, ಶಾಸಕರು, ಟ್ರಾಫಿಕ್ ಪೊಲೀಸರ ಎದುರಲ್ಲೆ ಹೋದ್ರು ಯಾವುದೇ ಕ್ರಮವಿಲ್ಲ. ಪೊಲೀಸರ ಈ ನಡೆಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಶಾಸಕರಿಗೆ ಒಂದು ನ್ಯಾಯ, ಸಾರ್ವಜನಿಕರಿಗೆ ಒಂದು ನ್ಯಾಯನಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)

    ಜಾತಿಗಳನ್ನು ಹುಟ್ಟುಹಾಕಿದ್ದು ಪೂಜಾರಿಗಳೇ ಹೊರತು ದೇವರಲ್ಲ: RSS ಮುಖ್ಯಸ್ಥ ಮೋಹನ್​ ಭಾಗವತ್ ಹೇಳಿಕೆ​

    ರಾಜಕೀಯ ಜೀವನಕ್ಕೆ ಪ್ರವೇಶಿಸಿದ ಮಿಸ್​ ಇಂಡಿಯಾ ಪೂಜಾ ರಮೇಶ್​…

    ಪ್ರಧಾನಿ ಮೋದಿ ಸ್ವಾಗತಿಸಲು ಗುಬ್ಬಿ ಜನತೆಯಿಂದ ತಯಾರಾಯ್ತು ಅಡಕೆ ಪೇಟ, ಅಡಕೆ ಹಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts