More

    ಹೆಲ್ಮೆಟ್ ಹಾಕದೇ ಬೈಕ್ ಹತ್ತುವವರು 10 ಬಾರಿ ಈ ಸ್ಟೋರಿ ಓದಿ… ಒಂದೇ ದಿನಕ್ಕೆ ಬೀಳಬಹುದು 10 ಸಾವಿರ ರೂ. ದಂಡ!

    ಬೆಂಗಳೂರು: ಹಿರಿಯ ಅಧಿಕಾರಿಗಳ ಸೂಚನೆ ಬಳಿಕ ಇತ್ತೀಚೆಗೆ ಸಂಚಾರಿ ಪೊಲೀಸರು ಹೆಚ್ಚಾಗಿ ನಮ್ಮ ವಾಹನಗಳನ್ನು ತಡೆಯುತ್ತಿಲ್ಲ ಅಂತಾ ನಿರಾಳರಾಗಿದ್ದೀರಾ? ಹೆಲ್ಮೆಟ್​ ಧರಿಸದೇ ವಾಹನ ಚಲಾಯಿಸಿದರೂ ಬಚಾವ್​ ಆಗಬಹುದು ಅಂತಾ ಅಂದುಕೊಂಡಿದ್ದೀರಾ? ಒಂದು ವೇಳೆ ಫೈನ್​ ಬಿದ್ದರೂ ಒಂದು ದಿನಕ್ಕೆ ಒಂದೇ ಫೈನ್​ ತಾನೇ ಅಂತಾ ನಿರ್ಲಕ್ಷ್ಯ ವಹಿಸಿ, ಬೇಕಾಬಿಟ್ಟಿ ಗಾಡಿ ಚಲಾಯಿಸುವ ಮುನ್ನ ಈ ಸ್ಟೋರಿಯನ್ನು ಓದಲೇಬೇಕು.

    ಹೆಲ್ಮೆಟ್ ಹಾಕದೇ ಬೈಕ್ ಹತ್ತುವವರು ಹತ್ತುಬಾರಿ ಈ ಸ್ಟೋರಿ ಓದಬೇಕು. ಇಲ್ಲವಾದಲ್ಲಿ ನಿಮಗೆ ನಷ್ಟವಾಗಬಹುದು. ಏಕೆಂದರೆ, ಸಂಚಾರಿ ಪೊಲೀಸ್​ ಇಲಾಖೆ ಹೊಸದೊಂದು ತಾಂತ್ರಿಕ ವ್ಯವಸ್ಥೆಗೆ ಮುಂದಾಗಿದೆ. ಈ ವ್ಯವಸ್ಥೆಯ ಅಡಿಯಲ್ಲಿ ಹೆಲ್ಮೆಟ್ ಇಲ್ಲದೇ ನೀವೇನಾದರೂ ರಸ್ತೆಗಿಳಿದರೆ ಒಂದೇ ದಿನಕ್ಕೆ 10 ಸಾವಿರ ಬೇಕಾದ್ರೂ ದಂಡ ಬೀಳಬಹುದು ಹುಷಾರ್​!

    ಹೆಲ್ಮೆಟ್ ಹಾಕದವರಿಗೆ ಐಟಿಎಂಎಸ್ (ಇಂಟಿಗ್ರೇಟೆಡ್​ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಂ) ವ್ಯವಸ್ಥೆ ದುಸ್ವಪ್ನವಾಗಿದೆ. ಐಟಿಎಂಎಸ್ ವ್ಯವಸ್ಥೆಯನ್ನು ಇತ್ತೀಚೆಗಷ್ಟೇ ಬೆಂಗಳೂರಲ್ಲಿ ಜಾರಿ ಮಾಡಲಾಗಿದೆ. ಡಿಜಿಟಲ್ ಕ್ಯಾಮೆರಾ ಮೂಲಕ ಟ್ರಾಫಿಕ್ ರೂಲ್ಸ್ ಉಲ್ಲಂಘನೆಗೆ ದಂಡಹಾಕುವ ವಿಧಾನ ಇದಾಗಿದೆ. ಬೆಂಗಳೂರಿನ ಎಲ್ಲಾ ಜಂಕ್ಷನ್​ಗಳನ್ನೂ ಐಟಿಎಂಎಸ್ ಇದೆ.

    ಹೆಲ್ಮೆಟ್ ಹಾಕದವರಿಗೆ ದುಬಾರಿಯಾಗಿ ಪರಿಣಮಿಸುತ್ತಿದೆ ಈ ಐಟಿಎಂಎಸ್ (Integrated Traffic Management System). ಈ ಹಿಂದೆ ಹೆಲ್ಮೆಟ್ ಹಾಕದಿದ್ದರೆ ಒಮ್ಮೆ ಮಾತ್ರ ದಂಡ ಕಟ್ಟಿ ರಶೀದಿ ಪಡೆಯಬಹುದಿತ್ತು. ಆನಂತರ ಪೊಲೀಸರು ಹಿಡಿದರೆ ದಂಡದ ರಶೀದಿ ತೋರಿಸಿ ಮನೆಗೆ ಹೋಗಬಹುದಿತ್ತು. ಒಮ್ಮೆ ಮಾತ್ರ ದಂಡಕ್ಕೆ ಅವಕಾಶ ಇತ್ತು. ಆದರೆ, ಹೊಸ ವ್ಯವಸ್ಥೆಯಲ್ಲಿ ಪ್ರತಿ ಸಿಗ್ನಲ್​ನಲ್ಲೂ ದಂಡ ಸೇರುತ್ತಾ ಹೋಗುತ್ತದೆ. ಹೆಲ್ಮೆಟ್ ಹಾಕದೇ ಎಷ್ಟು ಸಿಗ್ನಲ್ ದಾಟುತ್ತೀರೋ ಅಷ್ಟು ದಂಡ ಒಂದೇ ಬಿಲ್​ಗೆ ಸೇರುತ್ತದೆ.

    ಒಬ್ಬ ಬೈಕ್​ ಸವಾರ ಹೆಲ್ಮೆಟ್ ಹಾಕದೇ ನಾಲ್ಕು ಸಿಗ್ನಲ್ ದಾಟಿದ್ರೆ 2 ಸಾವಿರ ಹಾಗೂ 8 ಸಿಗ್ನಲ್ ದಾಟಿದ್ರೆ 4 ಸಾವಿರ ದಂಡ ಬೀಳುತ್ತದೆ. ಒಂದು ವೇಳೆ ಹೆಲ್ಮೆಟ್ ಹಾಕದೇ ಹತ್ತಾರು ಸಿಗ್ನಲ್ ದಾಟಿದ್ರೆ ಹತ್ತಾರು ಸಾವಿರವೇ ದಂಡ ಬೀಳುತ್ತೆ. ಐಟಿಎಂಎಸ್​ನಿಂದ ಕಳೆದ ಒಂದೂವರೆ ತಿಂಗಳಲ್ಲಿ ಕೇಸ್ ಸಂಖ್ಯೆ ದುಪ್ಪಟ್ಟಾಗಿದೆ. ಐಟಿಎಂಎಸ್​ ಬರೊಬ್ಬರಿ 9 ಲಕ್ಷ ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಕೇಸ್ ದಾಖಲಿಸಿದೆ.

    ಹೀಗಾಗಿ ಇನ್ಮುಂದೆ ಬೆಂಗಳೂರಿನಲ್ಲಿ ಬೈಕ್​ ಓಡಿಸುವವರು ಐಟಿಎಂಎಸ್ (ITMS)​ ಬಗ್ಗೆ ತಿಳಿದುಕೊಂಡು ಗಾಡಿ ಚಲಾಯಿಸಿದರೆ, ನಿಮ್ಮ ಜೇಬಿಗೆ ಕತ್ತರಿ ಬೀಳುವುದನ್ನು ತಪ್ಪಿಸಿಕೊಳ್ಳಬಹುದು. (ದಿಗ್ವಿಜಯ ನ್ಯೂಸ್​)

    ಕಾಂತಾರ ಚಿತ್ರದ ಪ್ರಚಂಡ ಯಶಸ್ಸಿನ ಹಿಂದಿರುವ ಪ್ರಮುಖರು! ಇವರ ಕೈಚಳಕಕ್ಕೆ ನೀವೂ ಫಿದಾ ಆಗಿದ್ದೀರಿ

    ಪತ್ನಿಯನ್ನು ಕೊಂದು ಶವದೊಂದಿಗೆ ಸಂಭೋಗ: ಪೊಲೀಸರ ಮುಂದೆ ಪತಿ ಆಡಿದ ನಾಟಕ ಬಯಲಾಗಿದ್ದೇ ರೋಚಕ!

    ಪೊಲೀಸ್​ ಠಾಣೆಯ ಹೊರಗೆ ಕುಳಿತು ಹುಕ್ಕಾ ಸೇವನೆ! ರೀಲ್ಸ್​ ಮಾಡಲು ಹೋಗಿ ಜೈಲು ಪಾಲಾದ ಯುವಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts