More

    ಹೈದರಾಬಾದ್​ ಯುವತಿ ಜತೆ ಮದ್ವೆ: ಹನಿಮೂನ್​ ಬೆನ್ನಲ್ಲೇ ಹೊಸ ವರಸೆ ತೆಗೆದ ಬೆಂಗಳೂರು ಟೆಕ್ಕಿ!

    ಹೈದರಾಬಾದ್​: ಪ್ರೀತಿಯ ಹೆಸರಲ್ಲಿ ಯುವತಿಗೆ ವಂಚಿಸಿದ ಆರೋಪದಡಿಯಲ್ಲಿ ಟೆಕ್ಕಿಯೊಬ್ಬನ ವಿರುದ್ಧ ಹೈದರಾಬಾದ್​ನ ಸರೂರ್​ನಗರ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದ್ದು, ಬೆಂಗಳೂರಿನಲ್ಲಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.

    ಆರೋಪಿಯನ್ನು 33 ವರ್ಷದ ಪವನ್​ ಕುಮಾರ್​ ಎಂದು ಗುರುತಿಸಲಾಗಿದ್ದು, ಈತ ಹೈದರಾಬಾದ್​ನ ಛಂಪಾಪೇಟ್​ನ ನಾಗಾರ್ಜುನ ಕಾಲನಿ ನಿವಾಸಿ. ಸಂತ್ರಸ್ತೆಯನ್ನು 28 ವರ್ಷದ ಸರೂರ್​ನಗರ ನಿವಾಸಿ ಎಂದು ತಿಳಿದುಬಂದಿದೆ. ಆರೋಪಿ ಪವನ್​ ಸಾಫ್ಟ್​ವೇರ್​ ಇಂಜಿನಿಯರ್​ ಆಗಿದ್ದು, ಬೆಂಗಳೂರಿನಲ್ಲಿ ಕೆಲಸದಲ್ಲಿದ್ದ.

    ಇದನ್ನೂ ಓದಿ: ತಂದೆಯ ಲ್ಯಾಪ್​ಟಾಪ್​ನಲ್ಲಿ ತನ್ನ ಬೆತ್ತಲೆ ಫೋಟೋಗಳನ್ನು ನೋಡಿ ಬೆಚ್ಚಿ ಬಿದ್ದಳು ಮಗಳು!

    ಆರೋಪಿ ಪವನ್​ 2017ರಲ್ಲಿ ಯುವತಿಯನ್ನು ರಹಸ್ಯವಾಗಿ ಮದುವೆಯಾಗಿ ಒಂದು ವರ್ಷ ಸುಂದರ ವೈವಾಹಿಕ ಜೀವನ ಸಾಗಿಸಿದ್ದಾನೆ. ಒಂದು ವರ್ಷ ಇಬ್ಬರು ಒಟ್ಟಿಗೆ ಬಾಳಿದ ಬಳಿಕ ಪವನ್​ ಯುವತಿಯ ಮನವೊಲಿಸಿದ್ದಾನೆ. ಹೈದರಾಬಾದ್​ಗೆ ತೆರಳಿ ನಿಮ್ಮ ಪಾಲಕರ ಜತೆಗಿರು. ನಮ್ಮ ಮನೆಯವರಿಗೆ ನಮ್ಮಿಬ್ಬರ ಮದುವೆ ಬಗ್ಗೆ ಮನವರಿಕೆ ಮಾಡಿ, ಒಪ್ಪಿಗೆ ಪಡೆದು ನಿನ್ನನ್ನು ಕರೆಯಿಸಿಕೊಳ್ಳುತ್ತೇನೆಂದು ನಂಬಿಸಿದ್ದಾನೆ. ಆತನ ಮಾತನ್ನು ನಂಬಿ ಯುವತಿ ಹೈದರಾಬಾದ್​ಗೆ ಮರಳಿದ್ದಾಳೆ.

    ಹೊಸ ವರಸೆ ಶುರು ಮಾಡಿದ ಆರೋಪಿ
    ಯುವತಿ ಹೈದರಾಬಾದ್​ಗೆ ಮರಳುತ್ತಿದ್ದಂತೆ ಪವನ್​ ತನ್ನ ಮೊಬೈಲ್​ ಫೋನ್​ ಸ್ವಚ್​ ಆಫ್​ ಮಾಡಿದ್ದಲ್ಲದೆ, ಎಲ್ಲ ಜಾಲತಾಣ ಖಾತೆಗಳನ್ನು ಬ್ಲಾಕ್​ ಮಾಡಿದ್ದಾನೆ. ಯುವತಿ ಪವನ್​ ಸಂಪರ್ಕಿಸಲು ಎಷ್ಟೇ ಪ್ರಯತ್ನ ಮಾಡಿದರೂ ಸಾಧ್ಯವಾಗಲಿಲ್ಲ. ಆ ಬಳಿಕವಷ್ಟೇ ತಾನೂ ಮೋಸ ಹೋಗಿರುವುದು ಆಕೆಗೆ ಗೊತ್ತಾಗಿದೆ.

    ಹೈದರಾಬಾದ್​ ಯುವತಿ ಜತೆ ಮದ್ವೆ: ಹನಿಮೂನ್​ ಬೆನ್ನಲ್ಲೇ ಹೊಸ ವರಸೆ ತೆಗೆದ ಬೆಂಗಳೂರು ಟೆಕ್ಕಿ!

    ಹನಿಮೂನ್​ಗಾಗಿ ಊಟಿಗೆ ತೆರಳಿದ್ದೆವು
    ಈ ಬಗ್ಗೆ ದೂರು ನೀಡಿದ ಬಳಿಕ ತನ್ನ ಅಳಲುನ್ನು ತೊಡಿಕೊಂಡಿರುವ ಯುವತಿ, 2017ರಲ್ಲಿ ಮದುವೆಯಾದ ಬಳಿಕ ನಾನು ಮತ್ತು ಪವನ್​ ಊಟಿಗೆ ಹನಿಮೂನ್​ಗಾಗಿ ತೆರಳಿದ್ದೆವು. ಇದಾದ ಬಳಿಕ ನನ್ನನ್ನು ಹೈದರಾಬಾದ್​ಗೆ ಕಳುಹಿಸಿದ. ಮನೆಗೆ ತಿಳಿಸಿ ಮರಳಿ ಕರೆಸಿಕೊಳ್ಳುವುದಾಗಿ ಹೇಳಿದ. ಇದರ ಬೆನ್ನಲ್ಲೇ ಫೋನ್​ ಮತ್ತು ಜಾಲತಾಣ ಖಾತೆಗಳನ್ನು ಬ್ಲಾಕ್​ ಮಾಡಿದ. ಅಂದಹಾಗೆ ಪವನ್​ ನನ್ನ ಸಂಬಂಧಿಯಾಗಿದ್ದಾನೆ. ಎರಡು ವರ್ಷದಿಂದ ಆತನನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ ಎಂದಿದ್ದಾಳೆ.

    ಇದನ್ನೂ ಓದಿ: ಪ್ರೀತಿಸಿದ ಜೋಡಿಗೆ ವಿವಾಹ ಮಾಡಿಸಿದ ಪೊಲೀಸರು; ಕನ್ಯಾದಾನ ಮಾಡಿದ್ದು ಸಬ್​ ಇನ್ಸ್​​ಪೆಕ್ಟರ್​​

    ಅಲ್ಪಾವಧಿ ಸಂಬಂಧ ಸಾಮಾನ್ಯ ಎಂದ
    ಎರಡು ವರ್ಷದ ಅವಧಿಯಲ್ಲಿ ನಾನು ಪವನ್​ ಸಂಪರ್ಕಿಸಲು ಶತಯಾಗತಯಾ ಪ್ರಯತ್ನ ಮಾಡಿದ್ದೆ. ಈಮೇಲ್​ ಮಾಡಿದ್ದೆ. ಆದರೆ ಯಾವುದಕ್ಕೂ ಆತ ಪ್ರತಿಕ್ರಿಯೆ ಮಾಡಿರಲಿಲ್ಲ. ಇದರ ನಡುವೆ ಆತ ಹೈದರಾಬಾದ್​ಗೆ ಬಂದಾಗ ನಾನು ಅವರ ಮನೆಗೆ ಹೋಗಿದ್ದೆ. ಆದರೆ, ನನ್ನೊಂದಿಗೆ ಇರಲಿ ಅವನು ಬಯಸಲಿಲ್ಲ. ಬದಲಾಗಿ ನನಗೆ 10 ಲಕ್ಷ ರೂ. ನೀಡಿ ಸಂಬಂಧವನ್ನು ಕಡಿದುಕೊಳ್ಳಲು ಹೇಳಿದ. ಇಂತಹ ಅಲ್ಪಾವಧಿ ಸಂಬಂಧ ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಎಂತಲೂ ಹೇಳಿದ. ಆತನಿಗೆ ಮತ್ತೊಂದು ಮದುವೆ ಮಾಡಲು ಅವರ ಕುಟುಂಬ ನಿರ್ಧಿರಿಸಿದೆ. ಹೀಗಾಗಿ ನಾನು ಎಫ್​ಐಆರ್​ ದಾಖಲಿಸಿದ್ದೇನೆಂದು ಯುವತಿ ಹೇಳಿಕೆ ನೀಡಿದಳು.

    ಸದ್ಯ ಪವನ್​ ವಿರುದ್ಧ ಸರೂರ್​ ನಗರದಲ್ಲಿ ಎಫ್​ಐಆರ್​ ದಾಖಲಾಗಿದೆ. ಐಪಿಸಿಯ ವಿವಿಧ ಸೆಕ್ಷನ್​ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. (ಏಜೆನ್ಸೀಸ್​)

    ಮಗ ತಾಯಿಯನ್ನೇ ಮದುವೆಯಾದನಾ?: ವೈರಲ್​ ಸ್ಟೋರಿ ಹಿಂದಿನ ಅಸಲಿಯತ್ತೇ ಬೇರೆ ಇದೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts