More

    ತಮ್ಮ ಫೋಟೋಗಳನ್ನು ಪೋರ್ನ್​ ವೆಬ್​ಸೈಟ್​ಗಳಲ್ಲಿ ನೋಡಿ ದಂಗಾದ ಬೆಂಗಳೂರು ಕಾಲೇಜಿನ ವಿದ್ಯಾರ್ಥಿನಿಯರು

    ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತರ ಫ್ರೆಂಡ್​ ರಿಕ್ವೆಸ್ಟ್​ ಸ್ವೀಕರಿಸುವ ಮೊದಲು…ಮತ್ತು ನಮ್ಮ ಫೋಟೋಗಳನ್ನು ಅಪ್ಲೋಡ್​ ಮಾಡುವಾಗ ತುಂಬ ಎಚ್ಚರಿಕೆಯಿಂದ ಇರಬೇಕು. ಸೋಷಿಯಲ್​ ಮೀಡಿಯಾಗಳಿಂದಾಗಿ ಈಗಾಗಲೇ ಅದೆಷ್ಟೋ ಕ್ರೈಂಗಳು ನಡೆದುಹೋಗಿವೆ. ಅಲ್ಲದೆ, ಇಲ್ಲಿಂದ ಶುರುವಾದ ಗೆಳೆತನಗಳೇ ಹತ್ಯೆ, ರೇಪ್​ಗಳಿಗೂ ಕಾರಣವಾಗಿವೆ.

    ಇದೀಗ ಇನ್ನೊಂದು ಇಂಥದ್ದೇ ಆತಂಕಕಾರಿ ಘಟನೆ ನಡೆದುಹೋಗಿದೆ. ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಕಾಲೇಜಿನ ಕೆಲವು ವಿದ್ಯಾರ್ಥಿನಿಗಳು, ಮಹಿಳಾ ಬೋಧಕರು ತಮ್ಮ ಇನ್ಸ್ಟಾಗ್ರಾಂ, ಮತ್ತಿತರ ಸೋಷಿಯಲ್​ ಮೀಡಿಯಾಗಳಲ್ಲಿ ಪೋಸ್ಟ್​​ ಮಾಡಿದ್ದ ಫೋಟೋಗಳನ್ನು ಕಿಡಿಗೇಡಿಗಳು ಕದ್ದು, ಅದನ್ನು ಅಶ್ಲೀಲ ವೆಬ್​ಸೈಟ್​ಗೆ ಅಪ್ಲೋಡ್​ ಮಾಡಿದ್ದಾರೆ. ಈ ಬಗ್ಗೆ ಬೆಂಗಳೂರಿನ ಸೈಬರ್​ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದೆ. ಇದನ್ನೂ ಓದಿ: ಕರೊನಾ ಬಂದು ಸಾಯಿರಿ ಎಂದು ಹೇಳಿದವನಿಗೆ ಅಮಿತಾಭ್​ ಕೊಟ್ಟ ಉತ್ತರ ಇದು …

    ಈ ವಿಚಾರ ಅದೇ ಕಾಲೇಜಿನ ಕೆಲವು ವಿದ್ಯಾರ್ಥಿಗಳ ಗಮನಕ್ಕೆ ಬಂದಿದೆ. ಅಶ್ಲೀಲ ವೆಬ್​ಸೈಟ್​ಗಳಲ್ಲಿ ತಮ್ಮ ಸ್ನೇಹಿತರ ಫೋಟೋಗಳು ಹರಿದಾಡುತ್ತಿದ್ದುದನ್ನು ನೋಡಿದ ಅವರು ಸ್ಕ್ರೀನ್​ ಶಾಟ್​ ತೆಗೆದು ವಾಟ್ಸ್​ ಆ್ಯಪ್​ಗಳ ಮೂಲಕ ಸಂಬಂಧಪಟ್ಟವರಿಗೆ ಕಳಿಸಿದ್ದಾರೆ. ಕೇವಲ ವಿದ್ಯಾರ್ಥಿಗಳದ್ದಷ್ಟೇ ಅಲ್ಲ, ಅಲ್ಲಿನ ಮಹಿಳಾ ಅಧ್ಯಾಪಕರ ಫೋಟೋಗಳೂ ಸಹ ದುರ್ಬಳಕೆ ಆಗಿವೆ ಎಂದು ಮಾಜಿ ವಿದ್ಯಾರ್ಥಿಯೋರ್ವ ತಿಳಿಸಿದ್ದಾನೆ.

    ಕಾಲೇಜಿನ ವಿದ್ಯಾರ್ಥಿ ಸಂಘ ಈ ವಿಚಾರವನ್ನು ಪ್ರಾಂಶುಪಾಲರ ಗಮನಕ್ಕೂ ತಂದಿದೆ. ಪೊಲೀಸರೂ ಸಹ ತನಿಖೆ ಶುರು ಮಾಡಿದ್ದಾರೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ವಶಪಡಿಸಿಕೊಂಡು, ವಿಚಾರಣೆಗೂ ಒಳಪಡಿಸಿದ್ದಾರೆ.

    ಕೇವಲ ಇದೊಂದೇ ಕಾಲೇಜಿನ ವಿದ್ಯಾರ್ಥಿಗಳ ಫೋಟೋಗಳು ಮಾತ್ರವಲ್ಲ, ಇನ್ನೂ ಹಲವು ಕಾಲೇಜುಗಳ ವಿದ್ಯಾರ್ಥಿಗಳೂ ಇದೇ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂಬ ಸಂಶಯವನ್ನು ಪೊಲೀಸರೇ ವ್ಯಕ್ತಪಡಿಸಿದ್ದು, ಕ್ರಮಕ್ಕೆ ಮುಂದಾಗಿದ್ದಾರೆ. (ಏಜೆನ್ಸೀಸ್​)

    ಕರೊನಾ ಸಂಕಷ್ಟದಲ್ಲಿ ಭಾರತಕ್ಕೆ ಮತ್ತೊಂದು ಕುಖ್ಯಾತಿ; ಇದು ಕಳವಳಕಾರಿ ವಿದ್ಯಮಾನವೂ ಹೌದು…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts