More

    ಪಿಎಂ ಮತ್ತು ಸಿಎಂ ಓಡಾಡೋ ಜಾಗದಲ್ಲಿ ಸ್ಯಾಂಟ್ರೋ ರವಿಯನ್ನು ಕರೆದೊಯ್ದಿದ್ದಕ್ಕೆ ಮಾಜಿ ಸಿಎಂ ಎಚ್​ಡಿಕೆ ಆಕ್ರೋಶ

    ಬೆಂಗಳೂರು: ಗುಜರಾತ್​​​ನಲ್ಲಿ ಸಿಕ್ಕಿಬಿದ್ದ ಮಂಜುನಾಥ್​ ಅಲಿಯಾಸ್​ ಸ್ಯಾಂಟ್ರೋ ರವಿಯನ್ನು ರಹಸ್ಯವಾಗಿ ಕರೆದೊಯ್ದಿರುವುದಕ್ಕೆ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಅವರು ಕೆಂಡಾಮಂಡಲರಾಗಿದ್ದಾರೆ.

    ಗುಜರಾತ್​ನಲ್ಲಿ ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿಯನ್ನು ನಿನ್ನೆ (ಜ.13) ರಾಜ್ಯದ ಪೊಲೀಸರು ಬಂಧಿಸಿದರು. ತಡರಾತ್ರಿಯೇ ಆರೋಪಿ ರವಿ ಜೊತೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪೊಲೀಸರು, ರವಿಯನ್ನು ರಹಸ್ಯವಾಗಿ ಕರೆದೊಯ್ದಿದ್ದಾರೆ. ಮಾಧ್ಯಮಗಳ ಕಣ್ತಪ್ಪಿಸಿ ವಿವಿಐಪಿ ಗೇಟ್ ಮುಖಾಂತರ ಕರೆದುಕೊಂಡು ಹೋಗಲಾಗಿದೆ. ಸುಮಾರು 80 ಪೊಲೀಸರು ಭದ್ರತೆಗೆ ನಿಯೋಜನೆಗೊಂಡಿದ್ದರು.

    ಹಿರಿಯ ಅಧಿಕಾರಿಗಳ ಸೂಚನೆಯಂತೆ ರಹಸ್ಯವಾಗಿ ಸ್ಯಾಂಟ್ರೋ ರವಿಯನ್ನು ಪೊಲೀಸರು ಕರೆದುಕೊಂಡು ಹೋಗಿದ್ದಾರೆ. ಇದರಿಂದ ಅಸಮಧಾನಗೊಂಡಿರುವ ಮಾಜಿ ಸಿಎಂ ಎಚ್​ಡಿಕೆ, ರಾಜ್ಯ ಸರ್ಕಾರ ಹಾಗೂ ಪೊಲೀಸರ ವಿರುದ್ಧ ಗುಡುಗಿದ್ದಾರೆ.

    ಕೆಐಎಎಲ್ ಬಳಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ‌ ಎಚ್​ಡಿಕೆ, ಪೊಲೀಸರು, ಪ್ರಧಾನಿಗಳು ಹಾಗೂ ಮುಖ್ಯಮಂತ್ರಿಗಳು ಓಡಾಡುವ ಜಾಗದಲ್ಲಿ ಇಂತಹ ಆರೋಪಿಯನ್ನು ಯಾಕೆ ಕರೆದೊಯ್ದರು? ಈ ರಾಜ್ಯದಲ್ಲಿ ಪೊಲೀಸ್ ಇಲಾಖೆ ಬದುಕಿದೆಯಾ? ಇದನ್ನು ನೋಡ್ತಾ ಇದ್ದರೆ ಈಗಲೂ ಪೊಲೀಸರು ಸ್ಯಾಂಟ್ರೋ ರವಿಗೆ ರಾಜ್ಯಾತಿಥ್ಯ ನೀಡುತ್ತಿದ್ದಾರೆ ಅನಿಸುತ್ತದೆ ಎಂದರು.

    ಗೃಹ ಮಂತ್ರಿಗಳು ಆಹಮದಾಬಾದ್​ಗೆ ಹೋಗ್ತಾರೆ. ಅದೇ ಜಾಗದಲ್ಲಿ ಸ್ಯಾಂಟ್ರೋ ರವಿ ಬಂಧನವಾಗ್ತಾರೆ. ಅಲ್ಲಿ ಬಿಜೆಪಿ‌ ಸರ್ಕಾರ ಇದೆ. ಹೀಗಾಗಿ ಮೊದಲೇ ರವಿಯನ್ನು ಬಂಧನ ಮಾಡಿದ್ದಾರೆ. ಅವನ ಬಳಿಯಿರುವ ದಾಖಲೆಗಳನ್ನು ತೆಗೆದುಕೊಂಡು‌ ಈಗ ಬಂಧನದ ನಾಟಕವಾಡುತ್ತಿದ್ದಾರೆ. ಇರುವ ಸಾಕ್ಷಿಗಳನ್ನು ಈಗಾಗಲೇ ನಾಶ ಮಾಡಿರುತ್ತಾರೆ. ಪಿಎಸ್ಐ ಹಗರಣ ಹಾಗೂ ಡ್ರಗ್ಸ್ ಕೇಸ್​ಗಳಂತೆ ಈ ಪ್ರಕರಣವನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕುತ್ತಾರೆಂದು ಟೀಕಾ ಪ್ರಹಾರ ನಡೆಸಿದರು.

    ಅಧಿಕಾರಿಗಳ ವರ್ಗಾವಣೆಯಲ್ಲಿ ಇವನದ್ದೇ ನೇರ ಪಾತ್ರ ಇದೆ. ಯಾವ ಅಧಿಕಾರಿಗಳು ಇವನ ಬಗ್ಗೆ ತನಿಖೆ ಮಾಡ್ತಾರೆ? ಇವರು ಬಂಧಿಸಿ ಕರೆತಂದಿರುವುದು ಮೈಸೂರಿನಲ್ಲಿ ಮಹಿಳೆ ಕೊಟ್ಟಿರುವ ಕೇಸ್ ಆಧಾರದ ಮೇಲೆ. ಬೇರೆ ವಿಷಯ ಇದೆಯಲ್ಲ ಅದನ್ನು ಯಾವ ರೀತಿ ತನಿಖೆ ಮಾಡುತ್ತಾರೆ? ಬಿಜೆಪಿ ಪಕ್ಷದವರು ಈ ದೇಶದಲ್ಲಿ ಏನು ಬೇಕಿದ್ರು ಮಾಡ್ತಾರೆ. ಸ್ಯಾಂಟ್ರೋ ರವಿ ಪರಾರಿಯಾಗಲು ಮೈಸೂರು ಪೊಲೀಸರು ಸಹಾಯ ಮಾಡಿದ್ದಾರೆ. ರಾಜ್ಯ ಬಿಟ್ಟು ಹೋಗೋವರೆಗೆ ಏನು ಮಾಡ್ತಿದ್ರು? ಪೊಲೀಸ್ ಇಲಾಖೆ ಬದುಕಿದ್ಯಾ? ಇಲಾಖೆಯನ್ನು ಯಾವಾಗಲೋ ಸಾಯಿಸಿದ್ದಾರೆ. ಉನ್ನರ ಅಧಿಕಾರಿ ವರ್ಗಾವಣೆ ಮಾಡುವ ಅಧಿಕಾರವನ್ನೇ ಅವನಿಗೆ ಕೊಟ್ಟಿದ್ದಾರೆ ಎಂದು ಗುಡುಗಿದರು.

    ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಕ್ರಮ ತೆಗೆದುಕೊಂಡಿಲ್ಲ ಎಂಬ ಸಚಿವ ಆರ್.ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿ, ನನ್ನ ಕಾಲದಲ್ಲಿ ಈ ವಿಚಾರ ಬಂದಿದ್ದರೆ ಯಾವಾಗಲೋ ತನಿಖೆ ಮಾಡ್ತಿದ್ದೆ. ನನ್ನ ಕಾಲದಲ್ಲಿ ವಿಧಾನಸೌಧ, ಕುಮಾರಕೃಪದಲ್ಲಿ ಇರಲು ಬಿಟ್ಟಿದ್ನಾ? ನಮಗೇನು ಇವರ ಆಟ ಗೊತ್ತಿಲ್ವಾ? ಯಾರ್ಯಾರು? ಎಲ್ಲೆಲ್ಲಿ? ಸಂಪರ್ಕದಲ್ಲಿದ್ದಾರೆ ಅಂತಾ ಗೊತ್ತಿಲ್ವಾ? ಸದಾನಂದಗೌಡ ಸಿಎಂ ಆಗಿದ್ದಾಗ ಇವರು ಗೃಹ ಸಚಿವರಾಗಿದ್ದಲ್ಲ ಆಗ ಏನು ಮಾಡ್ತಿದ್ರು? ನಮ್ಮ ಸರ್ಕಾರ ಹೋದಮೇಲೆ ಇವನ ಆಟ ಶುರುವಾಗಿದೆ. 2005 ರಲ್ಲೂ ಹೆಂಡತಿ ಸಾಯಿಸಿ ತಪ್ಪಿಸಿಕೊಂಡಿದ್ದ. ವಿಐಪಿ ಗೇಟ್ ನಲ್ಲಿ ಕರೆದುಕೊಂಡು ಹೋಗಿದ್ದು ಮಹಾನ್ ತಪ್ಪು. ಡ್ರಗ್ಸ್ ಕೇಸ್, ಪಿಎಸ್ಐ ಕೇಸ್​ನಂತೆ ಇದನ್ನೂ ಮುಚ್ಚಿಹಾಕ್ತಾರೆ ಎಂದರು. (ದಿಗ್ವಿಜಯ ನ್ಯೂಸ್​)

    64ನೇ ವಯಸ್ಸಿನಲ್ಲಿ ಮೂರನೇ ಮದುವೆ! ಹಿರಿಯ ನಟಿ ಜಯಸುಧಾ ಕೊಟ್ಟ ಸ್ಪಷ್ಟನೆ ಹೀಗಿದೆ…

    ಕುಶಲಕರ್ವಿುಗಳಿಗೆ ಸಂಕ್ರಾಂತಿ ಗಿಫ್ಟ್; 15 ಸಾವಿರ ರೂ. ಸಹಾಯಧನದೊಂದಿಗೆ 50 ಸಾವಿರ ರೂ. ನೆರವು

    ಗಾಂಧಿ-ಗೋಡ್ಸೆ ಟ್ರೇಲರ್ ಬಿಡುಗಡೆ; ಕುತೂಹಲ ಮೂಡಿಸಿರುವ ರಾಜ್​ಕುಮಾರ್ ಸಂತೋಷಿ ಸಿನಿಮಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts