More

    ಅಪ್ಪು ಮೊದಲ ವರ್ಷದ ಪುಣ್ಯ ಸ್ಮರಣೆ: ಕಂಠೀರವ ಸ್ಟುಡಿಯೋ ಬಳಿ ಬಿಗಿ ಬಂದೋಬಸ್ತ್, ಇಡೀ​ ದಿನ ಅನ್ನಸಂತರ್ಪಣೆ, ವಿಶೇಷ ಕಾರ್ಯಕ್ರಮಗಳು

    ಬೆಂಗಳೂರು: ಕರ್ನಾಟಕ ರತ್ನ ಪುನೀತ್​ ರಾಜ್​ಕುಮಾರ್​ ನಮ್ಮನ್ನೆಲ್ಲ ಅಗಲಿ ಇಂದಿಗೆ ಒಂದು ವರ್ಷ ಕಳೆದಿದೆ. ಆದರೂ, ಇಂದಿಗೂ ಅಪ್ಪು ನಮ್ಮ ನಡುವೆ ಇಲ್ಲ ಎಂಬುದನ್ನು ಅರಗಿಸಿಕೊಳ್ಳಲು ಆಗುವುದಿಲ್ಲ. ತಮ್ಮ ಸರಳತೆ ಮತ್ತು ಮಾನವೀಯ ಗುಣಗಳಿಂದಲೇ ಅಸಂಖ್ಯಾತ ಅಭಿಮಾನಿಗಳ ಮನದಲ್ಲಿ ಅಪ್ಪು ಮನೆ ಮಾಡಿದ್ದಾರೆ. ಜೊತೆಗಿರದ ಜೀವ ಎಂದಿಗೂ ಜೀವಂತ ಎನ್ನುವಂತೆ ಪ್ರತಿ ನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಅಭಿಮಾನಿಗಳು ಪುನೀತ್​ರನ್ನು ನೆನೆಯುತ್ತಿದ್ದಾರೆ.

    ಇಂದು ಅಪ್ಪು ಅವರ ಒಂದನೇ ವರ್ಷದ ಪುಣ್ಯ ಸ್ಮರಣೆ ಹಿನ್ನಲೆಯಲ್ಲಿ ಕಂಠೀರವ ಸ್ಟುಡಿಯೋ ಬಳಿಯಲ್ಲಿ ಬಿಗಿ ಬಂದೋಬಸ್ತ್​ ಮಾಡಲಾಗಿದೆ. ಉತ್ತರ ವಿಭಾಗದ ಡಿಸಿಪಿ ವಿನಾಯಕ್ ಪಾಟೀಲ್​ರ ನೇತೃತ್ವದಲ್ಲಿ ಬಂದೋಬಸ್ತ್​ ನೀಡಲಾಗಿದ್ದು. ನಿನ್ನೆ ರಾತ್ರಿಯಿಂದಲು ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.

    ಕಂಠೀರವ ಸ್ಟುಡಿಯೋ ಮುಂಭಾಗದಿಂದಲು ಸಹ ಪೊಲೀಸರು ಸರ್ಪಗಾವಲಿನಲ್ಲಿದ್ದು, ಬ್ಯಾರಿಕೇಡ್​ಗಳನ್ನು ಅಳವಡಿಸಿರುವ ಮುಖಾಂತರವಾಗಿ ಜನರು ಬರುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಇಂದು ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಲಿದ್ದು, ಯಾವುದೇ ರೀತಿಯಾದ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮವನ್ನು ಪೊಲೀಸರು ವಹಿಸಿದ್ದು. ಓರ್ವ ಡಿಸಿಪಿ, 4 ಎಸಿಪಿ, 12 ಇನ್ಸ್​ಪೆಕ್ಟರ್​, 20 ಪಿಎಸ್ಐ ಹಾಗೂ 500 ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ.

    ಅಪ್ಪು ಸಮಾಧಿ ಬಳಿ ಬಂದವರಿಗೆಲ್ಲ ಅನ್ನಸಂತರ್ಪಣೆ
    ಅಭಿಮಾನಿಗಳು ಸೇರಿದಂತೆ ಅಪ್ಪು ಸ್ಮಾರಕದ ಬಳಿ ಬರುವ ಜನರಿಗೆಲ್ಲ ಸಂಜೆಯವರೆಗೂ ಅನ್ನಸಂತರ್ಪಣೆ ನಡೆಯಲಿದೆ. ಪಲಾವ್, ಮೊಸರಬಜ್ಜಿ ಹಾಗೂ ಟಮೋಟ ಬಾತ್ ಸಿದ್ಧಪಡಿಸಲಾಗಿದೆ. ಸುಮಾರು ಒಂದು ಲಕ್ಷ ಜನರಿಗೆ ಊಟ ತಯಾರಾಗುತ್ತಿದೆ. 40 ಮಂದಿಯ ಬಾಣಸಿಗರ ತಂಡ ಮಾಗಡಿಯಿಂದ ಬಂದಿದೆ. ಏಳು ಟನ್ ಅಕ್ಕಿ, ನಾಲ್ಕು ಟನ್ ತರಕಾರಿ ಹಾಗೂ ನೂರು ಟಿನ್ ಎಣ್ಣೆ ಬಳಕೆ ಮಾಡಲಾಗುತ್ತಿದೆ.

    ನಿನ್ನೆ ರಾತ್ರಿಯಿಂದಲೇ ಕಾರ್ಯಕ್ರಮ
    ಅಪ್ಪು ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ 12 ಗಂಟೆಯಿಂದ ನಿರಂತರವಾಗಿ ಗೀತ ನಮನ ಕಾರ್ಯಕ್ರಮ ನಡೆಯುತ್ತಿದೆ. ಕರ್ನಾಟಕ ಫಿಲಂ ಮ್ಯೂಸಿಕ್ ಅಸೋಸಿಯೇಷನ್ ವತಿಯಿಂದ ಈ ವಿಶೇಷ ಕಾರ್ಯಕ್ರಮ ಆಯೋಜನೆಗೊಂಡಿದೆ. ಮಧ್ಯಾರಾತ್ರಿ 12ರಿಂದ ಬೆಳಗ್ಗೆ 3ರ ವರೆಗೆ ಅರುಣ್ ಹಾಗೂ ತಂಡದಿಂದ ಸಂಗೀತ ಕಾರ್ಯಕ್ರಮ ನಡೆದಿದ್ದು, ಬೆಳಗ್ಗೆ 3 ರಿಂದ ಬೆಳಿಗ್ಗೆ 5ರ ವರೆಗೆ ಉಷಾ ಕೋಕಿಲ ಹಾಗೂ ತಂಡದಿಂದ ಸಂಗೀತ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ.

    ಬೆಳಗ್ಗೆ 5.30 ರಿಂದ 6.30ರ ತನಕ ಆನೂರು ಅನಂತ ಕೃಷ್ಣ ಶರ್ಮ ವತಿಯಿಂದ ಲಯ ಲಾವಣ್ಯ ಕಾರ್ಯಕ್ರಮ ನಡೆದಿದೆ. 7 ರಿಂದ 8 ಜೋಟ್ಸಾನಾ ಶ್ರೀಕಾಂತ್ ತಂಡದಿಂದ ವಯೋಲಿನ್ ವಾದನ ನಡೆದಿದೆ. 8.30 ರಿಂದ 10.30ರವರೆಗೆ ಸುದರ್ಶನ್ ಮತ್ತು ತಂಡದಿಂದ ಚಲನಚಿತ್ರ ಗೀತೆ, 11 ರಿಂದ ಮಧ್ಯಾಹ್ನ 1ರವರೆಗೆ ಸುಗಮ ಸಂಗೀತ, ಮಧ್ಯಾಹ್ನ 1ರಿಂದ 4ರ ತನಕ ವೇಣುಗೋಪಾಲ್ ವೆಂಕಿ ತಂಡದಿಂದ ಚಲನಚಿತ್ರ ಗೀತೆ, 4.30 ರಿಂದ 5.30 ರ ವರೆಗೆ ವೀಣಾ ವಾರುಣಿ ತಂಡದ ವತಿಯಿಂದ ಚಲನಚಿತ್ರ ಗೀತೆ (ವೀಣೆ ಮೂಲಕ), ಸಂಜೆ 6ರಿಂದ 6.45 ರ ತನಕ ಬೆಂಗಳೂರು ಸ್ಟ್ರಿಂಗ್​ ಎನ್ಸೆಂಬಲ್ ವತಿಯಿಂದ ಸಂಗೀತ ಸಂಜೆ, 7.15 ರಿಂದ 8.30ರ ತನಕ ಮಜಾ ಟಾಕೀಸ್​ನ ರೆಮೋ ತಂಡದ ವತಿಯಿಂದ ಅಪ್ಪುಗೆ ಫೀಮೇಲ್ ಬ್ಯಾಂಡ್ ಗೌರವ, ರಾತ್ರಿ 9ರಿಂದ 12ರ ತನಕ ಸಾಧುಕೋಕಿಲ ನೇತೃತ್ವದಲ್ಲಿ ಸಂಗೀತ ಕಾರ್ಯಕ್ರಮ ನಡೆಯಲಿದೆ.

    ರಾತ್ರಿ ಇಡೀ ಪುನೀತ್ ಸಮಾಧಿ ದರ್ಶನಕ್ಕೆ ಅಭಿಮಾನಿಗಳಿಗೆ ಅವಕಾಶ …

    800 ಕಿ.ಮೀ. ದೂರ ನಡೆದುಕೊಂಡೇ ಬಂದು ಅಪ್ಪು ಸಮಾಧಿಗೆ ಭಾರವಾದ ಮನಸ್ಸಿನಲ್ಲೇ ನಮಿಸಿದ ಅಭಿಮಾನಿ!

    ತೆರೆ ಮೇಲೆ ಪುನೀತ್ ನೋಡಿ ಕಣ್ಣೀರಿಟ್ಟ ಅಭಿಮಾನಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts