More

    ರಾತ್ರಿ ಇಡೀ ಪುನೀತ್ ಸಮಾಧಿ ದರ್ಶನಕ್ಕೆ ಅಭಿಮಾನಿಗಳಿಗೆ ಅವಕಾಶ …

    ಬೆಂಗಳೂರು: ಪುನೀತ್ ರಾಜ್ ಕುಮಾರ್ ನಿಧನರಾಗಿ ನಾಳೆ ಶನಿವಾರಕ್ಕೆ (ಅ.29) ಒಂದು ವರ್ಷ. ಮೊದಲನೇ ವರ್ಷದ ಪುಣ್ಯಸ್ಮರಣೆ ಹಿನ್ನಲೆಯಲ್ಲಿ ಇಂದು ರಾತ್ರಿ ಇಡೀ ಪುನೀತ್​ ಸಮಾಧಿ ದರ್ಶನಕ್ಕೆ ಅಭಿಮಾನಿಗಳಿಗೆ ಅವಕಾಶ ನೀಡಲಾಗಿದೆ.

    ಇದನ್ನೂ ಓದಿ: ಪುನೀತ್​ ಹುಟ್ಟಿದ್ದೇ ಈ ಉದ್ದೇಶಕ್ಕೆ …

    ಕಳೆದ ವರ್ಷ ಅ. 29ರಂದು ತೀವ್ರ ಹೃದಯಾಘಾತದಿಂದ ಪುನೀತ್​ ನಿಧನರಾಗಿದ್ದರು. ಅವರ ಅಂತ್ಯಕ್ರಿಯೆ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿಸಲಾಗಿತ್ತು. ಈ ಪುಣ್ಯಭೂಮಿಗೆ ಅಲ್ಲಿಂದ ಇಲ್ಲಿಯವರೆಗೂ ಲಕ್ಷಾಂತರ ಜನ ಭೇಟಿ ನೀಡಿದ್ದು, ನಾಳೆ ಅವರ ಪುಣ್ಯ ಸ್ಮರಣೆ ಅಂಗವಾಗಿ ಸಾವಿರಾಗು ಜನ ಭೇಟಿ ನೀಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ರಾತ್ರಿ ಇಡೀ ಪುನೀತ್ ಸಮಾಧಿ ದರ್ಶನಕ್ಕೆ ಅಭಿಮಾನಿಗಳಿಗೆ ಅವಕಾಶ ಕಲ್ಪಿಸಲಾಗಿದೆ.

    ಇಂದು ರಾತ್ರಿ 12ರಿಂದಲೇ ಸಾಧು ಕೋಕಿಲ ಅವರ ನೇತೃತ್ವದಲ್ಲಿ ‘ಪುನೀತ್ ಗೀತ ನಮನ’ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಸಮಾಧಿ ಸುತ್ತಾ ಮುತ್ತಾ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಉತ್ತರ ವಿಭಾಗದ ಡಿಸಿಪಿ ವಿನಾಯಕ್ ಪಾಟೀಲ್ ನೇತೃತ್ವದಲ್ಲಿ 500 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಭದ್ರತೆಗೆ ನಿಯೋಜಿಸಲಾಗಿದೆ. ಓರ್ವ ಡಿಸಿಪಿ, 4 ಎಸಿಪಿ, 10 ಇನ್ಸ್ ಪೆಕ್ಟರ್, 15 ಪಿಎಸ್ಐ, 2 ಕೆಎಸ್ಆರ್ ಪಿ ತುಕಡಿ ಸೇರಿ 500ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜಿಸಲಾಗಿದೆ.

    ಇನ್ನು, ನಾಳೆ ಬೆಳಿಗ್ಗೆ ಪುನೀತ್​ ಅವರ ಪುಣ್ಯಸ್ಮರಣೆಯ ಅಂಗವಾಗಿ ಅವರ ಕುಟುಂಬದವರು ಪುಣ್ಯಭೂಮಿಗೆ ಭೇಟಿ ನೀಡಲಿದ್ದಾರೆ. ಬರೀ ಕುಟುಂಬದವರು ಮತ್ತು ಅಭಿಮಾನಿಗಳಷ್ಟೇ ಅಲ್ಲ, ಚಿತ್ರರಂಗದ ಸಾಕಷ್ಟು ಸೆಲೆಬ್ರಿಟಿಗಳು ಈ ಪುಣ್ಯಸ್ಮರಣೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: ‘ಗಂಧದ ಗುಡಿ’ಯಲ್ಲಿ ಮಿಂದೆದ್ದ ಅಭಿಮಾನಿಗಳು; ಇಂದು ಎಲ್ಲಾ ಪ್ರದರ್ಶನಗಳು ಫುಲ್​

    ಪುನೀತ್​ ಅವರ ಮೊದಲ ವರ್ಷದ ಪುಣ್ಯತಿಥಿಯ ಅಂಗವಾಗಿ ಕಂಠೀರವ ಸ್ಟುಡಿಯೋದಲ್ಲಿ 75 ಕಟೌಟ್​ಗಳನ್ನು ನಿರ್ಮಿಸಲಾಗಿದೆ. ಎಲ್ಲ ಕಟೌಟ್​ಗಳಿಗೂ ಹಾರಗಳಿಂದ ಸಿಂಗರಿಸಲಾಗಿದೆ. ಈ ಸಂದರ್ಭದಲ್ಲಿ ಪುಣ್ಯಸ್ಥಳಕ್ಕೆ ಭೇಟಿ ನೀಡು ಅಭಿಮಾನಿಗಳಿಗೆಂದೇ ಉಪಹಾರ, ಊಟ ಆಯೋಜಿಸಲಾಗಿದೆ. ಜತೆಗೆ ರಕ್ತದಾನ ಸೇರಿದಂತೆ ಹಲವು ಶಿಬಿರಗಳನ್ನು ಈ ಸಂದರ್ಭದಲ್ಲಿ ಆಯೋಜಿಸಲಾಗಿದೆ.

    ದೇವರ ಅವತಾರದಲ್ಲಿ ಅಪ್ಪು, ಶಿವ-ಪಾರ್ವತಿ ಫೋಟೋದಲ್ಲಿ ಪುನೀತ್​-ಅಶ್ವಿನಿ! ಡಿಫರೆಂಟ್ ಕಟೌಟ್​ ಹಾಕಿ ಅಭಿಮಾನ ಮೆರೆದ ಫ್ಯಾನ್ಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts