More

    ಗುರುಗ್ರಾಮ್​ನಲ್ಲಿ ಮದುವೆ, ಬೆಂಗಳೂರಿಂದ ವಿಡಿಯೋ ಕಾಲ್​ನಲ್ಲೇ ಸೊಸೆಯನ್ನು ಮನೆ ತುಂಬಿಸಿಕೊಂಡ ಅತ್ತೆ!

    ಇಡೀ ಜಗತ್ತನ್ನೇ ಆವರಿಸಿರುವ ಕರೊನಾ ಭೀತಿಯಿಂದಾಗಿ ಮನೆಯಿಂದ ಹೊರಬರಲು ಜನ ಭಯ ಪಡುವಂತಾಗಿದೆ. ಸಭೆ, ಸಮಾರಂಭಗಳಿಗೂ ಬ್ರೇಕ್​ ಬಿದ್ದಿದೆ. ನಿಗದಿಯಂತೆ ಅದ್ದೂರಿಯಾಗಿ ನೆರವೇರಬೇಕಿದ್ದ ಬಹುತೇಕ ಮದುವೆಗಳು ಲಾಕ್​ಡೌನ್​ನಿಂದಾಗಿ ಸರಳವಾಗಿ ನೆರವೇರುತ್ತಿವೆ. ಇದೇ ಕಾರಣಕ್ಕೆ 3 ದಿನ ಅದ್ದೂರಿಯಾಗಿ ನಡೆಯಬೇಕಿದ್ದ ಬೆಂಗಳೂರು ಮೂಲದ ಪೈಲಟ್​ವೊಬ್ಬರ ಮದುವೆ ಗುರುಗ್ರಾಮ್​ನಲ್ಲಿ 2 ಗಂಟೆಯಲ್ಲೇ ಮುಗಿದೆ. ಈ ಜೋಡಿ ದಾಂಪತ್ಯಕ್ಕೆ ಕಾಲಿಟ್ಟ ಕ್ಷಣವನ್ನು ವರನ ತಂದೆ-ತಾಯಿ ಮತ್ತು ಸಂಬಂಧಿಕರು ಆನ್​ಲೈನ್​ನಲ್ಲೇ ಕಣ್ತುಂಬಿಕೊಂಡು ಶುಭ ಹಾರೈಸಿದ್ದಾರೆ.

    ಇದನ್ನೂ ಓದಿರಿ ಏರ್​ಪೋರ್ಟ್​​ಗೆ ಬಂದಿಳಿಯುತ್ತಿದ್ದಂತೆ ನೆಲದ ಮೇಲೆ ಮಂಡಿಯೂರಿ ಕುಳಿತುಬಿಟ್ಟರು ಇವರು…

    ಇಂಡಿಗೋ ವಿಮಾನದ ಪೈಲಟ್​, ಬೆಂಗಳೂರು ಮೂಲದ ಸಮೀರ್ ವರ್ಮಾ(28) ಜತೆ ಅಕ್ಸೆಂಚರ್ ಕಂಪನಿ ಉದ್ಯೋಗಿ ಆಯುಷಿ ಕಟಾರಿಯಾ(27) ಮದುವೆ ಏ.17ರಂದು ನಿಶ್ಚಯವಾಗಿತ್ತು. ಬೆಂಗಳೂರಿನಲ್ಲಿ ನೆಲೆಸಿರುವ ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಕಾರ್ಗಿಲ್​ ಯುದ್ಧದಲ್ಲಿ ಪಾಲ್ಗೊಂಡಿದ್ದ​ ರೋಹಿತ್ ವರ್ಮಾ ಮತ್ತು ಕಿರಣ್​ ವರ್ಮ ದಂಪತಿ ಪುತ್ರ ಸಮೀರ್​. ಆಯುಷಿ ಮತ್ತು ಅವಳ ಕುಟುಂಬ, ಸಮೀರ್ ಗುರುಗ್ರಾಮ್​ನಲ್ಲಿ ನೆಲೆಸಿದೆ.

    ಗುರುಗ್ರಾಮ್​ನಲ್ಲಿ ಮದುವೆ, ಬೆಂಗಳೂರಿಂದ ವಿಡಿಯೋ ಕಾಲ್​ನಲ್ಲೇ ಸೊಸೆಯನ್ನು ಮನೆ ತುಂಬಿಸಿಕೊಂಡ ಅತ್ತೆ!ಸಮೀರ್​ ಮತ್ತು ಆಯುಷಿ ಮದುವೆಯನ್ನು ಮೂರು ದಿನ ಅದ್ದೂರಿಯಾಗಿ ನಡೆಸಲು ಲಾಕ್​ಡೌನ್​ ಘೋಷಣೆಗೂ ಮುನ್ನವೇ ವಧುವಿನ ಮನೆಯವರು ಸಿದ್ಧತೆ ಮಾಡಿಕೊಂಡಿದ್ದರು. ದೆಹಲಿಯ ರೆಸಾರ್ಟ್​ನಲ್ಲಿ ಮದುವೆ, ವರನ ಸ್ವಗೃಹ ಬೆಂಗಳೂರಿನ ವೈಟ್​ಫೀಲ್ಡ್ ನಲ್ಲಿ ಪೂಜಾ ಕಾರ್ಯ ನಿಗದಿಯಾಗಿತ್ತು. ಅಂದುಕೊಂಡಂತೆ ಎಲ್ಲವೂ ಆಗಿದ್ದರೆ ಈ ಮದುವೆಗೆ ಆಸ್ಟ್ರೇಲಿಯಾ, ಬೆಲ್ಜಿಯಂ ದೇಶದ ಅತಿಥಿಗಳು ಸೇರಿ ನೂರಾರು ಸಂಬಂಧಿಕರು ಭಾಗವಹಿಸುತ್ತಿದ್ದರು.

    ಇದನ್ನೂ ಓದಿರಿ ಎಟಿಎಂ ಒಳಗೆ ಹಾವಿದೆ… ಜೋಕೆ!

    ಸಮೀರ್​ ವಾಸಿಸುವ ಸ್ಥಳದಿಂದ ಆಯುಷಿ ಮನೆ ಸಮೀಪದಲ್ಲೇ ಇದೆ. ಮೇ 1ರ ಬಳಿಕ ಲಾಕ್​ಡೌನ್ ಮುಗಿಯುವ ಲಕ್ಷಣ ಕಾಣುತ್ತಿಲ್ಲ ಎಂಬುದನ್ನು ಅರಿತ ಎರಡೂ ಕುಟುಂಬಸ್ಥರು ಸಂಬಂಧಿಕರ ಅನುಪಸ್ಥಿತಿಯಲ್ಲೇ ಮೇ 6ರಂದು ಮದುವೆ ನೆರವೇರಿಸಲು ನಿರ್ಧರಿಸಿದರು. ಅದರಂತೆ ಮದುವೆಗೆ ಸ್ಥಳೀಯ ಆಡಳಿತದಿಂದ ಅನುಮತಿ ಅಂದು ಮಧ್ಯಾಹ್ನ 3.30ರಿಂದ ಸಂಜೆ 5.30ರವರೆಗೆ ಗುರುಗ್ರಾಮ್​ನಲ್ಲಿ ಮದುವೆ ನೆರವೇರಿತು. ಈ ಮದುವೆಯಲ್ಲಿ ವಧು-ವರ, ವಧುವಿನ ಪಾಲಕರು, ಫೋಟೋಗ್ರಾಫರ್ ಮತ್ತು ಪುರೋಹಿತರು ಮಾತ್ರವೇ ಭಾಗವಹಿಸಿದ್ದರು.

    ಇದನ್ನೂ ಓದಿರಿ ಗುಜರಾತ್​ಗೆ ಹೋಗಿ ಬಂದ 14 ತಬ್ಲಿಘಿ ಸೇರಿ 15 ಜನರಲ್ಲಿ ಸೋಂಕು, ಬೆಚ್ಚಿಬಿದ್ದ ಮುಧೋಳ

    ಬೆಂಗಳೂರು, ಚಂಡಿಗಢ, ಫರಿದಾಬಾದ್, ನೋಯಿಡಾ, ಜೈಪುರ, ಪುಣೆ, ಸಿಂಗಾಪುರ ಸೇರಿದಂತೆ ಇತರೆಡೆಯಿಂದ ಸುಮಾರು 35 ಸಂಬಂಧಿಕರು ಆನ್​ಲೈನ್​ ಮುಖಾಂತರ ಈ ಮದುವೆಯಲ್ಲಿ ಭಾಗವಹಿಸಿದ್ದರು. ಸಿಂಗಾಪುರದಲ್ಲಿರುವ ನನ್ನ ದೊಡ್ಡ ಮಗ, ಸೊಸೆ ಮತ್ತು ಮೊಮ್ಮಗ ಕೂಡ ವಿಡಿಯೋ ಕಾಲ್​ ಮುಖಾಂತರವೇ ಸಮೀರ್ ಮದುವೆ ಕಣ್ತುಂಬಿಕೊಂಡಿತು. ಚಿಕ್ಕಪ್ಪನ ಮದುವೆ ನೋಡಲು ನನ್ನ ಮೊಮ್ಮಗ ಪರದಗೆ ಅಂಟಿಕೊಂಡಿದ್ದ. ನಾವು ಕೂಡ ಮದುವೆ ಹೋಗಲು ಆಗಲಿಲ್ಲ ಎಂದು ಸಮೀರ್​ ತಾಯಿ ಕಿರಣ್ ವಿವರಿಸಿದರು.
    ನವಜೀವನಕ್ಕೆ ಕಾಲಿಟ್ಟ ದಂಪತಿಗೆ ಆನ್​ಲೈನ್​ನಲ್ಲೇ ವರನ ಪಾಲಕರು ಶುಭಕೋರಿದರು.

    ವಾಟ್ಸ್ಆ್ಯಪ್​ ವಿಡಿಯೋ ಕಾಲ್​ನಲ್ಲೇ ವರನ ತಾಯಿ ವಧುವನ್ನ ಮನೆ ತುಂಬಿಸಿಕೊಳ್ಳುವ ಶಾಸ್ತ್ರ ನೆರವೇರಿಸಿದರು. ಅತ್ತೆ ಆರತಿ ಮಾಡಿ ಮನೆಗೆ ಆಹ್ವಾನಿಸುತ್ತಿದ್ದ ವೇಳೆ ಸಹಜವಾಗಿ ಟೆನ್ಷನ್​ ಆಗಿದ್ದೆ. ಇದೊಂಥರಾ ಒಳ್ಳೆಯ ಅನುಭವ ಎಂದು ಆಯುಷಿ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿರಿ ತಬ್ಲಿಘಿಗಳ ಬೆನ್ನಿಗೆ ನಿಂತ ಸಿದ್ದರಾಮಯ್ಯ, ಸರ್ಕಾರದ ವಿರುದ್ಧ ಆಕ್ರೋಶ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts