More

    ಬೆಂಗಳೂರು ಮೆಟ್ರೋ: ಭೂಸ್ವಾಧೀನ ಬಹುತೇಕ ಪೂರ್ಣ

    ಬೆಂಗಳೂರು: ನಮ್ಮ ಮೆಟ್ರೋ 2ನೇ ಹಂತದ ಯೋಜನೆಗೆ ಭೂಮಿ ಸ್ವಾಧೀನ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದ್ದು, 3,075 ಆಸ್ತಿಗಳ ಪೈಕಿ 2,993 ಆಸ್ತಿಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನೂ ಕೇವಲ 82 ಆಸ್ತಿ ವಶಕ್ಕೆ ಪಡೆಯುವುದು ಬಾಕಿ ಉಳಿದಿದೆ.

    ಯೋಜನೆಯಡಿ 72 ಕಿ.ಮೀ. ಉದ್ದದ ಮಾರ್ಗ ನಿರ್ವಿುಸಲಾಗುತ್ತಿದೆ. ಇದಕ್ಕಾಗಿ 200 ಹೆಕ್ಟೇರ್ ಭೂಮಿಯ ಅವಶ್ಯಕತೆಯಿದ್ದು, ಅದರಲ್ಲಿ ಶೇ.99 ಭೂಸ್ವಾಧೀನ ಮಾಡಿಕೊಳ್ಳಲಾಗಿದೆ. ಉಳಿದ ಶೇ. 1 ಭಾಗದ ಭೂ ಸ್ವಾಧೀನ ಪ್ರಕ್ರಿಯೆ ಬಾಕಿ ಉಳಿದಿದ್ದು, ಶೀಘ್ರವೇ ಅದು ಪೂರ್ಣಗೊಳ್ಳಲಿದೆ. ಆದರೆ, ರಕ್ಷಣಾ ಇಲಾಖೆಗೆ ಸೇರಿದ ಭೂಮಿಗಳ ವಶವೇ ಸವಾಲಾಗಿ ಪರಿಣಮಿಸಿದೆ. 3,075 ಆಸ್ತಿಗಳ ಪೈಕಿ 2,993 ಆಸ್ತಿಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಆಸ್ತಿಗಳಲ್ಲಿ 2,768 ಆಸ್ತಿಗಳನ್ನು ಬಿಎಂಆರ್ ಸಿಎಲ್ ಇಂಜಿನಿಯರ್ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ.

    ಇದನ್ನೂ ಓದಿ: ಮೀನು ಮುಟ್ಟಿದ ಬಳಿಕ ಕೈ ನೋವೆಂದು ಆಸ್ಪತ್ರೆಗೆ ಹೋದ ವ್ಯಕ್ತಿ ವೈದ್ಯರ ಮಾತು ಕೇಳಿ ಕುಸಿದುಬಿದ್ದ!

    ಕೆಐಎ ಮಾರ್ಗದಲ್ಲೂ ಬಾಕಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಸಲುವಾಗಿ ಸಿಲ್ಕ್​ಬೋರ್ಡ್ ನಿಂದ ಕೆ.ಆರ್. ಪುರ (ಹೊರವರ್ತಲ ರಸ್ತೆ ಮಾರ್ಗ) ಮತ್ತು ಕೆ.ಆರ್. ಪುರದಿಂದ ವಿಮಾನ ನಿಲ್ದಾಣಕ್ಕೆ ಮಾರ್ಗ ನಿರ್ವಿುಸಲು ಯೋಜನೆ ರೂಪಿಸಲಾಗಿದೆ. ಅದರಲ್ಲಿ ಹೊರವರ್ತಲ ರಸ್ತೆ ಮಾರ್ಗಕ್ಕೆ ಬೇಕಿರುವ 87 ಆಸ್ತಿಗಳ ಪೈಕಿ 85 ಆಸ್ತಿಗಳನ್ನು ವಶಕ್ಕೆ ಪಡೆಯಲಾಗಿದೆ. ಅದೇ ರೀತಿ ಕೆ.ಆರ್. ಪುರದಿಂದ ವಿಮಾನ ನಿಲ್ದಾಣಕ್ಕೆ ಮಾರ್ಗಕ್ಕೆ 289 ಆಸ್ತಿಗಳನ್ನು ಸ್ವಾಧೀನಕ್ಕೆ ಪಡೆಯಬೇಕಿದ್ದು, ಈವರೆಗೆ 238 ಆಸ್ತಿಗಳನ್ನು ವಶಕ್ಕೆ ಪಡೆಯಲಾಗಿದೆ.

    ಅಕ್ರಮ ಕಟ್ಟಡಗಳ ಸಕ್ರಮಕ್ಕೆ ಮುಂದಾದ ಬಿಡಿಎ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts