More

    ಬೆಂಗಳೂರು ಬುಲ್ಸ್‌ಗೆ ಹ್ಯಾಟ್ರಿಕ್ ಸೋಲು ; ಪುಣೇರಿ ಪಲ್ಟಾನ್‌ಗೆ ಶರಣಾದ ಪವತ್ ಶೇರಾವತ್ ಪಡೆ

    ಬೆಂಗಳೂರು: ರೈಡಿಂಗ್‌ನಲ್ಲಿ ಸತತವಾಗಿ ವೈಫಲ್ಯ ಅನುಭವಿಸಿದ ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್ ತಂಡ 8ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಹ್ಯಾಟ್ರಿಕ್ ಸೋಲು ಕಂಡಿತು. ಶನಿವಾರ ನಡೆದ ಪಂದ್ಯದಲ್ಲಿ ಅಂತಿಮ ಹಂತದಲ್ಲಿ ತಿರುಗೇಟು ನೀಡಿದರೂ ಕಡೇ ನಿಮಿಷದಲ್ಲಿ ನಾಯಕ ಪವನ್ ಶೇರಾವತ್ ಮಾಡಿದ ಎಡವಟ್ಟಿನಿಂದಾಗಿ ಬೆಂಗಳೂರು ತಂಡ 35-37 ಅಂಕಗಳಿಂದ ಪುಣೇರಿ ಪಲ್ಟಾನ್ ತಂಡದ ಎದುರು ಸೋಲನುಭವಿಸಿತು. ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶ ಹೊಂದಿದ್ದ ಬುಲ್ಸ್ ತಂಡ ಮತ್ತೊಮ್ಮೆ ಆಘಾತ ಕಂಡಿತು.

    ಆರಂಭಿಕ ನಿಮಿಷಗಳಿಂದಲೂ ಹಿನ್ನಡೆ ಅನುಭವಿಸಿದ ಬೆಂಗಳೂರು ತಂಡ ಮೊದಲಾರ್ಧದಲ್ಲಿ 15-16 ರಿಂದ ಹಿನ್ನಡೆಯಲ್ಲಿ ಉಳಿಯಿತು. ಎರಡನೇ ಅವಧಿಯ ಆರಂಭದಲ್ಲೇ ಆಲೌಟ್ ಆದ ಬುಲ್ಸ್ ಸರಾಸರಿ 6 ಅಂಕಗಳ ಹಿನ್ನಡೆ ಕಂಡಿತು. ಬುಲ್ಸ್ ತಂಡದ ನಾಯಕ ಪವತ್ ಶೇರಾವತ್‌ಗೆ ಸತತವಾಗಿ ಕಡಿವಾಣ ಹಾಕಿ ಪುಣೆ ಆಟಗಾರರು ಮೇಲುಗೈ ಸಾಧಿಸಿದರು. ಸುಮಾರು 18 ನಿಮಿಷಗಳ ಕಾಲ ಪವನ್ ಶೇರಾವತ್ ಕೋರ್ಟ್‌ನಿಂದ ಹೊರಗುಳಿದಿದ್ದರು. ಪುಣೆ ಪರ ಮೋಯಿತ್ ಮೊಯತ್ 13 ಅಂಕಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

    * ಟೈಟಾನ್ಸ್ ತಂಡಕ್ಕೆ 9ನೇ ಸೋಲು
    ಯು ಮುಂಬಾ ಅಬ್ಬರದ ಎದುರು ಸಂಪೂರ್ಣ ಮಂಕಾದ ತೆಲುಗು ಟೈಟಾನ್ಸ್ ತಂಡ ಲೀಗ್‌ನಲ್ಲಿ 9ನೇ ಸೋಲು ಕಂಡಿತು. ಸ್ಟಾರ್ ರೈಡರ್ ಅಭಿಷೇಕ್ ಸಿಂಗ್ (15ಅಂಕ) ಭರ್ಜರಿ ರೈಡಿಂಗ್ ಲವಾಗಿ ಮುಂಬೈ ತಂಡ 42-35 ಅಂಕಗಳಿಂದ ಟೈಟಾನ್ಸ್ ತಂಡವನ್ನು ಮಣಿಸಿತು. ಸತತ ನಾಲ್ಕು ಪಂದ್ಯಗಳಲ್ಲಿ ಜಯ ಕಾಣದೆ ನಿರಾಸೆ ಅನುಭವಿಸಿದ್ದ ಮುಂಬೈ ತಂಡ ಗೆಲುವಿನ ಹಳಿಗೇರಿದರೆ, 10ನೇ ಪಂದ್ಯದಲ್ಲಿ ಮೊದಲ ಜಯ ಕಂಡಿದ್ದ ಟೈಟಾನ್ಸ್ ಮತ್ತೆ ಸೋಲಿನ ನಿರಾಸೆ ಕಂಡಿತು. ದಿನದ ಮತ್ತೊಂದು ಪಂದ್ಯದಲ್ಲಿ ತಮಿಳ್ ತಲೈವಾಸ್ ಹಾಗೂ ಜೈಪುರ ಪಿಂಕ್‌ಪ್ಯಾಂಥರ್ಸ್‌ ನಡುವಿನ ಪಂದ್ಯ ತಲಾ 34 ಅಂಕಗಳಿಂದ ಸಮಬಲಗೊಂಡಿತು.

    ಇಂದಿನ ಪಂದ್ಯಗಳು
    ಯುಪಿ ಯೋಧಾ-ಹರಿಯಾಣ ಸ್ಟೀಲರ್ಸ್‌
    ಆರಂಭ: ರಾತ್ರಿ 7.30

    ತೆಲುಗು ಟೈಟಾನ್ಸ್- ಬೆಂಗಳೂರು ಬುಲ್ಸ್
    ಆರಂಭ: ರಾತ್ರಿ 8.30

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts