More

    ನಾಲ್ಕರ ಘಟ್ಟಕ್ಕೆ ಲಗ್ಗೆ ಹಾಕಿದ ಹರಿಯಾಣ: ಗುಜರಾತ್‌ ಭರ್ಜರಿ ಗೆಲುವು

    ಹೈದರಾಬಾದ್‌: ವಿನಯ್‌, ಮೋಹಿತ್‌ ನಂದಲ್‌ ಮತ್ತು ಶಿವಂ ಪತಾರೆ ಅವರ ಸಮಯೋಚಿತ ಆಟದಿಂದ ಹರಿಯಾಣ ಸ್ಟೀಲರ್ಸ್‌ ತಂಡ ಪ್ರೊ ಕಬಡ್ಡಿ ಲೀಗ್‌ 10ನೇ ಆವೃತ್ತಿಯ ಎರಡನೇ ಎಲಿಮಿನೇಟರ್‌ ಪಂದ್ಯದಲ್ಲಿಗುಜರಾತ್‌ ಜಯಂಟ್ಸ್‌ ತಂಡವನ್ನು 17 ಅಂಕಗಳಿಂದ ಸೋಲಿಸಿ ನಾಲ್ಕನೇ ತಂಡವಾಗಿ ಸೆಮಿಫೈನಲ್ಸ್‌ ಪ್ರವೇಶಿಸಿದೆ.

    ಹರಿಯಾಣ ಸ್ಟೀಲರ್ಸ್‌ ಫೆಬ್ರವರಿ 28ರಂದು ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿಅಂಕಪಟ್ಟಿಯ ಎರಡನೇ ಸ್ಥಾನಿ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡದ ಸವಾಲನ್ನು ಎದುರಿಸಲಿದೆ. ಗಚ್ಚಿಬೌಲಿ ಬಾಳೇವಾಡಿ ಕ್ರೀಡಾ ಸಂಕೀರ್ಣದಲ್ಲಿಸೋಮವಾರ ನಡೆದ 2ನೇ ಪಂದ್ಯದಲ್ಲಿಅಧಿಕಾರಯುತ ಪ್ರದರ್ಶನ ತೋರಿದ ಹರಿಯಾಣ 42- 25 ಅಂಕಗಳ ಅಂತರದಿಂದ ಗುಜರಾತ್‌ ತಂಡವನ್ನು ಸೋಲಿಸಿತು.

    ಸ್ಟೀಲರ್ಸ್‌ ಪರ ವಿನಯ್‌ 12 ಅಂಕ ಗಳಿಸಿದರೆ, ಮೋಹಿತ್‌ ಮತ್ತು ಶಿವಂ ಕ್ರಮವಾಗಿ 7 ಮತ್ತು 8 ಅಂಕ ಗಳಿಸಿ ಗೆಲುವಿನ ರೂವಾರಿಯೆನಿಸಿದರು. ಅತ್ತ ಪಂದ್ಯದ ಆರಂಭದಿಂದಲೂ ಸಂಘಟಿತ ಹೋರಾಟ ನೀಡಲು ವಿಫಲಗೊಂಡ ಗುಜರಾತ್‌ ಪರ ಪರ್ತೀಕ್‌ ದಹಿಯಾ ಮತ್ತು ರಾಕೇಶ್‌ ಮಾತ್ರ ತಲಾ 5 ಅಂಕ ಗಳಿಸಿದರು. 6 ಅಂಕಗಳ ಮುನ್ನಡೆಯೊಂದಿಗೆ 2ನೇ ಅವಧಿ ಆರಂಭಿಸಿದ ಹರಿಯಾಣ, ಸ್ಥಿರ ಆಟ ಮುಂದುವರಿಸಿತು. ರೇಡರ್‌ ವಿನಯ್‌, ಮೋಹಿತ್‌ ನಂದಲ್‌, ಶಿವಂ ಪತಾರೆ ತಂಡದ ಮುನ್ನಡೆಗೆ ನಿರಂತರ ನೆರವಾದರು. ಹೀಗಾಗಿ ಪಂದ್ಯ ಸಾಗಿದಂತೆ ಗುಜರಾತ್‌ 10 ಅಂಕಗಳ ಹಿನ್ನಡೆಗೆ ಗುರಿಯಾಯಿತು. 20ರಿಂದ 30 ನಿಮಿಷಗಳ ಅವಧಿಯಲ್ಲಿಹರಿಯಾಣ ತಂಡ 16 ಅಂಕ ಕಲೆಹಾಕಿದರೆ, ಗುಜರಾತ್‌ 13 ಅಂಕಗಳನ್ನು ಗಳಿಸಲಷ್ಟೇ ಶಕ್ತಗೊಂಡಿತು. 22 ಮತ್ತು 30ನೇ ನಿಮಿಷದಲ್ಲಿಜಯಂಟ್ಸ್‌ ತಂಡವನ್ನು ಆಲೌಟ್‌ ಮಾಡಿದ್ದು ಹರಿಯಾಣ ಮುನ್ನಡೆಗೆ ಬಲ ತಂದಿತು. ದ್ವಿತೀಯಾರ್ಧದ ಆರಂಭದಲ್ಲಿಡಿಫೆಂಡರ್‌ಗಳಾದ ಫಜಲ್‌ ಮತ್ತು ಮೊಹಮ್ಮದ್‌ ನಬಿಬû… ಅವರನ್ನು ಔಟ್‌ ಮಾಡಿದ ರೇಡರ್‌ ವಿನಯ್‌ ಹರಿಯಾಣದ ಮೇಲುಗೈಗೆ ಕಾರಣರಾದರು. ರೇಡಿಂಗ್‌ ಮತ್ತು ಟ್ಯಾಕಲ್‌ ಎರಡರಲ್ಲೂಸಮರ್ಥ ಆಟ ಪ್ರದರ್ಶಿಸಿದ ಹರಿಯಾಣ ಸ್ಟೀಲಸ್‌ ತಂಡ ಪಂದ್ಯದ ಪ್ರಥಮಾರ್ಧಕ್ಕೆ 21-16 ಅಂಕಗಳಿಂದ ಗುಜರಾತ್‌ ಜಯಂಟ್ಸ್‌ ವಿರುದ್ಧ ಮೇಲುಗೈ ಸಾಧಿಸಿತು.

    ಉಭಯ ತಂಡಗಳು ತಲಾ ಒಮ್ಮೆ ಆಲೌಟ್‌ಗೆ ಗುರಿಯಾದವು. ಆದಾಗ್ಯೂ ರೇಡಿಂಗ್‌ ಮತ್ತು ಟ್ಯಾಕಲ್‌ನಲ್ಲಿಕ್ರಮವಾಗಿ 10 ಮತ್ತು 7 ಅಂಕ ಗಳಿಸಿದ ಹರಿಯಾಣ ತಂಡ, ಆಲೌಟ್‌ನಲ್ಲಿ2 ಮತ್ತು ಇತರ ವಿಭಾಗದಲ್ಲಿ2 ಅಂಕ ಗಳಿಸಿದರು. ಹಾಗೆಯೇ ಗುಜರಾತ್‌ ತಂಡ ದಾಳಿಯಲ್ಲಿ10 ಅಂಕ ಕಲೆಹಾಕಿದರೆ, ಟ್ಯಾಕಲ್‌, ಆಲೌಟ್‌ ಮತ್ತು ಇತರ ವಿಭಾಗ ಸೇರಿ ಕೇವಲ 6 ಅಂಕ ಗಿಟ್ಟಿಸಿತು. ಇದು ತಂಡದ ಹಿನ್ನಡೆಗೆ ಕಾರಣವಾಯಿತು. 8 ನಿಮಿಷಗಳ ಮುಕ್ತಾಯಕ್ಕೆ 8-3ರಲ್ಲಿಅಂತರ ಕಾಯ್ದುಕೊಂಡ ಹರಿಯಾಣ, 14ನಿಮಿಷದ ವೇಳೆಗೆ 14-12ರಲ್ಲಿ ಪ್ರತಿರೋಧ ಎದುರಿಸಿತು.

    ಫೆಬ್ರವರಿ 28ರಂದು ಮೊದಲ ಸೆಮಿಫೈನಲ್‌ನಲ್ಲಿ ಪುಣೇರಿ ಪಲ್ಟನ್‌ – ಪಟನಾ ಪೈರೇಟ್ಸ್‌ ಹಾಗೂ ದ್ವಿತೀಯ
    ಸೆಮಿಫೈನಲ್‌ನಲ್ಲಿಜೈಪುರ ಪಿಂಕ್‌ ಪ್ಯಾಂಥರ್ಸ್‌ – ಹರಿಯಾಣ ಸ್ಟೀಲರ್ಸ್‌ ಮುಖಾಮುಖಿಯಾಗಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts