More

    ಅಗ್ರಸ್ಥಾನ ಭದ್ರಪಡಿಸಿಕೊಂಡ ಜೈಪುರ ಪಿಂಕ್‌ ಪ್ಯಾಂಥರ್ಸ್: ‌16ನೇ ಬಾರಿ ಅರ್ಜುನ್‌ ಸೂಪರ್‌ 10

    ಪಂಚಕುಲ: ದಾಖಲೆಯ 16ನೇ ಬಾರಿ ಸೂಪರ್10 ಅಂಕ ಗಳಿಸಿದ ರೇಡರ್ಅರ್ಜುನ್ದೇಶ್ವಾಲ್(13 ಅಂಕ) ಅವರ ಬಲದಿಂದ ಮಿಂಚಿದ ಜೈಪುರ ಪಿಂಕ್ಪ್ಯಾಂಥರ್ಸ್ತಂಡ ಪ್ರೊ ಕಬಡ್ಡಿ ಲೀಗ್10ನೇ ಆವೃತ್ತಿಯ ತನ್ನ ಅಂತಿಮ ಲೀಗ್ಪಂದ್ಯದಲ್ಲಿಗುಜರಾತ್ಜೈಂಟ್ಸ್ವಿರುದ್ಧ 9 ಅಂಕಗಳಿಂದ ಭರ್ಜರಿ ಜಯ ದಾಖಲಿಸಿತು.

    ತೌವ್ದೇವಿಲಾಲ್ಒಳಾಂಗಣ ಕ್ರೀಡಾಂಗಣದಲ್ಲಿಸೋಮವಾರ ನಡೆದ ಪಂದ್ಯದಲ್ಲಿಜೈಪುರ ತಂಡ 45-36 ಅಂಕಗಳಿಂದ ಗುಜರಾತ್ತಂಡಕ್ಕೆ ಸೋಲುಣಿಸಿತು. ಇದರೊಂದಿಗೆ ಆಡಿದ 22 ಪಂದ್ಯಗಳಲ್ಲಿ16 ಗೆಲುವು ದಾಖಲಿಸಿದ ಪ್ಯಾಂಥರ್ಸ್ಒಟ್ಟು 92 ಅಂಕಗಳನ್ನು ಕಲೆಹಾಕಿ ಅಂಕಪಟ್ಟಿಯಲ್ಲಿಅಗ್ರಸ್ಥಾನಿಯಾಗಿ ಲೀಗ್ಹಂತವನ್ನು ಪೂರ್ಣಗೊಸಿತು. ಅತ್ತ ಕೊನೆಯ ಲೀಗ್ಪಂದ್ಯದಲ್ಲಿಸೋತ ಗುಜರಾತ್ನೇರವಾಗಿ ಸೆಮಿಫೈನಲ್ಸ್ಪ್ರವೇಶಿಸುವಲ್ಲಿ ವಿಫಲಗೊಂಡಿತು. ಗುಜರಾತ್ಪರ ಪರ್ತೀಕ್ದಹಿಯಾ 14 ಅಂಕ ಗಳಿಸಿದರೆ, ದೀಪಕ್6 ಅಂಕ ಗಳಿಸಿದರು. ಜೈಪುರ

    ಭಾರಿ ಮುನ್ನಡೆಯೊಂದಿಗೆ ದ್ವಿತೀಯಾರ್ಧ ಆರಂಭಿಸಿದ ಪ್ಯಾಂಥರ್ಸ್, ಆತ್ಮವಿಶ್ವಾಸದಿಂದಲೇ ಹಿಂದಿನ ಲಯವನ್ನು ಮುಂದುವರಿಸಿತು. ಇದರ ಫಲವಾಗಿ 28ನೇ ನಿಮಿಷದಲ್ಲಿಮೂರನೇ ಬಾರಿ ಗುಜರಾತ್ಜೈಂಟ್ಸ್ತಂಡವನ್ನು ಆಲೌಟ್ಮಾಡಿದ ಪಿಂಕ್ಪ್ಯಾಂಥರ್ಸ್ಮುನ್ನಡೆಯ ಅಂತರವನ್ನು 15ಕ್ಕೂ ಹೆಚ್ಚು ಅಂಕಗಳಿಗೆ ವಿಸ್ತರಿಸಿಕೊಂಡಿತು.

    30ನೇ ನಿಮಿಷಕ್ಕೆ 21-38ರಲ್ಲಿಗುಜರಾತ್ಪುಟಿದೇಳುವ ಸಾಹಸ ನಡೆಸಿತು. ಪಂದ್ಯದುದ್ದಕ್ಕೂ ಏಕಾಂಗಿ ಹೋರಾಟ ನಡೆಸಿದ ಪರ್ತೀಕ್ಚುರುಕಿನ ರೇಡಿಂಗ್ನಡೆಸಿ ನಿಯಮಿತವಾಗಿ ಅಂಕ ತಂದರು. ಇದರ ಫಲವಾಗಿ 32ನೇ ನಿಮಿಷದಲ್ಲಿಮೊದಲ ಬಾರಿ ಜೈಪುರ ತಂಡವನ್ನು ಆಲೌಟ್ಮಾಡಿದ ಗುಜರಾತ್, ಸುಲಭವಾಗಿ ಸೋಲು ಒಪ್ಪಿಕೊಳ್ಳದಿರುವಂತೆ ತೋರಿತು. ಪರ್ತೀಕ್ಹೋರಾಟಕ್ಕೆ ದೀಪಕ್ಸಿಂಗ್ಕೂಡ ಕೈಜೋಡಿಸಿದರು. ಇದು ಗುಜರಾತ್ತಂಡದ ಹಿನ್ನಡೆಯನ್ನು 32-43ಕ್ಕೆ ತಗ್ಗಿಸಿತು. ಇದೇ ವೇಳೆ ಪರ್ತೀಕ್ದಹಿಯಾ ತಮ್ಮ ಒಟ್ಟಾರೆ ರೇಡಿಂಗ್ಪಾಯಿಂಟ್ಸ್ಗಳ ದಾಖಲೆಯನ್ನು 300 ಗಡಿ ದಾಟಿಸಿದರು. ಆದರೆ ಆದಾಗಲೇ ಗೆಲುವಿನ ಸನಿಹದಲ್ಲಿದ್ದ ಪಿಂಕ್ಪ್ಯಾಂಥರ್ಸ್ರಕ್ಷ ಣಾತ್ಮಕ ಆಟಕ್ಕೆ ಆದ್ಯತೆ ನೀಡುವ ಮೂಲಕ ತನ್ನ ಅಗ್ರಪಟ್ಟವನ್ನು ಮತ್ತಷ್ಟು ಭದ್ರಪಡಿಸಿಕೊಂಡಿತು.

    ಅರ್ಜುನ್ದೇಶ್ವಾಲ್ಮತ್ತು ಶುಭಂ ಶೆಲ್ಕೆ ಅವರ ಅತ್ಯುತ್ತಮ ಆಟದ ಬಲದಿಂದ ಜೈಪುರ ಪಿಂಕ್ಪ್ಯಾಂಥರ್ಸ್ಪಂದ್ಯದ ಮೊದಲ ಅವಧಿಯ ಮುಕ್ತಾಯಕ್ಕೆ 28-14 ಅಂಕಗಳಿಂದ ಮೇಲುಗೈ ಸಾಧಿಸಿತು.

    ಪಂದ್ಯದ ಆರಂಭದಿಂದಲೇ ರೇಡಿಂಗ್ಮತ್ತು ಟ್ಯಾಕಲ್ನಲ್ಲಿಕೌಶಲ್ಯಯುತ ಆಟ ಪ್ರದರ್ಶಿಸಿದ ಲೀಗ್ಲೀಡರ್ಪ್ಯಾಂಥರ್ಸ್ಎದುರಾಳಿ ತಂಡದ ಮೇಲೆ ಒತ್ತಡ ಹೇರಿತು. ಕೇವಲ ಪಂದ್ಯ ಆರಂಭವಾಗಿ ಮೂರನೇ ನಿಮಿಷದಲ್ಲಿಗುಜರಾತ್ಜಯಂಟ್ಸ್ತಂಡವನ್ನು ಆಲೌಟ್ಮಾಡಿ ಜೈಪುರ ಆಟಗಾರರು, ವಿರಾಮದವರೆಗೂ ಮೇಲುಗೈ ಸಾಧಿಸಿದರು.

    ಸೂಪರ್ರೇಡ್ನಲ್ಲಿಕಂಗೊಳಿಸಿದ ಪ್ಯಾಂಥರ್ಸ್17ನೇ ನಿಮಿಷದಲ್ಲಿಮತ್ತೊಮ್ಮೆ ಗುಜರಾತ್ತಂಡವನ್ನು ಕಟ್ಟಿಹಾಕುವ ಮೂಲಕ ವಿರಾಮಕ್ಕೆ 14 ಅಂತರ ಕಾಯ್ದುಕೊಳ್ಳುವಲ್ಲಿಯಶಸ್ವಿಯಾಯಿತು. ಜೈಯಂಟ್ಸ್ಮೊದಲ ಅವಧಿಯಲ್ಲಿರೇಡಿಂಗ್ವಿಭಾಗದಲ್ಲಿ12 ಅಂಕ ಗಳಿಸಿದರೆ, ಪ್ಯಾಂಥರ್ಸ್17 ಅಂಕ ಕಲೆಹಾಕಿದ್ದು, ತಂಡದ ಆಕ್ರಮಣಕಾರಿ ಆಟಕ್ಕೆ ಸಾಕ್ಷಿಯಾಯಿತು.

    ಫೆಬ್ರವರಿ 20ರಂದು ಯು ಮುಂಬಾ ಮತ್ತು ತೆಲುಗು ಟೈಟನ್ಸ್ತಂಡಗಳು ಪೈಪೋಟಿ ನಡೆಸಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts