More

    ‘ಬೆಂಗಳೂರು ಕಂಬಳ’: ಸಂಘಟಕರು ಪಾವತಿಸಿದ ಒಟ್ಟು ದಂಡದ ಮೊತ್ತಯಿಷ್ಟು!

    ಬೆಂಗಳೂರು: ನವೆಂಬರ್ 25 ಮತ್ತು 26 ರಾಜ್ಯ ರಾಜಧಾನಿಯಲ್ಲಿ ತುಳುನಾಡ ಸಂಪ್ರದಾಯದ ಕಂಬಳ ಉತ್ಸವವನ್ನು ‘ಬೆಂಗಳೂರು ಕಂಬಳ’ ಎಂಬ ಶೀರ್ಷಿಕೆಯಡಿ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮ ನಗರದಲ್ಲಿ ಅದ್ದೂರಿಯಾಗಿ ನೆರವೇರಿದ್ದು, ಕೋಣಗಳ ಓಟ ಕಂಡು ರಾಜ್ಯದ ಜನರು ಅತೀವ ಸಂತಸಗೊಂಡರು. ಆದ್ರೆ, ಇತ್ತೀಚೆಗೆ ಬಿಬಿಎಂಪಿ ಕಂಬಳ ಸಂಘಟಕರಿಗೆ ದಂಡ ವಿಧಿಸಿದ್ದು, 50,000 ರೂ. ಹಣ ಪಾವತಿ ಮಾಡಲು ತಿಳಿಸಿದೆ.

    ಇದನ್ನೂ ಓದಿ: ಸೋಮವಾರ ಬೆಳಗಾವಿ ಸುವರ್ಣಸೌಧ ಮುತ್ತಿಗೆ – ವಿವಿಧ ಬೇಡಿಕೆಗಳ ಈಡೇರಿಕೆಗೆ ರೈತ ಸಂಘ ಒತ್ತಾಯ

    ಕಳೆದ ವಾರ ಬೆಂಗಳೂರಿನ ಮೇಕ್ರಿ ವೃತ್ತದ ಅರಮನೆ ಮೈದಾನದ ಆವರಣದಲ್ಲಿ ಅಕ್ರಮ ಫ್ಲೆಕ್ಸ್ ಬ್ಯಾನರ್ ಪ್ರದರ್ಶಿಸಿದ ಆರೋಪದ ಮೇಲೆ ನಗರದ ಮೊದಲ ಕಂಬಳ ಕಾರ್ಯಕ್ರಮದ ಆಯೋಜಕರಿಗೆ ಬಿಬಿಎಂಪಿ 50,000 ರೂಪಾಯಿ ದಂಡ ವಿಧಿಸಿದೆ. ಕಂದಾಯ ನಿರೀಕ್ಷಕ ಕೆ. ಸಿದ್ದಗಂಗಯ್ಯ ಅವರ ದೂರಿನ ಮೇರೆಗೆ ಕರ್ನಾಟಕ ಬಯಲು ಬಹಿರ್ದೆಸೆ ವಿರೂಪ ಕಾಯ್ದೆಯಡಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಕಂಬಳ ಸಂಘಟಕರು ಮೇಕ್ರಿ ವೃತ್ತ ಹಾಗೂ ಬಳ್ಳಾರಿ ರಸ್ತೆಯಲ್ಲಿ ಫ್ಲೆಕ್ಸ್, ಬ್ಯಾನರ್‌ಗಳನ್ನು ಹಾಕಿರುವುದು ತಿಳಿದು ಬಂದಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು. ಕಳೆದ ನವೆಂಬರ್ 25 ರಂದು ಸಂಘಟಕರಿಗೆ 50,000 ರೂ ದಂಡವನ್ನು ವಿಧಿಸಲಾಗಿದೆ. ಅವರು ಬಿಬಿಎಂಪಿ ಮುಖ್ಯ ಆಯುಕ್ತರ ಬ್ಯಾಂಕ್ ಖಾತೆಗೆ ಪಾವತಿಸಬೇಕು ಎಂದು ಅರಮನೆ ನಗರ ವಾರ್ಡ್ ಅಧಿಕಾರಿಗಳು ಹೇಳಿದ್ದಾರೆ,(ಏಜೆನ್ಸೀಸ್).

    ಟಿ-20 ವಿಶ್ವಕಪ್‌ 2024: ಕ್ಯಾಪ್ಟನ್ ಆಗಿ ರೋಹಿತ್​ ಮುಂದುವರಿಕೆ?; ಸೌರವ್ ಗಂಗೂಲಿ ಅನಿಸಿಕೆ ಹೀಗಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts