More

    ಆ. 6ರಂದು ಜಿ.ಎನ್.ರಂಗನಾಥ ರಾವ್​ರ “ಆ ಪತ್ರಿಕೋದ್ಯಮ” ಪುಸ್ತಕ ಬಿಡುಗಡೆ

    ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯುಜೆ)ದಲ್ಲಿ ಆ.6ಕ್ಕೆ ಜಿ.ಎನ್.ರಂಗನಾಥ ರಾವ್ ಅವರ “ಆ ಪತ್ರಿಕೋದ್ಯಮ” ಪುಸ್ತಕ ಬಿಡುಗಡೆಯಾಗಲಿದೆ.

    ಸುದ್ದಿಮನೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ಜಿ.ಎನ್.ರಂಗನಾಥ ರಾವ್ ಹೆಸರು ಎಲ್ಲರಿಗೂ ಚಿರಪರಿಚಿತವಾದದ್ದೆ. ಪ್ರಜಾವಾಣಿ ಪತ್ರಿಕೆಯಲ್ಲಿ ನಾನಾ ಹಂತದಲ್ಲಿ ಹಲವು ಹುದ್ದೆ ನಿಭಾಯಿಸಿದ್ದಲ್ಲದೆ, ಅದೇ ಪತ್ರಿಕೆಯಲ್ಲಿ ಆರು ವರ್ಷ ಸಂಪಾದಕರಾಗಿ ಕೆಲಸ ಮಾಡಿದ ಹೆಗ್ಗಳಿಕೆ ಜಿ.ಎನ್.ರಂಗನಾಥ ರಾವ್ ಅವರದು. ಕೆಯುಡಬ್ಲ್ಯೂಜೆ ಜತೆಗೆ ಸುದೀರ್ಘ ಒಡನಾಟ ಇಟ್ಟಕೊಂಡಿದ್ದ ಅವರು ಬಹುಕಾಲ ಸಂಘದ ಸಕ್ರೀಯ ಸದಸ್ಯರು ಆಗಿದ್ದರು.

    ರಂಗನಾಥ ರಾವ್ ಅವರು ಬರೆದಿರುವ ‘ಆ ಪತ್ರಿಕೋದ್ಯಮ’ ಪುಸ್ತಕವನ್ನು ಬಹುರೂಪಿ ಪ್ರಕಾಶನ ಹೊರ ತಂದಿದ್ದು, ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಸಭಾಂಗಣದಲ್ಲಿ 6.8.2022 ರಂದು ಶನಿವಾರ ಬೆಳಿಗ್ಗೆ 11 ಕ್ಕೆ ಏರ್ಪಡಿಸಲಾಗಿದೆ. ಖ್ಯಾತ ವಿಮರ್ಶಕ ಪ್ರೊ.ಸಿ.ಎನ್.ರಾಮಚಂದ್ರನ್ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ.

    ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಲಿದ್ದು, ದೂರದರ್ಶನದ ಹಿರಿಯ ಕಾರ್ಯಕ್ರಮ ನಿರ್ವಾಹಕಿ ಎಚ್.ಎನ್.ಆರತಿ, ಬಹುರೂಪಿ ಪ್ರಕಾಶನದ ಜಿ.ಎನ್.ಮೋಹನ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

    ಆ. 6ರಂದು ಜಿ.ಎನ್.ರಂಗನಾಥ ರಾವ್​ರ "ಆ ಪತ್ರಿಕೋದ್ಯಮ" ಪುಸ್ತಕ ಬಿಡುಗಡೆ

    ಉಪರಾಷ್ಟ್ರಪತಿ ಚುನಾವಣೆ: ಮತದಾನ ಆರಂಭ, ಹಕ್ಕು ಚಲಾಯಿಸಿದ ಪ್ರಧಾನಿ ಮೋದಿ

    ಸಿಎಂ ಬಸವರಾಜ ಬೊಮ್ಮಾಯಿಗೆ ಕರೊನಾ ಪಾಸಿಟಿವ್​: ಕೊನೇ ಕ್ಷಣದಲ್ಲಿ ದೆಹಲಿ ಪ್ರವಾಸ ರದ್ದು

    ಬೆಳಗಾವಿ ಜಿಲ್ಲಾಧಿಕಾರಿ ನಿವಾಸದ ಹಿಂಬದಿಯ ಕ್ವಾರ್ಟರ್ಸ್​ ​ನಲ್ಲಿ ಕಾಣಿಸಿಕೊಂಡ ಚಿರತೆ: ಜನರಲ್ಲಿ ಹೆಚ್ಚಿದ ಆತಂಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts