More

    ಬೆಂಗಳೂರಿಗರಿಗೆ ಕರೊನಾ ಕಲಿಸುತ್ತಿದೆ ವಿಚಿತ್ರ ನೈತಿಕತೆ ಪಾಠ!

    ಬೆಂಗಳೂರು: ಹಣವೆಂದರೆ ಹೆಣವು ಬಾಯ್ಬಿಡುತ್ತದೆ ಎಂಬ ಮಾತಿದೆ. ಆದರೆ, ಈ ಕರೊನಾ ವೈರಸ್​ ಎಂಬ ಗುಮ್ಮ ಬಂದಾಗಿನಿಂದ ಹಣ ಕಂಡರೆ ಜನ ದೂರ ದೂರ ಎಂಬಂತಾಗಿದೆ.

    ಹೌದು, ರಸ್ತೆಯಲ್ಲಿ ಹಣ ಬಿದ್ದಿದ್ದರೆ ಮಿಂಚಿನ ವೇಗದಲ್ಲಿ ತಮ್ಮ ಜೇಬಿಗೆ ಇಳಿಸುವ ಜನ ಇದೀಗ ಕರೊನಾ ಕಾರಣದಿಂದ ಕೊಂಚ ಬದಲಾಗಿದ್ದರೆ. ರಸ್ತೆಯಲ್ಲಿ ಹಣ ಬಿದ್ದಿದ್ದರು ಅದನ್ನು ಮುಟ್ಟಿಯೂ ನೋಡದ ಅನೇಕ ಉದಾಹರಣೆಗಳನ್ನು ಈಗಾಗಲೇ ನೋಡಿದ್ದೇವೆ. ಇಂಥದ್ದೆ ಪ್ರಕರಣ ರಾಜ್ಯ ರಾಜಧಾನಿಯಲ್ಲೂ ನಡೆದಿದೆ.

    ಇದನ್ನೂ ಓದಿ: ತುಂಬಾ ಆಸೆಯಿಂದ ವಿದೇಶ ಪ್ರವಾಸಕ್ಕೆ ಹೋಗಿದ್ದ ನವದಂಪತಿಗೆ ಹೀಗಾಗಬಾರದಿತ್ತು…

    ರಸ್ತೆಯಲ್ಲಿ ಬಿದ್ದಿದ್ದ ನೋಟು ಕಂಡು ವಾಕಿಂಗ್​ ಬಂದ ಜನ ಬೆಚ್ಚಿಬಿದ್ದಿದ್ದಾರೆ. ನಗರದ ಕುಮಾರಪಾರ್ಕ್ ರೈಲ್ವೆ ಸಮಾನಂತರ ರಸ್ತೆಯಲ್ಲಿ ಇಂದು ಸಂಜೆ ಪ್ರಸಂಗ ಜರುಗಿದೆ. ಕಣ್ಣೆದುರಿಗೆ ಗರಿ ಗರಿ ನೋಟಿದ್ದರೂ ಕರೊನಾ ಭೀತಿಯಿಂದ ಅದನ್ನು ಮುಟ್ಟದೇ ಪೊಲೀಸರಿಗೆ ಒಪ್ಪಿಸಲು ‌ನಿರ್ಧರಿಸಿ, ಕರೆ ಮಾಡಿ ಮಾಹಿತಿ ನೀಡಿದ್ದಾರೆ.

    ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಶೇಷಾದ್ರಿಪುರಂ ಪೊಲೀಸರು ದುಡ್ಡು ಕಳೆದುಕೊಂಡಿದ್ದ ದಂಪತಿಗೆ ಹಣ ನೀಡಿದ್ದಾರೆ. ಇದರಿಂದ ಆತಂಕ ದೂರಾಗಿ ಕಮಾರಪಾರ್ಕ್​ ಜನ ನಿಟ್ಟುಸಿರು ಬಿಟ್ಟಿದ್ದಾರೆ. ಒಟ್ಟಾರೆ ಹೇಳ್ಬೇಕೆಂದ್ರೆ ಕರೊನಾ ಬೆಂಗಳೂರಿಗರಿಗೆ ವಿಚಿತ್ರ ನೈತಿಕತೆ ಪಾಠವನ್ನು ಕಲಿಸುತ್ತಿದೆ. (ದಿಗ್ವಿಜಯ ನ್ಯೂಸ್​)

    ಇದನ್ನೂ ಓದಿ: ಕರೊನಾ ಶಂಕಿತೆಗೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೇ ಹೈಡ್ರಾಮ ಸೃಷ್ಟಿಸಿ ಪೇದೆಗಳಿಬ್ಬರು ಪರಾರಿ

    ಸಿಲಿಕಾನ್​ ಸಿಟಿ ಮಂದಿಗೆ ಗುಡ್​ ನ್ಯೂಸ್​ ನೀಡಿದ ಪೊಲೀಸ್​ ಆಯುಕ್ತರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts